ಮಾಳ​ದಲ್ಲಿ ಕಾಳಿಂಗ ಮೈಥುನ, ಇಲ್ಲಿವೆ ಫೋಟೋಸ್

First Published | Apr 18, 2020, 8:54 AM IST

ಕಾಳಿಂಗ ಸರ್ಪಗಳೆರಡು ಕಾಡಿನಿಂದ ಹೊರಕ್ಕೆ ಬಂದು ಮಿಥುನ ಕ್ರಿಯೆಯಲ್ಲಿ ತೊಡಗಿಸಿಕೊಂಡ ದೃಶ್ಯ ತಾಲೂಕಿನ ಮಾಳ ಗ್ರಾಮದಲ್ಲಿ ಕಂಡುಬಂದಿದೆ. ಸಂಪತ್ ನಾಯಕ್ ಕಾರ್ಕಳ ಕ್ಲಿಕ್ಕಿಸಿದ ಫೋಟೋಸ್ ಇಲ್ಲಿವೆ.

ಮಾಳಗ್ರಾಮದ ಮುಳ್ಳೂರು ಗೇಟ್‌ ಸಮೀಪದ ಗಣೇಶ್‌ ಶೆಟ್ಟಿಗಾರ್‌ ಎಂಬುವರ ಮನೆ ಅಂಗಳದಲ್ಲಿ ಕಾಳಿಂಗ ಸರ್ಪಗಳೆರಡು ಮಿಥುನ ಕ್ರಿಯೆಯಲ್ಲಿ ತೊಡಗಿಕೊಂಡಿದ್ದವು.
ಈ ವೇಳೆ ಅವುಗಳ ಭುಸುಗುಡುವವಿಕæ ಗಮನಿಸಿದ ಮನೆಮಂದಿ ಕೂಡಲೇ ಉರಗ ತಜ್ಞ ಅನಿಲ್‌ ಪ್ರಭು ಅವರಿಗೆ ಮಾಹಿತಿ ನೀಡಿದ್ದಾರೆ.
Tap to resize

ಮಳೆ ಸುರಿದ ಪರಿಣಾಮ ವಾತಾವರಣ ತಂಪಾಗಿದ್ದು, ಇವುಗಳು ಇದೀಗ ದಟ್ಟಕಾಡಿನಿಂದ ಹೊರಕ್ಕೆ ಬರಲಾರಂಭಿಸಿದೆ.
ಮಾಳ ಮುಳ್ಳೂರು ಘಾಟಿ ಆಗುಂಬೆಗೆ ಸಂಪರ್ಕ ಹೊಂದಿರುವುದಿಂದ ಈ ಭಾಗದಲ್ಲಿ ಅವುಗಳ ಸಂಚಾರ ಕಂಡುಬಂದಿದೆ.
ಅನಿಲ್‌ ಪ್ರಭು ಸ್ಥಳಕ್ಕೆ ಅಗಮಿಸಿ ಜೋಡಿ ಕಾಳಿಂಗ ಹಾವನ್ನು ಸೆರೆಹಿಡಿದು ಕುದುರೆ ಮುಖ ಅಭಯಾರಣ್ಯಕ್ಕೆ ಬಿಟ್ಟಿದ್ದಾರೆ.
ಸುಮಾರು 12 ಅಡಿ ಉದ್ದದ ಗಂಡು ಸರ್ಪ ಹಾಗೂ 10 ಅಡಿ ಉದ್ದ ಹೆಣ್ಣು ಇತ್ತು.
ಕಾಳಿಂಗ ಸರ್ಪದ ವಿಡಿಯೋವನ್ನು ಸೆರೆ ಹಿಡಿಯಲಾಗಿದೆ.

Latest Videos

click me!