ಉಡುಪಿ(ಏ. 17) ಪ್ರಧಾನ ಮಂತ್ರಿ ಕೇಂದ್ರ ಪರಿಹಾರ ನಿಧಿಗೆ ಪರ್ಯಾಯ ಶ್ರೀ ಅದಮಾರು ಮಠ 55,05,555 ರೂ ದೇಣಿಗೆ ನೀಡಿದೆ. ಸದ್ಯ ಕೃಷ್ಣಮಠದಲ್ಲಿ ಪರ್ಯಾಯ ನಡೆಸುತ್ತಿರುವ ಅದಮಾರು ಮಠದ ಶ್ರೀಗಳು ದೇಣಿಗೆ ನೀಡಿದ್ದಾರೆ. ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಪರಿಹಾರದ ಚೆಕ್ ಹಸ್ತಾಂತರ ಮಾಡಲಾಗಿದೆ. ಅದಮಾರು ಮಠದ ಹಿರಿಯ ಯತಿ ವಿಶ್ವಪ್ರಿಯ ತೀರ್ಥರು ಚೆಕ್ ನೀಡಿದ್ದಾರೆ. ಪರ್ಯಾಯ ಮಠದ ಈಶಪ್ರಿಯ ತೀರ್ಥರು ಈ ಸಂದರ್ಭದಲ್ಲಿ ಹಾಜರಿದ್ದರು. ಆಹಾರದ ಸಮಸ್ಯೆ ಎದುರಿಸುತ್ತಿರುವವರಿಗೆ ಈಗಾಗಲೇ ಮಠ ಆಹಾರದ ಕಿಟ್ ನೀಡಿದೆ. ಶಾಸಕ ರಘುಪತಿ ಭಟ್, ಜಿಲ್ಲಾಧಿಕಾರಿ ಜಿ.ಜಗದೀಶ್, ಎಸ್ ಪಿ ವಿಷ್ಣುವರ್ಧನ್ ಈ ಸಂದರ್ಭದಲ್ಲಿ ಹಾಜರಿದ್ದರು. Udupi Admar Mutt donates 55 lakhs INR to coronavirus covid 19 relief fund. MP Shobha Karandlaje received the money. ಕೊರೋನಾ ವಿರುದ್ಧ ಹೋರಾಟ; ಉಡುಪಿ ಅದಮಾರು ಮಠದಿಂದ 55 ಲಕ್ಷ ರೂ. ದೇಣಿಗೆ ಪ್ರಧಾನ ಮಂತ್ರಿ ಕೇಂದ್ರ ಪರಿಹಾರ ನಿಧಿಗೆ ಪರ್ಯಾಯ ಶ್ರೀ ಅದಮಾರು ಮಠ 55,05,555 ರೂ ದೇಣಿಗೆ ನೀಡಿದೆ. ಸದ್ಯ ಕೃಷ್ಣಮಠದಲ್ಲಿ ಪರ್ಯಾಯ ನಡೆಸುತ್ತಿರುವ ಅದಮಾರು ಮಠದ ಶ್ರೀಗಳು ದೇಣಿಗೆ ನೀಡಿದ್ದಾರೆ.