ಲಾಕ್‌ಡೌನ್ ಬಳಿಕ ಕರಾವಳಿ ಜಿಲ್ಲೆಯಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ದೇವಸ್ಥಾನ, ಮಾಲ್ ಹಾಗೂ ಹೊಟೇಲ್‌ಗಳು ಸೋಮವಾರ ತೆರೆದುಕೊಂಡಿವೆ. ಆದರೆ ಮೊದಲ ದಿನ ಪ್ರಮುಖ ದೇವಸ್ಥಾನಗಳನ್ನು ಹೊರತುಪಡಿಸಿದರೆ, ಬೇರೆ ದೇವಸ್ಥಾನಗಳಲ್ಲಿ ಭಕ್ತರ ಸಂದಣಿ ಕಂಡುಬಂದಿಲ್ಲ. ಮಾಲ್ ಹಾಗೂ ಹೊಟೇಲ್‌ಗಳಲ್ಲಿ ಕೂಡ ಜನರ ಸ್ಪಂದನ ನೀರಸಲಾಗಿತ್ತು.
ಫೋರಂ ಫಿಜಾ ಮಾಲ್‌ನಲ್ಲಿ ಬಯೋ ಸ್ಯಾನಿಟೈಸರ್ ಅಳವಡಿಸಲಾಗಿದೆ. ದ್ವಾರದ ಮೂಲಕ ಹಾದುಹೋಗುವಾಗ ಸ್ವಯಂ ಆಗಿ ಸ್ಯಾನಿಟೈಸರ್ ಸಿಂಪರಣೆ ಆಗಲಿದೆ. ಮಾಲ್‌ಗಳಲ್ಲಿ ಸಿನಿಮಾ ಹಾಗೂ ಗೇಮ್ಸ್ ಹೊರತುಪಡಿಸಿ ಬೇರೆ ಎಲ್ಲ ವ್ಯಾಪಾರ ವಹಿವಾಟುಗಳು ಆರಂಭಗೊಂಡಿವೆ.
ಮೊದಲ ದಿನ ಪ್ರಮುಖ ದೇವಸ್ಥಾನಗಳನ್ನು ಹೊರತುಪಡಿಸಿದರೆ, ಬೇರೆ ದೇವಸ್ಥಾನಗಳಲ್ಲಿ ಭಕ್ತರ ಸಂದಣಿ ಕಂಡುಬಂದಿಲ್ಲ. ಮಾಲ್ ಹಾಗೂ ಹೊಟೇಲ್‌ಗಳಲ್ಲಿ ಕೂಡ ಜನರ ಸ್ಪಂದನ ನೀರಸಲಾಗಿತ್ತು.
ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ವಿರಳವಾಗಿತ್ತು
ಮಂಗಳೂರಿನ ಮಾಲ್‌ಗಳು ಬೆಳಗ್ಗೆ 10ರಿಂದ ರಾತ್ರಿ 8.30ರ ವರೆಗೂ ತೆರೆದುಕೊಂಡಿವೆ. ಮಾಲ್‌ಗಳಲ್ಲಿ ಲಾಕ್‌ಡೌನ್ ಸಡಿಲಿಕೆ ನಿಯಮ ಕಡ್ಡಾಯ ಪಾಲನೆಗೆ ಒತ್ತು ನೀಡಲಾಗಿದೆ. ಸಿಟಿ ಸೆಂಟರ್ ಮಾಲ್ ಮಾತ್ರ ಬೆಳಗ್ಗಿನ ಬದಲು ಮಧ್ಯಾಹ್ನ 12 ಗಂಟೆಗೆ ಸಾರ್ವಜನಿಕ ಪ್ರವೇಶಕ್ಕೆ ಮುಕ್ತಗೊಂಡಿತು. ಎಲ್ಲ ಮಾಲ್‌ಗಳಲ್ಲಿ ಶೇ.85ರಷ್ಟುಅಂಗಡಿಗಳು ತೆರೆದುಕೊಂಡಿವೆ.
ಮಂಗಳೂರಿನ ಮಂಗಳಾದೇವಿ ಹಾಗೂ ಕದ್ರಿ ದೇವಸ್ಥಾನದಲ್ಲಿ ಎಲ್ಲ ಸೇವೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಕಟೀಲು ಮತ್ತು ಶರವು ಮಹಾಗಣಪತಿ ದೇವಸ್ಥಾನ ವಿಳಂಬವಾಗಿ ದರ್ಶನಕ್ಕೆ ತೆರೆದುಕೊಳ್ಳಲಿದೆ. ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ಲೋಕಕಲ್ಯಾಣಾರ್ಥ ಹಾಗೂ ಕೊರೋನಾ ನಿರ್ಮೂಲನೆಗೆ ಧನ್ವಂತರಿ ಯಾಗ ಮತ್ತು ಶತ ಸೀಯಾಳಾಭಿಷೇಕ ನೆರವೇರಿತು.
ಫೋರಂ ಮಾಲ್ ಬಿಟ್ಟು ಉಳಿದ ಮಾಲ್‌ಗಳಲ್ಲಿ ಫುಡ್ ಕೋರ್ಟ್ ಇನ್ನಷ್ಟೆ ಕಾರ್ಯಾರಂಭವಾಗಬೇಕು.ಮಂಗಳೂರಿನ ಫೋರಂ ಫಿಜಾ ಮಾಲ್‌ನಲ್ಲಿ ಶೀಘ್ರವೇ ಗ್ರಾಹಕರ ಪ್ರವೇಶಕ್ಕೆ ಟೋಕನ್ ವ್ಯವಸ್ಥೆ ಜಾರಿಗೆ ಬರಲಿದೆ. ಗ್ರಾಹಕರು ಫೋರಂ ಮಾಲ್‌ನ ವೆಬ್‌ಸೈಟ್‌ಗೆ ತೆರಳಿ ಟೋಕನ್‌ನ್ನು ಮೊಬೈಲ್‌ಗೆ ಡೌನ್‌ಲೋಡ್ ಮಾಡಬೇಕು.
ಮಂಗಳೂರಿನ ಝೀನತ್ ಭಕ್‌್ಷ ಮಸೀದಿಯಲ್ಲಿ ಸೋಮವಾರದಿಂದಲೇ ಸಾಮೂಹಿಕ ನಮಾಜ್ ಆರಂಭಗೊಂಡಿದೆ. ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಂಡು ನಮಾಜ್ ನೆರವೇರಿಸಲಾಗುತ್ತಿದೆ. ನಮಾಜ್‌ಗೆ ಬೇಕಾದ ಕಾರ್ಪೆಟ್‌ನ್ನು ತರಬೇಕಾಗಿದ್ದು, ನೆಲಹಾಸನ್ನು ತೆಗೆಯಲಾಗಿದೆ. ಕಂಡತ್‌ಪಳ್ಳಿ ಮಸೀದಿಯಲ್ಲೂ ನಮಾಜ್‌ಗೆ ಸಿದ್ಧತೆ ನಡೆದಿದೆ. ಆದರೆ ಉಳ್ಳಾಲ ದರ್ಗಾ ಅಧೀನದ ಮಸೀದಿಗಳಲ್ಲಿ ಜೂನ್ ಅಂತ್ಯದ ವರೆಗೆ ನಮಾಜ್ ಬಂದ್ ಮುಂದುವರಿಸಲು ತೀರ್ಮಾನಿಸಿವೆ. ಚಚ್‌ರ್‍ಗಳು ಜೂ.14ರಿಂದ ಆರಂಭಗೊಳ್ಳಲಿವೆ.