ಲಕ್ಷಕ್ಕೂ ಹೆಚ್ಚು ಜನ ಸೇರಿದ BJP ಜನಜಾಗೃತಿ ಸಮಾವೇಶ ಹೀಗಿತ್ತು..!

First Published | Jan 28, 2020, 2:44 PM IST

ಪೌರತ್ವ ತಿದ್ದುಪಡಿ ಕಾಯ್ದೆ ಪರವಾಗಿ ದ.ಕ. ಬಿಜೆಪಿ ಮಂಗಳೂರಿನಲ್ಲಿ ಸೋಮವಾರ ಹಮ್ಮಿಕೊಂಡ ಜನಜಾಗೃತಿಯ ಬೃಹತ್‌ ಸಮಾವೇಶ ಮತ್ತೊಮ್ಮೆ ಕರಾವಳಿಯಲ್ಲಿ ಕೇಸರಿ ಪಡೆಯ ಸಾಮರ್ಥ್ಯವನ್ನು ತೆರೆದಿಟ್ಟಿತು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲ ಬೂತ್‌ಗಳಿಂದ ತಲಾ ನೂರು ಮಂದಿಯಂತೆ ಲಕ್ಷಕ್ಕೂ ಅಧಿಕ ಮಂದಿ ಮಂಗಳೂರು ಹೊರವಲಯದ ಗೋಲ್ಡ್‌ಫಿಂಚ್‌ ಸಿಟಿ ಮೈದಾನದಲ್ಲಿ ಸಮಾವೇಶಗೊಂಡರು.

ಮಂಗಳೂರಿನಲ್ಲಿ ಆಯೋಜಿಸಿದ್ದ ಬೃಹತ್‌ ಸಮಾವೇಶಕ್ಕೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಸಾಗರೋಪಾದಿಯಲ್ಲಿ ಜನಸಾಗರ ಆಗಮಿಸಿತ್ತು. ಇಷ್ಟುದೊಡ್ಡ ಸಂಖ್ಯೆಯ ಜನ ಒಟ್ಟುಸೇರಿದ್ದನ್ನು ನೋಡಿ ಸ್ವತಃ ರಾಜನಾಥ್‌ ಸಿಂಗ್‌ ಅಚ್ಚರಿ ವ್ಯಕ್ತಪಡಿಸಿದರು.
ಸಮಾವೇಶದಲ್ಲಿ ಭಾಗವಹಿಸಿದ ಕಲ್ಲಡ್ಕ ಪ್ರಭಾಕರ್ ಭಟ್
Tap to resize

ವೇದಿಕೆಯಲ್ಲಿ ಪರಸ್ಪರ ಕೈ ಕುಲುಕಿಕೊಂಡ ಬಿಜೆಪಿ ಮುಖಂಡರು.
ಸಮಾವೇಶದಲ್ಲಿ ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.
ಕೇಸರಿ ಟೋಪಿಗಳನ್ನು ಧರಿಸಿದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದು.
ವೇದಿಕೆಯಲ್ಲಿ ಸಚಿವ ರಾಜ್‌ನಾಥ್‌ ಸಿಂಗ್‌ ಅವರಿಗೆ ವಂದಿಸಿದ ಬಿಜೆಪಿ ನಾಯಕರು
ವೇದಿಕೆಯಲ್ಲಿ ನಿಂತು ಜನಸಾಗರದತ್ತ ಕೈ ಬೀಸಿದ ಬಿಜೆಪಿ ಮುಖಂಡರು
ಸಮಾವೇಶದಲ್ಲಿ ಸೇರಿದ್ದ ಲಕ್ಷಕ್ಕೂ ಹೆಚ್ಚಿನ ಜನರನ್ನು ನೋಡಿ ಕೈ ಮುಗಿದ ಸಚಿವ ರಾಜ್‌ನಾಥ್‌ ಸಿಂಗ್
ಸಮಾವೇಶಕ್ಕೆ ಭದ್ರತೆ ಒದಗಿಸಿದ ಪೊಲೀಸ್ ಸಿಬ್ಬಂದಿ
ಲಕ್ಷಕ್ಕೂ ಅಧಿಕ ಮಂದಿ ಮಂಗಳೂರು ಹೊರವಲಯದ ಗೋಲ್ಡ್‌ಫಿಂಚ್‌ ಸಿಟಿ ಮೈದಾನದಲ್ಲಿ ಸಮಾವೇಶಗೊಂಡರು. ಇತ್ತೀಚೆಗೆ ಪೌರತ್ವ ವಿರೋಧಿ ಸಮಾವೇಶಕ್ಕೆ ಸರಿಸಾಟಿಯಾಗುವಂತೆ ಅಪಾರ ಸಂಖ್ಯೆಯಲ್ಲಿ ಪೌರತ್ವ ಕಾಯ್ದೆ ಬೆಂಬಲಿಸುವ ಘೋಷಣೆಯೊಂದಿಗೆ ತಂಡೋಪತಂಡವಾಗಿ ಜನ ಆಗಮಿಸಿದ್ದರು.
ಕಾರ್ಯಕರ್ತರು ಕೇಸರಿ ಟೋಪಿ ಧರಿಸಿ, ಹಾಗೆಯೇ ಕೇಸರಿ ಧ್ವಜಗಳು ಸಮಾವೇಶದ ಮೈದಾನದ ಸುತ್ತ ರಾರಾಜಿಸುತ್ತಿತ್ತು.
ಕಾರ್ಯಕರ್ತನೊಬ್ಬ ಮೊಬೈಲ್‌ ಮೂಲಕ ಫೋಟೋ ಕ್ಲಿಕ್ಕಿಸುತ್ತಿರುವುದು.
ವೇದಿಕೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಸಚಿವ ರಾಜ್‌ನಾಥ್‌ ಸಿಂಗ್ ಮಾತನಾಡುತ್ತಿರುವುದು.
ಸಂಭಾಷಣೆಯಲ್ಲಿ ನಿರತರಾಗಿರುವ ಸಚಿವರು ಮತ್ತು ಸಂಸದ ನಳಿನ್
ಸಚಿವ ರಾಜ್‌ನಾಥ್‌ ಸಿಂಗ್‌ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

Latest Videos

click me!