ಮಂಗಳೂರು: ಮೈ ನವಿರೇಳಿಸಿದ ಮಕ್ಕಳ ಸಾಹಸ ಕ್ರೀಡೆ ಪ್ರದರ್ಶನ..!

First Published | Dec 16, 2019, 8:31 AM IST

ಮಂಗಳೂರಿನ ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದಲ್ಲಿ ಭಾನುವಾರ ಸಂಜೆ ಹೊನಲು ಬೆಳಕಿನ ಕ್ರೀಡೋತ್ಸವ ನಡೆದಿದೆ. ಪುದುಚೇರಿಯ ಲೆಪ್ಟಿನೆಂಟ್‌ ಗವರ್ನರ್‌ ಡಾ.ಕಿರಣ್‌ ಬೇಡಿ ಪ್ರಧಾನ ಅತಿಥಿಯಾಗಿ ಭಾಗವಹಿಸಿದ್ದಾರೆ. ಸಂಸ್ಥೆಯ ಮಕ್ಕಳು ಪ್ರದರ್ಶಿಸಿದ ಸಾಹಸಗಳಿಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೈ ಜುಂ ಎನಿಸುವ ಸಾಹಸ ಪ್ರದರ್ಶನದ ಫೋಟೋಗಳು ಇಲ್ಲಿವೆ.

ಪುದುಚೇರಿಯ ಲೆಪ್ಟಿನೆಂಟ್‌ ಗವರ್ನರ್‌ ಡಾ.ಕಿರಣ್‌ ಬೇಡಿ ಹಾಗೂ ಕಲ್ಲಡ್ಕ ಪ್ರಭಾಕರ್ ಭಟ್ ಮಾತನಾಡುತ್ತಿರುವುದು.
ಹೊನಲು ಬೆಳಕಿನ ಕ್ರೀಡೋತ್ಸವ ಮೈದಾನದಲ್ಲಿ ಸಾಹಸ ಪ್ರದರ್ಶಿಸುತ್ತಿರುವ ದಿಟ್ಟ ವಿದ್ಯಾರ್ಥಿನಿಯರು. ಬಾಲಕ, ಬಾಲಕಿಯರು ಜೊತೆಗೇ ಭಾಗವಹಿಸಿದ ಬಗ್ಗೆ ಡಾ.ಕಿರಣ್‌ ಬೇಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Tap to resize

ಮೈ ನವಿರೇಳಿಸುವ ಸಾಹಸ ಕ್ರೀಡೆ ಪ್ರದರ್ಶಿಸಿದ ಪುಟಾಣಿಗಳಿಗೆ ಮೆಚ್ಚುಗೆ ವ್ಯಕ್ತವಾಯಿತು.
ಸಾಹಸ ಪ್ರದರ್ಶನದ ಜೊತೆ ಕಲಾತ್ಮಕತೆ ತೋರಿಸಿದ ವಿದ್ಯಾರ್ಥಿಗಳು.
ಕ್ರೀಡಾ ಮೈದಾನದಲ್ಲಿ ಬಾಲಕರ ಬೈಕ್ ಸಾಹಸ ನೋಡುಗರನ್ನು ಆಕರ್ಷಿಸಿತು.
Kalladka
ಬಾಟಲಿಗಳಲ್ಲೇ ಬ್ಯಾಲೆನ್ಸ್‌ ಕಾಯ್ದುಕೊಂಡು ಆಸನ ಪ್ರದರ್ಶಿಸಿದ ವಿದ್ಯಾರ್ಥಿನಿ.
ವೇದಿಕೆಯಲ್ಲಿ ಬಾಲಕರು ಪ್ರದರ್ಶಿಸಿದ ಸಾಹಸ ಸಭಿಕರ ಮೆಚ್ಚುಗೆಗೆ ಪಾತ್ರವಾಯಿತು.

Latest Videos

click me!