ಬಾಗಲಕೋಟೆ ಹೋಳಿ ಸಂಭ್ರಮದಲ್ಲಿ ಭಾಗಿಯಾದ್ರು ಬಾಹುಬಲಿ, ಕಟ್ಟಪ್ಪ..!

First Published | Mar 12, 2020, 3:55 PM IST

ಐತಿಹಾಸಿಕ ಬಾಗಲಕೋಟೆ ಹೋಳಿಯಲ್ಲಿ ಬಾಹುಬಲಿ, ಕಟ್ಟಪ್ಪನೂ ಇದ್ದರು. ಕಲ್ಕತ್ತಾ ಬಿಟ್ಟರೆ ದೇಶದಲ್ಲಿಯೇ ಬಹಳ ಅಬ್ಬರದಿಂದ ಹೋಳಿ  ಆಡುವ ಬಾಗಲಕೋಟೆಯಲ್ಲಿ ಈ ಬಾರಿ ಬಾಹುಬಲಿ, ಕಟ್ಟಪ್ಪ ಇದ್ದಿದ್ದು ವಿಶೇಷ. ಇಲ್ಲಿವೆ ಫೋಟೋಸ್

ಪ್ರತಿಬಾರಿ ಒಂದಿಲ್ಲೊಂದು ಹೊಸತನಕ್ಕೆ ಸಾಕ್ಷಿಯಾಗುವ ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ಹೋಳಿ ಈ ಬಾರಿಯೂ ವಿಶೇಷತೆ ಮೆರೆದಿದೆ.
ಬಣ್ಣದಾಟ ಈ ಬಾರಿ ಬಾಹುಬಲಿಯ ಸಿನಿಮಾದ ಕಟ್ಟಪ್ಪನನ್ನೂ ಸಹ ಬಿಟ್ಟಿಲ್ಲ ಅನ್ನೋದೇ ವಿಶೇಷ
Tap to resize

ಬಾಗಲಕೋಟೆ ಜಿಲ್ಲೆಯ ಗದ್ದನಕೇರಿ ತಾಂಡಾದಲ್ಲಿ ನಿರಂತರವಾಗಿ ಬಣ್ಣದಾಟದ ನಡೆದು ಬಂದಿದೆ.
ಬಾಗಲಕೋಟೆ ಹೋಳಿಯಲ್ಲಿ ಯುವಕರು ಬಾಹುಬಲಿ ಸಿನಿಮಾದ ಪಾತ್ರಧಾರಿಗಳಾದ ಬಾಹುಬಲಿ ಮತ್ತು ಕಟ್ಟಪ್ಪನ ವೇಷ ಧರಿಸಿದ್ದಾರೆ.
ಬಾಹುಬಲಿ ಮತ್ತು ಕಟ್ಟಪ್ಪನ ವೇಷಧರಿಸಿ ಯುದ್ಧಾಸ್ತ್ರಗಳನ್ನು ಹಿಡಿದು ಶತ್ರುಗಳ ವಿರುದ್ಧ ಪರಸ್ಪರ ಹೋರಾಟ ನಡೆಸುವ ದೃಶ್ಯ ಮಾಡಿ ತೋರಿಸಲಾಗಿದೆ
ನೆರೆದಿದ್ದ ನೂರಾರು ಜನರ ಮಧ್ಯೆ ಬಾಹುಬಲಿ ಕಟ್ಟಪ್ಪನನ್ನು ಕೂಗಿ ಕರೆಯುವುದು ಸೇರಿ ಭಾರೀ ಸಂಭ್ರಮ ಮನೆ ಮಾಡಿತ್ತು.
ಬಾಹುಬಲಿ ರಕ್ಷಣೆಗೆ ನಿಲ್ಲುವುದು ಹೀಗೆ ಅದ್ಭುತ ದೃಶ್ಯದ ಮಾದರಿ ಪ್ರದಶ೯ನ ಮಾಡಿ ಗಮನ ಸೆಳೆದಿದ್ದಾರೆ.
ಯುವಕರ ಈ ಪ್ರದಶ೯ನ ಗ್ರಾಮಸ್ಥರ ಸಂತಸಕ್ಕೆ ಕಾರಣವಾಗಿದೆ.

Latest Videos

click me!