ಮಂಗಳೂರಲ್ಲಿ ವರ್ಷದ ಮೊದಲ ಮಳೆ, ಇಲ್ಲಿವೆ ಫೋಟೋಸ್

First Published | Feb 28, 2020, 11:39 AM IST

ದಕ್ಷಿಣ ಕನ್ನಡದ ಜಿಲ್ಲೆಯ ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ವಿಟ್ಲ ಅಲ್ಲಲ್ಲಿ ನಸುಕಿನ ಜಾವ ಉತ್ತಮ ವರ್ಷಧಾರೆಯಾಗಿದೆ. ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದ್ದು, ಇಲ್ಲಿವೆ ಫೋಟೋಸ್

ಒಡಿಶಾದಲ್ಲಿ ಮಳೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಮಳೆ ಕಾಣಿಸಿದೆ. ಗುರುವಾರ ಮುಂಜಾನೆ ಮಂಗಳೂರು ನಗರ ಹೊರತುಪಡಿಸಿ ದ.ಕ. ಜಿಲ್ಲೆಯಾದ್ಯಂತ ಹಠಾತ್ತನೆ ಧಾರಾಕಾರ ಮಳೆ ಸುರಿದಿದೆ.
undefined
ಮುಂಜಾನೆ ಸುಮಾರು 5 ಗಂಟೆ ಸುಮಾರಿಗೆ ತುಂತುರು ಮಳೆ ಕಾಣಿಸಿದೆ. 5.30ರ ಬಳಿಕ ಅರ್ಧ ಗಂಟೆ ಕಾಲ ಧಾರಾಕಾರ ಮಳೆಯಾಗಿದೆ. ಬಳಿಕ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಗುಡುಗಿನ ಆರ್ಭಟ ಕೇಳಿಬಂದಿದೆ.
undefined

Latest Videos


ಅಚಾನಕ್ ಮಳೆಯಿಂದ ಅಂಗಳದಲ್ಲಿ ಒಣ ಹಾಕಿರುವ ಅಷ್ಟೂ ಅಡಿಕೆ ನೆನೆದಿರುವುದು.
undefined
ಮಾಡಿನಿಂದ ನೀರಿಳಿಯುವಷ್ಟು ಧಾರಕಾರ ಮಳೆಸುರಿಯಿತು.
undefined
ಒಡಿಶಾ ಚಂಡಮಾರುತ ಪ್ರಭಾವದಿಂದ ಕರ್ನಾಟಕದಲ್ಲಿ ಐದು ದಿನಗಳ ಕಾಲ ಮಳೆಯ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿತ್ತು.
undefined
click me!