ಕಾರವಾರ; ಸಿನಿಮೀಯ ಕಾರ್ಯಾಚರಣೆ, ಜನರಿಂದಲೇ ಮೀನುಗಾರರ ರಕ್ಷಣೆ

First Published | Sep 20, 2020, 10:50 PM IST

ಕಾರವಾರ(ಸೆ. 20) ಸಮುದ್ರದಲ್ಲಿ  ಅಪಾಯಕ್ಕೆ ಸಿಲುಕಿಕೊಂಡಿದ್ದ  ನಾಲ್ವರು ಮೀನುಗಾರರು ಅಪಾಯದಿಂದ ಪಾರಾಗಿದ್ದಾರೆ. ಭಟ್ಕಳ ಅಳ್ವೆಕೋಡಿಯಿಂದ ಬೆಳಗಿನ ಜಾವ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರು ನೀರಿನಲ್ಲಿ ಸಿಲುಕಿಕೊಂಡಿದ್ದರು.

ಸಚಿನ್, ಹರೀಶ, ನಾರಾಯಣ ಮತ್ತು ಜ್ಞಾನೇಶ ಮೀನುಗಾರಿಕೆಗೆ ತೆರಳಿದ್ದ ಯುವಕರುದೇವಾನುಗ್ರಹ ಹೆಸರಿನ ಯಾಂತ್ರಿಕ ದೋಣಿಯ ಮೂಲಕ ಮೀನುಗಾರಿಕೆ ತತೆರಳಿದ್ದರು.
ಸಮುದ್ರದ ಅಲೆಯ ಆರ್ಭಟಕ್ಕೆ ದೋಣಿಯ ಎಂಜಿನ್ ಕೈಕೊಟ್ಟಿದೆ.ದೋಣಿ ನಿಯಂತ್ರಿಸಲು ಸಾಧ್ಯವಾಗದೆ ಸಹಾಯಕ್ಕೆ ಮೊರೆಯಿಟ್ಟಿದ್ದಾರೆ.ಸಮುದ್ರದ‌ ನಡುವಿರುವ ಗುಡ್ಡದ ಆಸರೆ ಪಡೆದು ಮೊರೆ ಇಟ್ಟಿದ್ದರು.
Tap to resize

ಸ್ಥಳಕ್ಕೆ ಧಾವಿಸಿದ ಇತರೆ ಮೀನುಗಾರರು ಅಪಾಯಕ್ಕೆ ಸಿಲುಕಿದವರ ರಕ್ಷಣೆ ಮಾಡಿದ್ದಾರೆ.
ಗುಡ್ಡದ ಬಳಿಯೇ ದೋಣಿ ಲಂಗರು ಹಾಕಿಸಿ ಬೋಟ್ ಮೂಲಕ ಮೀನುಗಾರರನ್ನು ಕರೆತರಲಾಗಿದೆ.
ಹವಾಮಾನ‌ ವೈಪರೀತ್ಯದ ಕಾರಣದಿಂದಾಗಿ ಸಂಜೆ ವೇಳೆ ರಕ್ಷಣಾ ಕಾರ್ಯ ಮಾಡಲಾಗಿದೆ.
ಕರ್ನಾಟಕದ ಹಲವು ಭಾಗ ಸೇರಿದಂತೆ ಕರಾವಳಿಯಲ್ಲಿಯೂ ಭಾರೀ ಮಳೆಯಾಗುತ್ತಿದ್ದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿಯೇ ಇದೆ.

Latest Videos

click me!