ಕಲಬುರಗಿ(ಅ.16): ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಬಂದೊದಗಿದೆ. ಹೀಗಾಗಿ ನಿರಂತರ ಮಳೆಯಿಂದ ಜಲಾಶಯಗಳು ತುಂಬಿ ತುಳುಕುತ್ತಿವೆ. ಇದರಿಂದ ಡ್ಯಾಂನಿಂದ ಅಪಾರ ಪ್ರಮಾಣದಲ್ಲಿ ನೀರನ್ನು ನದಿಗೆ ಹರಿ ಬಿಡಲಾಗುತ್ತಿದೆ. ಭೀಮಾ ನದಿ ಪಾತ್ರದ ಗ್ರಾಮಗಳಿಗೆ ನೀರು ನುಗ್ಗಿದೆ. ಜಮೀನು, ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ಅಕ್ಷರಶಹಃ ಬೀದಿ ಪಾಲಾಗಿದ್ದಾರೆ. ಭೀಮಾ ತೀರದ ಫಿರೋಜಾಬಾದ್ ಗ್ರಾಮದ ಜನರು ಗಂಟು ಮೂಟೆ ಸಮೇತ ಕಾಳಜಿ ಕೇಂದ್ರ ಅರಸಿ ಹೊರಟಿದ್ದಾರೆ.