ವಿಜಯಪುರ: ಗರ್ಭಧರಿಸಿದ ಶ್ವಾನಕ್ಕೂ ಸೀಮಂತ ಭಾಗ್ಯ!

Kannadaprabha News   | Asianet News
Published : Sep 05, 2020, 10:13 AM IST

ವಿಜಯಪುರ(ಸೆ.05): ಶ್ವಾನವೊಂದು ಗರ್ಭಧರಿಸಿದ ಹಿನ್ನೆಲೆಯಲ್ಲಿ ಸೀಮಂತ ಕಾರ್ಯ ಮಾಡಿದ ಅಪರೂಪದ ಪ್ರಸಂಗ ಗುಮ್ಮಟ ನಗರಿ ವಿಜಪುರದಲ್ಲಿ ಶುಕ್ರವಾರ ನಡೆದಿದೆ.  

PREV
15
ವಿಜಯಪುರ: ಗರ್ಭಧರಿಸಿದ ಶ್ವಾನಕ್ಕೂ ಸೀಮಂತ ಭಾಗ್ಯ!

ವಿಜಯಪುರದ ಸಾಮಾಜಿಕ ಹೋರಾಟಗಾರ ಪ್ರಕಾಶ ಕುಂಬಾರ ಎಂಬಾತರ ಮನೆಯಲ್ಲಿ ಸೀಮಂತ ಕಾರ್ಯ ನಡೆದಿದೆ.

25

ಪ್ರಕಾಶ ಕುಂಬಾರ ಅವರು ಸಾಕಿದ ಪಮೋರಿಯನ್‌ ತಳಿಯ ಶ್ವಾನ (ಸೋನಮ್ಮ) ಗರ್ಭಧರಿಸಿದೆ. ಇದರಿಂದ ಅವರ ಮನೆಯವರಿಗೆ ಈ ಮುದ್ದಿನ ಶ್ವಾನಕ್ಕೂ ಸೀಮಂತ ಮಾಡುವ ವಿಚಾರ ಹೊಳೆದಿದೆ. ಕುಂಬಾರರು ತಮ್ಮ ಸ್ನೇಹಿತರಾದ ವಕೀಲ ಮಲ್ಲಿಕಾರ್ಜುನ ಭೃಂಗಿಮಠ ಅವರ ಮುಂದೆ ವಿಚಾರ ಪ್ರಸ್ತಾಪಿಸಿದ್ದರು, ಅವರೂ ಸೈ ಎಂದಿದ್ದಾರೆ.

35

ಮಲ್ಲಿಕಾರ್ಜುನ ಭೃಂಗಿಮಠ ಅವರು ತಮ್ಮ ಸ್ನೇಹಿತರ ಜೊತೆಗೂಡಿ ಶ್ವಾನದ ತವರು ಮನೆಯವರಾಗಿ ಕುಂಬಾರರ ಮನೆಗೆ ಆಗಮಿಸಿ ಶ್ವಾನಕ್ಕೆ ಸೀಮಂತ ಕಾರ್ಯಕ್ರಮ ಮಾಡಿದ್ದಾರೆ.

45

ಬೀಗರು ಕೊಡುವ ಪದ್ಧತಿಯಂತೆ ಶ್ವಾನ ಸೋನಮ್ಮಳಿಗೆ ಸೀರೆ, ಕುಪ್ಪಸ, ಬಂಗಾರ, ಬೆಳ್ಳಿ, ದಂಡಿ, ಮಾಲೆ ಹಾಗೂ ಹಣ್ಣುಹಂಪಲು ತಂದಿದ್ದರು. 

55

ಸುಮಾರು ಒಂದೂವರೆ ಗಂಟೆ ಕಾಲ ಸೀಮಂತ ಕಾರ್ಯಕ್ರಮ ನಡೆದಿದೆ

click me!

Recommended Stories