Published : Sep 04, 2020, 01:54 PM ISTUpdated : Sep 04, 2020, 02:00 PM IST
ದೋಟಿಹಾಳ(ಸೆ.04): ಕೊಪ್ಪಳ ಜಿಲ್ಲೆಯ ದೋಟಿಹಾಳ ಸಮೀಪದ ಕೇಸೂರ ಸೀಮಾದ ಹೊಲವೊಂದರಲ್ಲಿ ಬೇವಿನ ಮರದಲ್ಲಿ ಶ್ರೀ ಅವಧೂತ ಶುಕಮುನಿ ಸ್ವಾಮಿ ಮುಖ (ಸಿಂಹದ ಮುಖದ) ಮೂಡಿದೆ ಎಂದು ಭಾವಿಸಿ ಜನ ತಂಡೋಪತಂಡವಾಗಿ ಬಂದು ವೀಕ್ಷಿಸುತ್ತಿದ್ದಾರೆ.
ದೋಟಿಹಾಳ ಕೇಸೂರ ಗ್ರಾಮದಿಂದ ಇಲಕಲ್ಲಗೆ ತೆರಳುವ ಮಾರ್ಗದಲ್ಲಿ ಸುಮಾರು 1 ಕಿಮೀ ದೂರದಲ್ಲಿರುವ ಮಾಜಿ ಶಾಸಕ ಹಸನಸಾಬ ದೋಟಿಹಾಳ ಅವರ ತೋಟದ ಪಕ್ಕದಲ್ಲಿರುವ ನೀಲಮ್ಮ ಗುರುಪಾದಪ್ಪ ಗಡಾದ (ಕಡೆಕೊಪ್ಪ) ಅವರ ಹೊಲದ ಬದುವಿನ ಮೇಲಿರುವ ಬೇವಿನ ಮರದಲ್ಲಿ ಶ್ರೀ ಅವಧೂತ ಶುಕಮುನಿ ಸ್ವಾಮಿ ಮುಖ (ಸಿಂಹದ ಮುಖದ) ಮೂಡಿದೆ.

26
ಇದನ್ನು ದೈವಿ ಸ್ವರೂಪದ್ದೆಂದು ನಂಬಿ ಬೇವಿನ ಮರಕ್ಕೆ ಪೂಜೆ ಸಲ್ಲಿಸುತ್ತಿರುವ ಗ್ರಾಮಸ್ಥರು

36
ಬೇವಿನ ಮರಗಳಲ್ಲಿ ನೈಸರ್ಗಿಕವಾಗಿ ಈ ರೀತಿ ಬದಲಾವಣೆಗಳು ನಡೆಯುವುದು ಸಹಜವಾಗಿಯೇ ಇದೆ. ಹಿಂದಿನಿಂದಲೂ ಇಂತಹ ವಿಷಯಗಳನ್ನು ಕೇಳಿಕೊಂಡು ಬರುತ್ತಿದ್ದರೂ ಗ್ರಾಮಸ್ಥರು ಇದನ್ನು ದೈವ ಸ್ವರೂಪ ಎಂದು ನಂಬಿದ್ದಾರೆ. ಕೆಲ ಪ್ರಜ್ಞಾವಂತ ಯುವಕರು, ವೈಜ್ಞಾನಿಕ ದೃಷ್ಟಿಯಿಂದ ಕಾಣುವ ಜನ ಅದು ಪ್ರಕೃತಿ ಸಹಜ ಗುಣವೆಂದು ಹೇಳುತ್ತಾರೆ.

46
ಗ್ರಾಮಸ್ಥರು ಅದನ್ನು ನಂಬದೆ ದೈವಿ ಸೃಷ್ಟಿ ಇರಬೇಕು ಎಂದು ನಂಬಿ ಆ ಬೇವಿನ ಮರದಲ್ಲಿ ಮೂಡಿರುವ ಆಕೃತಿಗೆ ಹಾರ, ಊದುಬತ್ತಿ, ತೆಂಗಿನಕಾಯಿ ಅರ್ಪಿಸಿ ಪೂಜಿಸುವುದರಲ್ಲಿ ತೊಡಗಿದ್ದಾರೆ.

56
ಮಂಗಳವಾರ ಸಂಜೆ ಇದು ಬೆಳಕಿಗೆ ಬಂದಿದ್ದು, ಇದನ್ನು ನೋಡಲು ಗ್ರಾಮದ ಮಹಿಳೆಯರು, ಮಕ್ಕಳು, ಹಿರಿಯರು, ಕಿರಿಯರು ಸಹ ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.

66
ಊದುಬತ್ತಿ, ಬಾಳೆಹಣ್ಣು, ತೆಂಗಿನಕಾಯಿ ಅರ್ಪಿಸಿ ತಮ್ಮ ಭಕ್ತಿ ಮೆರೆಯುತ್ತಿರುವ ಜನರು