ಗರ್ಭ ಧರಿಸಿದ ಎಂಟನೆಯ ತಿಂಗಳಲ್ಲಿ ಸೀಮಂತ ಕಾರ್ಯಕ್ರಮವನ್ನು ನಡೆಸುತ್ತಾರೆ. ಒಂದೊಂದು ಭಾಗಗಳಲ್ಲಿ, ಒಂದೊಂದು ಧರ್ಮಗಳಲ್ಲಿ ವಿಭಿನ್ನ ರೀತಿಯಲ್ಲಿ ಸೀಮಂತವು ನಡೆಯುತ್ತದೆ. . ತುಂಬು ಗರ್ಭಿಣಿಗೆ ಮುತ್ತೈದೆಯರು ಹಸಿರುಬಳೆ, ಹಸಿರು ಸೀರೆ ತೊಡಿಸಿ, ಹೂಮುಡಿಸಿ ಬಗೆಬಗೆ ತಿಂಡಿ-ತಿನಿಸುಗಳಿಂದ ಸಂತೋಷಪಡಿಸುತ್ತಾರೆ. ಇದೆಲ್ಲ ತವರು ಮನೆಯಿಂದ ಗಂಡನ ಮನೆಯಲ್ಲಿ ನಡೆಸಲಾಗುತ್ತದೆ. ಆದ್ರೆ, ಬೆಂಗಳೂರಿನ ಹೈಗ್ರೌಂಡ್ ಪೊಲೀಸರು ತಮ್ಮ ಠಾಣೆಯ ಮಹಿಲಾ ಸಿಬ್ಬಂದಿಗೆ ಸೀಮಂತ ಮಾಡಿ ತವರಿನ ನೆನಪು ತರಿಸಿದ್ದಾರೆ.