ಪಣಂಬೂರು ಬೀಚ್‌ನ ಗಾಳಿಪಟ ಉತ್ಸವ: ಚಂದದ ಫೋಟೋಸ್ ಇಲ್ಲಿವೆ

First Published Jan 19, 2020, 10:23 AM IST

ಮಂಗಳೂರಿನ ಪಣಂಬೂರು ಬೀಚ್‌ನಲ್ಲಿ ಮೂರು ದಿನದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ನಡೆದಿದೆ. ಬಣ್ಣ ಬಣ್ಣದ ಸುಂದರ ಗಾಳಿಪಟ ಬಾನೆತ್ತರ ಹಾರಿದೆ. ಇಲ್ಲಿದೆ ಗಾಳಿಪಟ ಉತ್ಸವದ ಕ್ಯೂಟ್ ಕ್ಯೂಟ್ ಫೋಟೋಸ್.

ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಉತ್ಸವದ ಭಾಗವಾಗಿ ಪಣಂಬೂರು ಬೀಚ್‌ನಲ್ಲಿ ಗಾಳಿಪಟ ಉತ್ಸವ ನಡೆದಿದೆ.
undefined
ಪಣಂಬೂರು ಕಡಲ ಕಿನಾರೆಯಲ್ಲಿ ಜ.17, 18 ಮತ್ತು 19ರಂದು ಮಂಗಳೂರು ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ನಡೆಯುತ್ತಿದೆ.
undefined
ಸುಂದರವಾರ ಡ್ರ್ಯಾಗನ್ ಹೋಲಿಕೆಯ ಬೃಹತ್ ಗಾಳಿಪಟಗಳು ಬಾನೆತ್ತರದಲ್ಲಿ ಹಾರಾಡಿದವು.
undefined
ಬಿಸಿಲನ್ನೂ ಲೆಕ್ಕಿಸದೇ ಹೆಚ್ಚಿನ ಸಂಖ್ಯೆಯಲ್ಲಿ ಜನ ಗಾಳಿಪಟ ಉತ್ಸವದಲ್ಲಿ ಭಾಗವಹಿಸಿ ಆನಂದಿಸಿದ್ದಾರೆ.
undefined
ಪ್ರವಾಸಿಗರಿಬ್ಬರು ಕೈಟ್‌ ಕಪಲ್‌ (ಗಾಳಿಪಟ ಜೋಡಿ) ಜೊತೆ ಫೋಟೋಗೆ ಪೋಸ್‌ ಕೊಟ್ಟಿದ್ದು ಹೀಗೆ.
undefined
ಗಾಳಿಪಟ ಉತ್ಸವಕ್ಕೆ ಮೆರುವು ತರುವಂತೆ ಚೆಂಡೆಮೇಳವೂ ಇತ್ತು.
undefined
ಹಸಿರು, ಕೆಂಪು, ಹಳದಿ ಬಣ್ಣದ ಮಿನಿ ಡ್ರ್ಯಾಗನ್ ಪ್ರವಾಸಿಗರನ್ನು ಆಕರ್ಷಿಸಿತು.
undefined
ಗಾಳಿಪಟ ಉತ್ಸವದಲ್ಲಿ ಒಂದಷ್ಟು ಜನ ಗಾಳಿಪಟ ಹಾರಿಸಿ ಖಷಿಪಟ್ಟರೆ ಇನ್ನೊಂದಷ್ಟು ಜನ ಬಾನಲ್ಲಿ ಹಾರಿದ ಪಟಗಳ ಸೌಂದರ್ಯ ಕಣ್ತುಂಬಿಕೊಂಡರು.
undefined
ದೊಡ್ಡ ಡ್ರ್ಯಾಗನ್ ಜೊತೆ ಪುಟ್ಟ ಪುಟ್ಟ ಡ್ರ್ಯಾಗನ್‌ಗಳು.
undefined
ಮಕ್ಕಳೂ, ಹಿರಿಯರೂ ಸೇರಿ ಬಹಳಷ್ಟು ಜನ ಭಾಗವಹಿಸಿದ್ದು, ಗಾಳಿಪಟ ಉತ್ಸವಕ್ಕೆ ಇನ್ನಷ್ಟು ಮೆರುಗು ತುಂಬಿದೆ.
undefined
click me!