ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ದಕ್ಷಿಣ ಕನ್ನಡ ಮುಸ್ಲಿಂ ಸೆಂಟ್ರಲ್ ಕಮಿಟಿ ನೇತೃತ್ವದಲ್ಲಿ 28 ಸಂಘಟನೆಗಳಿಂದ ಮಂಗಳೂರಿನಲ್ಲಿ ಪ್ರತಿಭಟನೆ ನಡೆಯಿತು.
ಲಕ್ಷಕ್ಕೂ ಅಧಿಕ ಜನಸ್ತೋಮ, ಎನ್‌ಆರ್‌ಸಿ ಮತ್ತು ಸಿಎಎ ವಿರುದ್ಧ ಸ್ವಾತಂತ್ರ್ಯಕ್ಕಾಗಿ ‘ಆಜಾದಿ’ ಘೋಷಣೆಯನ್ನು ಮೊಳಗಿಸಿದರು.
ಕೈಯಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದುಕೊಂಡಿದ್ದ ಅಸಂಖ್ಯಾತ ಮಂದಿ ಅಲ್ಪಸಂಖ್ಯಾತರು ಆಜಾದಿ ಘೋಷಣೆ ಮೊಳಗಿಸುತ್ತಾ ಕಣ್ಣೂರಿನ ಶಹಾ ಗಾರ್ಡನ್ ಮೈದಾನದಲ್ಲಿ ಸಮಾವೇಶಗೊಂಡರು. ಸಮಾರು 15 ಎಕರೆ ವಿಶಾಲ ಮೈದಾನದ ಒಳಗೆ ಮಾತ್ರವಲ್ಲದೆ ಹೊರಗೂ ಸೇರಿದ್ದ ಮಂದಿ ಕೇಂದ್ರ ಸರ್ಕಾರದ ಧೋರಣೆ ವಿರುದ್ಧ ಘೋಷಣೆ ಕೂಗಿದರು.
ಎನ್‌ಆರ್‌ಸಿ ಮತ್ತು ಸಿಎಎ ವಿರುದ್ಧದ ಈ ಸಮಾವೇಶಕ್ಕೆ ಅಲ್ಪಸಂಖ್ಯಾತ ಸಮುದಾಯದ ಜನಸಾಗರ ಹರಿದುಬಂದಿತ್ತು. ದ.ಕ. ಮತ್ತು ಉಡುಪಿ ಜಿಲ್ಲೆಯಿಂದ ತಂಡೋಪತಂಡವಾಗಿ ಸಮಾವೇಶಕ್ಕೆ ಆಗಮಿಸಿದ್ದರು.
ಪ್ರತಿಭಟನಾ ಸಮಾವೇಶದಲ್ಲಿ ಪುಟ್ಟ ಬಾಲಕಿ ತ್ರಿವರ್ಣ ಧ್ವಜವನ್ನು ತೋರಿಸುತ್ತಿರುವುದು.
ತಂಡೋಪ ತಂಡವಾಗಿ ಪ್ರತಿಭಟನಾ ಸಮಾವೇಶದ ಮೈದಾನದತ್ತ ಹರಿದುಬಂದ ಜನ ಸಾಗರ
ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದೆ ಸಂಯಮದಿಂದ ಅಲ್ಪಸಂಖ್ಯಾತ ಸಮುದಾಯ ಕಾಯ್ದೆ ವಿರುದ್ಧ ತನ್ನ ಶಕ್ತಿ ಪ್ರದರ್ಶನ ತೋರಿಸಿತು.
ಸಮಾವೇಶ ಮೈದಾನದ ಆಸುಪಾಸಿನಲ್ಲಿ ರಸ್ತೆಯುದ್ದಕ್ಕೂ ಕಂಡುಬಂದ ಪ್ರತಿಭಟನಾ ಹವಾ
ಅಡ್ಯಾರಿನ ಕಣ್ಣೂರಿನಲ್ಲಿ ನಡೆದ ಈ ಬೃಹತ್ ಪ್ರತಿಭಟನೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಮಂಗಳೂರು-ಬಿ.ಸಿ.ರೋಡ್ ಮಧ್ಯೆ ಎಲ್ಲ ವಾಹನಗಳ ಸಂಚಾರ ಮಾರ್ಗವನ್ನು ಬದಲಾಯಿಸಲಾಗಿತ್ತು. ಆದರೂ ಹೆಚ್ಚಿನ ಟ್ರಾಫಿಕ್ ಜಾಮ್ ಕಂಡು ಬಂದಿತ್ತು.
ಕಾಯ್ದೆ ವಿರೋಧಿ ಬರಹಗಳನ್ನು ಟೀಶರ್ಟ್‌ಗಳಲ್ಲಿ ಧರಿಸಿದ್ದರೆ, ಇನ್ನೂ ಕೆಲವು ಮಂದಿ ಫಲಕಗಳನ್ನು ಹಿಡಿದು ಕೇಂದ್ರ ಸರ್ಕಾರದ ವಿರೋಧಿ ಬರಹ ಪ್ರದರ್ಶಿಸಿದರು.