ದೇವಾಲಯಕ್ಕೆ ಹೋಗುತ್ತಿದ್ದಾಗ ನಡುರಸ್ತೆಯಲ್ಲೇ ಹೊತ್ತಿ ಉರಿದ ಓಮ್ನಿ

First Published | Oct 26, 2020, 11:56 AM IST

 ದೇವಸ್ಥಾನಕ್ಕೆಂದು ಹೋಗುತ್ತಿದ್ದ ಓಮಿನಿ ಕಾರೊಂದು ರಸ್ತೆಯಲ್ಲಿಯೇ ಹೊತ್ತಿಉರಿದ ಘಟನೆ ನಡೆದಿದೆ. ಈ ಆಕಸ್ಮಿಕ ಬೆಂಕಿ ಅವಘಡವೂ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಕುಮದ್ವತಿ ನದಿ ಕ್ರಾಸ್ ಬಳಿ ನಡೆದಿದೆ.
 
ಓಮಿನಿ ಕಾರಿನಲ್ಲಿ ದಾವಣಗೆರೆ ಜಿಲ್ಲೆಯಿಂದ ಹಿರೇಕೆರೂರು ತಾಲೂಕಿನ ಸುಪ್ರಸಿದ್ಧ ಸಾತೇನಹಳ್ಳಿಯ ದೇವಸ್ಥಾನಕ್ಕೆ ನಾಲ್ವರು ತೆರಳುತ್ತಿದ್ದರು.
Tap to resize

ಈ ವೇಳೆ ಮಾರ್ಗ ಮಧ್ಯೆ ನಡು ರಸ್ತೆಯಲ್ಲಿ ಕಾರು ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದೆ.ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಿದ್ದನ್ನು ದಾರಿ ಹೋಕರು ಚಾಲನಕನ ಗಮನಕ್ಕೆ ತಂದಿದ್ದಾರೆ.
ಕೂಡಲೇ ಕಾರು ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದ ಪರಿಣಾಮ ಎಲ್ಲರೂ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ. ಈ ಸಂಬಂಧ ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Videos

click me!