Published : Oct 25, 2020, 03:36 PM ISTUpdated : Oct 25, 2020, 04:57 PM IST
ರಕ್ಷಿತಾಳ ಪರ್ಸನಲ್ ಲೈಫ್ ತುಂಬಾನೇ ಕಲರ್ ಫುಲ್ ಆಗಿತ್ತು. ಮಣಿಪಾಲದ ಕಾಲೇಜೊಂದರಲ್ಲಿ ಎರಡನೇ ವರ್ಷದ ಪದವಿ ಓದುತ್ತಿದ್ದಾಳೆ. ಮಾಡೆಲಿಂಗ್ ಅಂದ್ರೆ ಪಂಚಪ್ರಾಣ,ಅಪ್ಪಟ ಹಳ್ಳಿಯ ಹುಡುಗಿಯಾದ್ರೂ, ಅದರ ಹಂಗೇ ಇಲ್ಲದವರಂತೆ ಬದುಕುತಿದ್ಲು! ಇನ್ ಸ್ಟ್ರಾಗ್ರಾಂ ನಲ್ಲಿ ಕಲರ್ ಫುಲ್ ಪೋಸು ಕೊಟ್ಟು ಫೊಟೋ ಹಾಕುತ್ತಿದ್ಲು. ಮಾಡೆಲಿಂ ಗ್ ನಲ್ಲೂ ಒಂದು ಕೈ ನೋಡೋಣ ಅನ್ನೋ ಪ್ರಯತ್ನಾನೂ ಸಾಗಿತ್ತು. ಮನೆಯಿಂದ ಬಹುತೇಖ ಸಂಪರ್ಕ ಕಡಿದುಕೊಂಡಿದ್ದ ಈಕೆಯ ಬದುಕಿನ ದಿಕ್ಕುತಪ್ಪಿಸಿದವನೇ ಪ್ರಶಾಂತ್ ಕುಂದರ್. ಹೌದು, ರಕ್ಷಿತಾಳನ್ನು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಿದವನೂ ಅವನೇ. ಫರ್ನೀಚರ್ ಅಂಗಡಿಯಗಲ್ಲಿ ಡಿಸೈನರ್ ಕಂ ಸೇಲ್ಸ್ ವಿಭಾಗದಲ್ಲಿ ಕೆಲಸ ಮಾಡುವ ಇವನಿಗೆ, ಈಗಾಗಲೇ ಒಂದು ಮದುವೆ ಆಗಿತ್ತು. ಯೌವನದ ಹುಚ್ಚಾಟದಲ್ಲಿದ್ದ ರಕ್ಷಿತಾಗೆ ಅದೇನೋ ಕನಸು ಹಚ್ಚಿ, ಆಕೆಯೊಂದಿಗೆ ಲೀವಿಂಗ್ ರಿಲೇಶನ್ ಶಿಪ್ ಬೇರೆ ನಡೆಸುತ್ತಿದ್ದ. ಈತನ ಈ ಚಾಳಿ ತಿಳಿದ ಪತ್ನಿ, ಇದೇ ವಿಚಾರದಲ್ಲಿ ರಕ್ಷಿತಾಗೂ ದಬಾಯಿಸಿರಬೇಕು ಅನ್ನೋ ಮಾತು ಕೇಳಿಬರುತ್ತಿದೆ. ಇದೇ ಸಂಘರ್ಷ ಈಗ ರಕ್ಷಿತಾಳ ಸಾವಿನಲ್ಲಿ ಕೊನೆಯಾಗಿದೆ.