ಬೆಂಗಳೂರಲ್ಲಿ ಮಹಾಮಳೆ: 50 ಕುಟುಂಬಗಳಿಗೆ 25000 ಮೊತ್ತದ ಪರಿಹಾರ ಚೆಕ್‌ ವಿತರಣೆ

First Published | Oct 25, 2020, 7:57 AM IST

ಬೆಂಗಳೂರು(ಅ. 25):  ರಾಜಧಾನಿಯಲ್ಲಿ ಶುಕ್ರವಾರ ರಾತ್ರಿ ಸುರಿದ ಮಳೆಯಿಂದ ಹಾನಿಗೊಳಗಾಗಿರುವ ದತ್ತಾತ್ರೇಯನಗರದ 50 ಕುಟುಂಬಗಳಿಗೆ ತಲಾ 25 ಸಾವಿರ ರು. ಮೊತ್ತದ ಪರಿಹಾರದ ಚೆಕ್‌ ವಿತರಿಸಲಾಗಿದೆ.

ಸಂತ್ರಸ್ತ ಕುಟುಂಬಗಳಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು 25 ಸಾವಿರ ರು. ಪರಿಹಾರ ಘೋಷಿಸಿದ ಬೆನ್ನಲ್ಲೇ ಶನಿವಾರ ಸಂಜೆ ಕಂದಾಯ ಸಚಿವ ಆರ್‌.ಅಶೋಕ್‌ ಹಾಗೂ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಪರಿಹಾರದ ಚೆಕ್‌ ಹಸ್ತಾಂತರಿಸಿದರು.
ಮುಖ್ಯವಾಗಿ ತಳ ಮಹಡಿಯಲ್ಲಿ ಹಾಗೂ ಹಾಲಿ ನೆಲೆಸಿರುವವರಿಗೆ ಪರಿಹಾರ ನೀಡಲು ನಿರ್ಧರಿಸಲಾಗಿದೆ. ಸ್ವತ್ತಿನ ವಿಳಾಸ, ವಾಸಿಸುವವರ ಹೆಸರು, ಮನೆ ಮಾಲೀಕರ ಹೆಸರು ಮತ್ತು ಮೊಬೈಲ್‌ ಸಂಖ್ಯೆ, ಹಾನಿಗೊಳಗಾದ ಮನೆ ವಸ್ತುಗಳು, ಸ್ಥಿರಾಸ್ತಿ, ವಾಹನಗಳು, ದವಸ-ಧಾನ್ಯ, ಅಂದಾಜು ಮೊತ್ತ ಮತ್ತು ಸಹಿ ಸಂಗ್ರಹಿಸಿ ಮನೆಗಳನ್ನು ಪಾಲಿಕೆ ಸಮೀಕ್ಷೆ ನಡೆಸಿದೆ.
Tap to resize

ಶನಿವಾರ ಹೊಸಕೆರೆಹಳ್ಳಿ, ದತ್ತಾತ್ರೇಯನಗರದಲ್ಲಿ 300ಕ್ಕೂ ಅಧಿಕ ಮನೆಗಳನ್ನು ಸಮೀಕ್ಷೆ ಮಾಡಲಾಗಿದ್ದು, ಈ ಪೈಕಿ 50 ಕುಟುಂಬಕ್ಕೆ ಪರಿಹಾರ ನೀಡಲಾಗಿದೆ. ಅಂತೆಯೆ ಕುಮಾರಸ್ವಾಮಿ ಲೇಔಟ್‌, ಉತ್ತರಹಳ್ಳಿಗಳಲ್ಲಿ ತಲಾ 50 ಕುಟುಂಬಗಳನ್ನು ಗುರುತಿಸಲಾಗಿದೆ.
ಈ ಎಲ್ಲ ಕುಟುಂಬಗಳಿಗೆ ಭಾನುವಾರ(ಅ.25) ಮಧ್ಯಾಹ್ನದ ವೇಳೆಗೆ ಪರಿಹಾರ ಚೆಕ್‌ ವಿತರಿಸುವುದಾಗಿ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

Latest Videos

click me!