ಇದು ಕೊಪ್ಪಳದ ಕೋವಿಡ್ ವಾರ್ಡ್‌ನಲ್ಲಿ ಕರ್ತವ್ಯದಲ್ಲಿರುವ ನರ್ಸಿಂಗ್ ಅಧಿಕಾರಿ ಮಂಜುನಾಥ ಅವರ ಸೇವಾಕೈಂಕರ್ಯ. ಬಹುತೇಕ ಕೊರೋನಾ ವಾರಿಯರ್ಸ್ ಕಥೆ ಹೀಗೆ. ಮಂಜುನಾಥ ದಿನವೂ ವಿಡಿಯೋ ಕಾಲ್ ಮೂಲಕ ಮಗುವನ್ನು ನೋಡುತ್ತಾರೆ, ಪತ್ನಿಯಲ್ಲಿ ಮಾತನಾಡಿಸುತ್ತಾರೆ. ಆದರೆ ಖುದ್ದಾಗಿ ನೋಡುವ ಭಾಗ್ಯ ಇವರಿಗೆ ಲಭಿಸಿಲ್ಲ.
ಜಿಲ್ಲಾಸ್ಪತ್ರೆಯಲ್ಲಿ ನರ್ಸಿಂಗ್ ಅಧಿಕಾರಿಯಾಗಿ ಕಳೆದ 6 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಮಂಜುನಾಥಗೆ ಇದೀಗ ಕೋವಿಡ್ ವಾರ್ಡ್‌ನಲ್ಲಿ ಕರ್ತವ್ಯ. ಇವರ ಪತ್ನಿಗೆ ಏ.1 ರಂದು ವಿಜಯಪುರದಲ್ಲಿ ಹೆರಿಗೆಯಾಗಿ ಗಂಡು ಮಗು ಜನಿಸಿದೆ. ಇವರಿಗೆ ಹೆರಿಗೆ ಸಂದರ್ಭದಲ್ಲೂ ಅಲ್ಲಿಗೆ ಹೋಗಲಾಗಲಿಲ್ಲ. ಇದೀಗ ಒಂದು ತಿಂಗಳಾದರೂ ಪ್ರತ್ಯಕ್ಷವಾಗಿ ಮಗುವನ್ನು ಮಾತನಾಡಿಸಲಾಗಿಲ್ಲ. ಪತ್ನಿಯನ್ನು ಸಂತೈಸಲಾಗಿಲ್ಲ. ಸಂತಹ ಹಂಚಿಕೊಳ್ಳಲಾಗಿಲ್ಲ. ಪ್ರತಿ ದಿನ ವಿಡಿಯೋ ಕಾಲ್ ಮುಖಾಂತರ ಮಾತನಾಡುತ್ತಾರೆ ಅಷ್ಟೇ.
ಕೋವಿಡ್ ವಾರ್ಡ್‌ನಲ್ಲಿ ಕೆಲಸ ಮಾಡುವವರಿಗೆ ವಾರ ಅಥವಾ 15 ದಿನದ ಬಳಿಕ ಕರ್ತವ್ಯದಲ್ಲಿ ಬಿಡುವು ಸಿಕ್ಕರೂ ಹೊರ ಹೋಗುವಂತಿಲ್ಲ. ಕ್ವಾರಂಟೈನ್ ಆಗಿರಬೇಕು. ಇದರಿಂದ ಇವರಿಗೆ ವಿಜಯಪುರಕ್ಕೆ ಹೋಗಲು ಸಾಧ್ಯವಾಗಿಲ್ಲ. ವಿಜಯಪುರಕ್ಕೆ ಹೋಗಿ ಮಗು, ಪತ್ನಿ ಜೊತೆ ಸಮಯ ಕಳೆಯಬೇಕೆಂದುಕೊಂಡಿದ್ದರೂ ಕೋವಿಡ್ ಇರುವುದರಿಂದ ಅವರು ವಿಜಯಪುರಕ್ಕೆ ತೆರಳಲೂ ಸಹ ಮುಂದಾಗಿಲ್ಲ. ಇದೀಗ ಪತ್ನಿಯ ಹೆರಿಗೆ ಸಂದರ್ಭದಲ್ಲಿ ಪತಿಗೂ ಪಿತೃತ್ವ ರಜೆ ಸಿಗುತ್ತದೆ. ಆದರೆ ಇವರು ಅದನ್ನು ಪಡೆದುಕೊಳ್ಳದೇ ಕೋವಿಡ್ ರೋಗಿಗಳ ಸೇವೆಯಲ್ಲಿ ನಿರತರಾಗಿದ್ದಾರೆ.
ಇವರ ಕಾರ್ಯ ಈಗ ವ್ಯಾಪಕ ಪ್ರಸಂಶೆಗೆ ಪಾತ್ರವಾಗಿದೆ. ಅವರು ವೀಡಿಯೋ ಕಾಲ್‌ನಲ್ಲಿ ಮುದ್ದಾಡುವ ಪರಿ ಎಂಥವರಿಗೂ ಕನಿಕರ ಉಕ್ಕಿಬರುತ್ತದೆ. ಕರ್ತವ್ಯ ಎಂದರೆ ಹೀಗೆ ನೋಡಿ ಎನ್ನುವಂತಾಗಿದೆ.
ಇವರ ಕಾರ್ಯ ಈಗ ವ್ಯಾಪಕ ಪ್ರಸಂಶೆಗೆ ಪಾತ್ರವಾಗಿದೆ. ಅವರು ವೀಡಿಯೋ ಕಾಲ್‌ನಲ್ಲಿ ಮುದ್ದಾಡುವ ಪರಿ ಎಂಥವರಿಗೂ ಕನಿಕರ ಉಕ್ಕಿಬರುತ್ತದೆ. ಕರ್ತವ್ಯ ಎಂದರೆ ಹೀಗೆ ನೋಡಿ ಎನ್ನುವಂತಾಗಿದೆ.