ವರ್ಷ ಹರೀಶ್ ಗೌಡ ಅವರು ತಮ್ಮ ಇನ್ಸ್ಟಾಗ್ರಾಂ ಅಕೌಂಟ್ ನಲ್ಲಿ ಹಾಕಿದ್ದ ಪೋಸ್ಟ್ ಗೆ dkgowda8456 ಹೆಸರಿನ ಅನಾಮಿಕ ಖಾತೆಯಿಂದ ಅಶ್ಲೀಲ ಕಮೆಂಟ್ ಮಾಡಲಾಗಿದೆ. ಇದರಿಂದ ವಿಚಲಿತರಾಗಿರುವ ವರ್ಷ ಹರೀಶ್ ಗೌಡ ಅವರು, ಅಶ್ಲೀಲ ಕಮೆಂಟ್ ಹಾಕಿ ಮಾನಸಿಕ ಭಾವನೆಗೆ ಧಕ್ಕೆ ಉಂಟು ಮಾಡಿರುವ ಆರೋಪಿಯನ್ನು ಪತ್ತೆ ಮಾಡಿ, ಆತನ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಮೈಸೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.