ಬಿದಿರಿನ ಸುಂದರ ಕರಕುಶಲ ವಸ್ತುಗಳಿಗೆ ಬೇಡಿಕೆಯೇ ಇಲ್ಲ..!

First Published | May 2, 2020, 2:22 PM IST

ಕೊರೋನಾ ಸೋಂಕಿನ ಪರಿಣಾಮ ಲಾಕ್‌ಡೌನ್‌ ಮಾಡಲಾಗಿದ್ದು, ಹಲವು ಕುಟುಂಬಗಳು ಆದಾಯವಿಲ್ಲದೆ ಪರಿತಪಿಸುತ್ತಿದ್ದಾರೆ. ಬಸವನಹಳ್ಳಿಯಲ್ಲಿ ಬಿದಿರಿನಿಂದ ವಿವಿಧ ಬಗೆಯ ಕರಕುಶಲ ವಸ್ತುಗಳನ್ನು ತಯಾರಿಸುತ್ತಿದ್ದ ಕುಶಲ ಕರ್ಮಿಗಳೂ ಈ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದೆಡೆ ಬಿದಿರಿನಿಂದ ತಯಾರಿಸಿದ ವಸ್ತುಗಳು ಮಾರಾಟವಾಗದೆ ಬಿದ್ದಿದ್ದರೆ, ಮತ್ತೊಂದು ಕಡೆ ಬಿದಿರು ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬಿದಿರು ಕೆಲಸಗಾರರು ಸಮಸ್ಯೆ ಅನುಭವಿಸುತ್ತಿದ್ದಾರೆ. ಇಲ್ಲಿವೆ ಫೋಟೋಸ್

ಬಸವನಹಳ್ಳಿಯ ಸುಮಾರು 30ಕ್ಕೂ ಅಧಿಕ ಕುಟುಂಬಗಳಿಗೆ ಬಿದಿರಿನಿಂದ ಕರಕುಶಲ ವಸ್ತುಗಳನ್ನು ತಯಾರು ಮಾಡುವುದನ್ನೇ ಮುಖ್ಯ ವೃತ್ತಿಯಾಗಿದೆ. ಈಗ ಕರಕುಶಲ ವಸ್ತು ತಯಾರಿಸಲು ಬಿದಿರು ಸಿಗದೆ ಹಾಗೂ ತಾವು ಬಿದಿರಿನಿಂದ ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡಲಾಗದ ಪರಿಸ್ಥಿತಿಯಿಂದ ಕಂಗಾಲಾಗಿದ್ದಾರೆ.
undefined
ಬಸವನಹಳ್ಳಿಯಲ್ಲಿ ರಸ್ತೆ ಬದಿ ಇಡಲಾಗಿರುವ ಕರಕುಶಲ ವಸ್ತುಗಳನ್ನು ಅಕ್ಕ ಪಕ್ಕದ ಗ್ರಾಮಸ್ಥರು ಹಾಗೂ ಪ್ರವಾಸಿಗರು ಖರೀದಿಸಿ ತೆಗೆದುಕೊಂಡು ಹೋಗುತ್ತಾರೆ. ಆದರೆ ಈಗ ವಸ್ತುಗಳನ್ನು ಕೇಳುವವರೇ ಇಲ್ಲ.
undefined

Latest Videos


ಕರಕುಶಲ ವಸ್ತುಗಳನ್ನು ತಯಾರು ಮಾಡಲು ಮಂಡ್ಯ, ಸುಳ್ಯ ಮತ್ತಿತರ ಕಡೆಗಳಿಂದ ರೈತರು ಬೆಳೆದ ಬಿದಿರನ್ನು ತಂದು ಅದರಲ್ಲಿ ಕೋಳಿ ಪಂಜರ, ಕುಕ್ಕೆ, ಮೊರ, ಮದುವೆ ಪರಿಕರಗಳು, ಏಣಿ, ಬೀಸಣಿಕೆ, ಅನ್ನದ ಕುಕ್ಕೆ, ಕಾಫಿ ಕುಕ್ಕೆ, ಬಿದಿರು ಚಾಪೆ, ರೇಷ್ಮೆ ತಟ್ಟೆಹೀಗೆ ವಿವಿಧ ಬಗೆಯ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದರು.
undefined
ಆದರೆ ಲಾಕ್‌ಡೌನ್‌ನಿಂದಾಗಿ ಗಡಿಯ ಚೆಕ್‌ಪೋಸ್ಟ್‌ಗಳು ಬಂದ್‌ ಆಗಿರುವುದರಿಂದ ಬಿದಿರು ತರಲು ಸಮಸ್ಯೆಯಾಗಿದೆ. ಕೆಲವರು ಸಾಲ ಮಾಡಿ ಬಿದಿರನ್ನು ಈ ಹಿಂದೆ ತಂದಿದ್ದು, ಅದರಲ್ಲಿ ವಿವಿಧ ಬಗೆಯ ಪರಿಕರಗಳನ್ನು ಮಾಡಿಟ್ಟಿದ್ದಾರೆ.
undefined
ಸರ್ಕಾರದಿಂದ ಪಡಿತರ ಅಕ್ಕಿ ಹೊರತುಪಡಿಸಿ ಈ ಕುಟುಂಬದವರಿಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ಸಾಲ ಮಾಡಿ ಕಳೆದ ಹಲವು ದಿನಗಳಿಂದ ತಮ್ಮ ಕುಟುಂಬವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.
undefined
ಎಲ್ಲರಿಗೂ ಸಹಾಯ ಮಾಡುತ್ತಿರುವಂತೆ ನಮಗೂ ಸಹಾಯ ಮಾಡಬೇಕಿದೆ. ಲಾಕ್‌ಡೌನ್‌ ಹೀಗೆ ಮುಂದುವರಿದರೆ ನಮ್ಮ ಜೀವನ ಸಾಗಿಸುವುದು ಮತ್ತಷ್ಟುಕಷ್ಟಎನ್ನುತ್ತಾರೆ ಬಿದಿರು ಕೆಲಸಗಾರರು.
undefined
click me!