ನಮ್ಮ ಬೆಂಗಳೂರು ಫೌಂಡೇಷನ್‌ನಿಂದ ಮಾಸ್ಕ್‌ ಧರಿಸಿ ಉಗುಳದಿರಿ ಅಭಿಯಾನ

Kannadaprabha News   | Asianet News
Published : Oct 18, 2020, 08:33 AM IST

ಬೆಂಗಳೂರು(ಅ.18):  ಕೊರೋನಾ ಸೋಂಕು ನಿಯಂತ್ರಣಕ್ಕೆ ‘ಮಾಸ್ಕ್‌ ಧರಿಸಿ ಉಗುಳದಿರಿ’ ಜಾಗೃತಿ ಅಭಿಯಾನ ಆರಂಭಿಸಿರುವ ‘ನಮ್ಮ ಬೆಂಗಳೂರು ಫೌಂಡೇಷನ್‌’ ನಗರದ ಪೌರಕಾರ್ಮಿಕರಿಗೆ, ಆಟೋ ಚಾಲಕರಿಗೆ, ಬೀದಿ ವ್ಯಾಪಾರಿಗಳು, ಕೊಳಗೇರಿ ನಿವಾಸಿಗಳು ಸೇರಿದಂತೆ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ 10 ಸಾವಿರ ಮಾಸ್ಕ್‌, 2,500 ಸ್ಯಾನಿಟೈಜರ್‌ ಹಾಗೂ 250 ಫೇಸ್‌ಶೀಲ್ಡ್‌ ವಿತರಣೆ ಮಾಡಲಾಗಿದೆ.

PREV
14
ನಮ್ಮ ಬೆಂಗಳೂರು ಫೌಂಡೇಷನ್‌ನಿಂದ ಮಾಸ್ಕ್‌ ಧರಿಸಿ ಉಗುಳದಿರಿ ಅಭಿಯಾನ

ಲಾಕ್‌ಡೌನ್‌ ವಿನಾಯಿತಿ ಬಳಿಕ ಜನರಲ್ಲಿ ಸೋಂಕಿನ ಬಗ್ಗೆ ನಿರ್ಲಕ್ಷ್ಯ ಹೆಚ್ಚಾಗಿದೆ. ಹಾಗಾಗಿ, ನಗರದಲ್ಲಿ ಸೋಂಕಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ‘ನಮ್ಮ ಬೆಂಗಳೂರು ಫೌಂಡೇಷನ್‌’ ಅ.2ರಿಂದ ‘ಮಾಸ್ಕ್‌ ಧರಿಸಿ, ಉಗುಳದಿರಿ’ ಅಭಿಯಾನ ಆರಂಭಿಸಿದೆ.

24

ಮಾಸ್ಕ್‌, ಸ್ಯಾನಿಟೈಸರ್‌ ಹಾಗೂ ಫೇಸ್‌ಸೀಲ್ಡ್‌ ವಿತರಣೆ ಮಾಡುವುದು ಮಾತ್ರವಲ್ಲ. ಸಾರ್ವಜನಿಕ ಸ್ಥಳದಲ್ಲಿ ಕಡ್ಡಾಯವಾಗಿ ಮಾಸ್ಕ್‌ ಧರಿಸುವುದು, ಮೂಗು-ಬಾಯಿ ಸಂಪೂರ್ಣವಾಗಿ ಮುಚ್ಚುವಂತೆ ಧರಿಸುವುದು, ಸಾರ್ವಜನಿಕ ಸ್ಥಳದಲ್ಲಿ ಉಗುಳ ಬಾರದು, ಮಾರುಕಟ್ಟೆ, ಬಸ್‌ ನಿಲ್ದಾಣ ಸೇರಿದಂತೆ ಜನದಟ್ಟಣೆ ಇರುವ ಪ್ರದೇಶದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದು ‘ನಮ್ಮ ಬೆಂಗಳೂರು ಫೌಂಡೇಷನ್‌’ನ ಪ್ರಧಾನ ವ್ಯವಸ್ಥಾಪಕ ಹರೀಶ್‌ ಕುಮಾರ್‌ ತಿಳಿಸಿದ್ದಾರೆ.

34

ಮಾಸ್ಕ್‌ ವಿತರಣೆ ಹಾಗೂ ಜಾಗೃತಿ ಅಭಿಯಾನಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್‌, ಪೊಲೀಸ್‌ ಆಯುಕ್ತ ಕಮಲ್‌ ಪಂತ್‌, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜಿನೀಶ್‌, ಆರೋಗ್ಯ ಇಲಾಖೆ ಆಯುಕ್ತ ಪಂಕಜ್‌ ಕುಮಾರ್‌ ಪಾಂಡೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಸಹಕಾರ ನೀಡಿವೆ ಎಂದು ವಿವರಿಸಿದರು.

44

‘ನಮ್ಮ ಬೆಂಗಳೂರು ಫೌಂಡೇಷನ್‌’ ವತಿಯಿಂದ ಹಮ್ಮಿಕೊಂಡ ‘ಮಾಸ್ಕ್‌ ಧರಿಸಿ ಉಗುಳದಿರಿ’ ಜಾಗೃತಿ ಅಭಿಯಾನದಡಿ ವಸಂತನಗರ ವಾರ್ಡ್‌ 160 ಪೌರಕಾರ್ಮಿಕರು, ಆಟೋ ಚಾಲಕರು ಮತ್ತು ಸಹಾಯಕರಿಗೆ ಶನಿವಾರ ಮಾಸ್ಕ್‌, ಸ್ಯಾನಿಟೈಸರ್‌ ಹಾಗೂ ಫೇಸ್‌ಸೀಲ್ಡ್‌ಗಳನ್ನು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ವಿತರಣೆ ಮಾಡಿದ್ದಾರೆ. 

click me!

Recommended Stories