ನೆರವಿಗೆ ಧಾವಿಸಿದ ಸಿಎಂ ಪುತ್ರರು,  30 ಸಾವಿರ ದಿನಸಿ ಕಿಟ್,  ಆಂಬ್ಯುಲೆನ್ಸ್

First Published | May 30, 2021, 9:42 PM IST

ಶಿವಮೊಗ್ಗ(ಮೇ 30)  ಕೊರೋನಾ ಕಾಲದ ಹೋರಾಟ ಮತ್ತು ಲಾಕ್ ಡೌನ್ ಪರಿಣಾಮ ಸಂಕಷ್ಟಕ್ಕೆ ಸಿಲುಕಿದ್ದವರ ನೆರವಿಗೆ ಸಿಎಂ ಬಿಎಸ್ ಯಡಿಯೂರಪ್ಪ ಪುತ್ರರು ಧಾವಿಸಿದ್ದಾರೆ.  ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ  ವಿಜಯೇಂದ್ರ ಶಿವಮೊಗ್ಗದ 1500 ಪೌರಕಾರ್ಮಿಕರಿಗೆ ಪಡಿತರ ವಿತರಿಸಿದರು. 

ಕೊರೋನಾ ಮತ್ತು ಲಾಕ್ ಡೌನ್ ಸಂಕಷ್ಟ, ಸಮಸ್ಯೆಯಲ್ಲಿದ್ದವರ ನೆರವಿಗೆ ಧಾವಿಸಿದ ಸಿಎಂ ಪುತ್ರರು
30 ಸಾವಿರ ಫುಡ್ ಕಿಟ್ ವಿತರಣೆ, ನೆರವಿಗೆ ನಿಂತ ಸೇವಾ ಭಾರತಿ ಕರ್ನಾಟಕ ಪ್ರೇರಣಾ ಎಜುಕೇಷನಲ್ ಟ್ರಸ್ಟ್
Tap to resize

ಪ್ರೇರಣಾ ಎಜುಕೇಶನಲ್ ಟ್ರಸ್ಟ್‌ನಿಂದ ಪಡಿತರ ವಿತರಣೆ ಮಾಡಲಾಯಿತು.
ಸಿಎಂ ಪುತ್ರ ಸಂಸದ ಬಿ ವೈ ರಾಘವೇಂದ್ರ 30 ಸಾವಿರ ದಿನಸಿ ಕಿಟ್ ವಿತರಣೆ ಮಾಡಿದರು.
ವಿವಿಧ ವರ್ಗಗಳಲ್ಲಿ ಕೆಲಸ ಮಾಡುತ್ತಿರುವರಿಗೆ ಸುಮಾರು 30 ಸಾವಿರ ದಿನಸಿ ಕಿಟ್ ಗಳನ್ನು ಸ್ವಂತ ಹಣದಲ್ಲಿ ವಿತರಿಸಿದರು.
ಸೇವಾ ಭಾರತಿ ಕರ್ನಾಟಕ ಪ್ರೇರಣಾ ಎಜುಕೇಷನಲ್ ಟ್ರಸ್ಟ್ಕೊರೋನಾ ವಾರಿಯರ್ಸ್ ನೆರವಿಗೆ ನಿಂತಿತು.
ಪೌರ ಕಾರ್ಮಿಕರು, ಅಂಗನವಾಡಿ ಶಿಕ್ಷಕರು, ಸಹಾಯಕರಿಗೆ, ಆಶಾ ಕಾರ್ಯಕರ್ತೆಯರು, ಅಡುಗೆ ಭಟ್ಟರು, ಅರ್ಚಕರು, ಮಾಧ್ಯಮದವರು, ಪತ್ರಿಕಾ ವಿತರಕರು, ಫೋಟೋ ಗ್ರಾಫರ್, ಕ್ಷೌರಿಕರು, ಬಸ್ ಎಜೆಂಟ್, ಡ್ರೈವರ್ ಗಳಿಗೆ ನೆರವು ನೀಡಲಾಯಿತು.
ಡಿಎಆರ್ ಗ್ರೌಂಡ್ ನಲ್ಲಿ ಪೊಲೀಸ್ ಸಿಬ್ಬಂದಿ, ಹೋಮ್ ಗಾರ್ಡ್ ಗಳಿಗೆ, ಮೆಡಿಕಲ್ ಕಾಲೇಜಿನಆರೋಗ್ಯ ಇಲಾಖೆ ಸಿಬ್ಬಂದಿಗೆ ಕಿಟ್ ವಿತರಿಸಲಾಯಿತು.
ಕೊರೋನಾ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಯಾವುದೇ ಕೊರತೆ ಆಗದಂತೆ, ಸಮಸ್ಯೆ ಆಗದಂತೆ ಶ್ರಮಿಸುತ್ತಿರುವ ಬಿವೈ ರಾಘವೇಂದ್ರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಕೊರೋನಾ ಮತ್ತು ಲಾಕ್ ಡೌನ್ ಸಂಕಷ್ಟ, ಸಮಸ್ಯೆಯಲ್ಲಿದ್ದವರ ನೆರವಿಗೆ ಧಾವಿಸಿದ ಸಿಎಂ ಪುತ್ರರು
ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಉಚಿತ ಆಂಬ್ಯುಲೆನ್ಸ್,ಆಕ್ಸಿಜನ್ ಕಾನ್ಸನ್ಟ್ರೇಟರ್ ಗಳನ್ನುನೀಡಿದ್ದಾರೆ.

Latest Videos

click me!