Miracle in Vijayapura: ಮರಿಯನ್ನೇ ಹಾಕದ 2 ತಿಂಗಳ ಮೇಕೆ ಮರಿ ಹಾಲು ಕೊಡ್ತಿದೆ!

Published : May 15, 2026, 12:17 PM IST

ವಿಜಯಪುರ ಜಿಲ್ಲೆಯಲ್ಲಿ ಪ್ರಕೃತಿಯ ವಿಸ್ಮಯವೊಂದು ನಡೆದಿದೆ. ಇನ್ನೂ ಮರಿಯನ್ನೇ ಹಾಕದ, ಕೇವಲ ಎರಡು ತಿಂಗಳ ಮೇಕೆ ಮರಿಯೊಂದು ಹಾಲು ನೀಡುವ ಮೂಲಕ ಎಲ್ಲರನ್ನೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ. 

PREV
13
ಜಿಗಜೇವಣಿ ಗ್ರಾಮದಲ್ಲಿ ಅಚ್ಚರಿ ಮೂಡಿಸಿದ ಮೇಕೆ ಮರಿ!

ಜಿಲ್ಲೆಯ ಚಡಚಣ ತಾಲೂಕಿನ ಜಿಗಜೇವಣಿ ಗ್ರಾಮದಲ್ಲಿ ಈ ಅಚ್ಚರಿಯ ಘಟನೆ ಸಂಭವಿಸಿದೆ. ಗ್ರಾಮದ ನಿವಾಸಿ ಶ್ರೀಮಂತ ಹೊನ್ನಮೊರೆ ಎಂಬುವರಿಗೆ ಸೇರಿದ ಮೇಕೆ ಮರಿ ಇದಾಗಿದ್ದು, ಸದ್ಯ ಇಡೀ ಜಿಲ್ಲೆಯಾದ್ಯಂತ ಭಾರಿ ಸಂಚಲನ ಸೃಷ್ಟಿಸಿದೆ.

23
ವೈಜ್ಞಾನಿಕ ಲೋಕಕ್ಕೆ ಸವಾಲು

ಸಾಮಾನ್ಯವಾಗಿ ಮೇಕೆಗಳು ಪ್ರಾಯಕ್ಕೆ ಬಂದು, ಮರಿ ಹಾಕಿದ ನಂತರವಷ್ಟೇ ಹಾಲು ನೀಡುತ್ತವೆ. ಆದರೆ, ಕೇವಲ ಎರಡು ತಿಂಗಳ ಈ ಪುಟ್ಟ ಮರಿ ಹಾಲು ನೀಡುತ್ತಿರುವುದು ಪಶು ವೈದ್ಯರು ಹಾಗೂ ವೈಜ್ಞಾನಿಕ ಲೋಕಕ್ಕೇ ದೊಡ್ಡ ಸವಾಲೊಡ್ಡಿದೆ

33
ಮೇಕೆ ಮರಿ ನೋಡಲು ಬರ್ತಿರೋ ಜನ

ಈ ವಿಸ್ಮಯದ ಸುದ್ದಿ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಜನರು ಜಿಗಜೇವಣಿ ಗ್ರಾಮಕ್ಕೆ ತಂಡೋಪತಂಡವಾಗಿ ಧಾವಿಸುತ್ತಿದ್ದಾರೆ. ಅಚ್ಚರಿಯಿಂದ ಮೇಕೆ ಮರಿಯನ್ನು ನೋಡಿ, ಹಾಲು ಹಿಂಡುವ ದೃಶ್ಯವನ್ನು ಕಣ್ಣುಂಬಿಕೊಳ್ಳುತ್ತಿದ್ದಾರೆ.

Read more Photos on
click me!

Recommended Stories