ಹಾವೇರಿಯಲ್ಲಿ ಗಾಳಿ ಮಳೆಗೆ ಹಾರಿ ಹೋದ ಗುಡಿಸಲು, ಸಂಕಷ್ಟಕ್ಕೆ ಸಿಲುಕಿದ ಬಾಣಂತಿ, ಮಕ್ಕಳು

Published : May 14, 2026, 11:31 PM IST

ಹಾವೇರಿಯಲ್ಲಿ ಸುರಿದ ಬಿರುಗಾಳಿ ಸಹಿತ ಮಳೆಗೆ ಅಲೇಮಾರಿ ಸಮುದಾಯದ ಗುಡಿಸಲುಗಳು ಹಾರಿ ಹೋಗಿದೆ. ಪರಿಣಾಮ ಬಾಣಂತಿ, ಮಕ್ಕಳು ಸೇರಿದಂತೆ ಹಲವು ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಕಂದಮ್ಮನ ಹಿಡಿದು ಬಾಣಂತಿ ಕಣ್ಣೀರಿಡುತ್ತಿದ್ದಾರೆ.

PREV
15
ಹಾವೇರಿಯಲ್ಲಿ ಬಿರುಗಾಳಿ ಸಹಿತ ಮಳೆ

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇಂದು ಮಳೆಯಾಗಿದೆ. ಈ ಪೈಕಿ ಹಲವೆಡೆ ಭಾರಿ ಬಿರುಗಾಳಿ ಸಹಿತ ಮಳೆಯಾಗಿದೆ. ಗಾಳಿ ಮಳೆಗೆ ಅಲೇಮಾರಿ ಸಮುದಾಯದ ಗುಡಿಸಲುಗಳು ಹಾರಿ ಹೋಗಿದೆ. ಹಲೆವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮಳೆ ನೀರು ನುಗ್ಗಿ ಅವಾಂತರ ಸೃಷ್ಚಿಯಾಗಿದೆ.

25
ಸಂಕಷ್ಟಕ್ಕೆ ಸಿಲುಕಿದ ಬಾಣಂತಿ ಹಾಗೂ ಮಕ್ಕಳು

ಭಾರಿ ಗಾಳಿ ಮಳೆಗೆ ಗುಡಿಸಲು ಹಾರಿಹೋಗಿ ಬಾಣಂತಿ ಹಾಗೂ ಮಕ್ಕಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗುಡಿಸಲೊಳಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಕೈಯಲ್ಲಿ ಎಳೆಯ ಕಂದನ ಹಿಡಿದು ಗುಡಿಸಲಿನ ಮುಂದೆ ಬಾಣಂತಿ ಅಸಹಾಯಕರಾಗಿ ನಿಂತು ಕಣ್ಣೀರಿಡುತ್ತಿದ್ದಾರೆ.

35
ಮನೆ ಇಲ್ಲ, ಜಾಗವೂ ಇಲ್ಲ

ಮಳೆ ಗಾಳಿ ಹಾಗೂ ಚಳಿಗೆ ಎಳೆಯ ಕಂದಮ್ಮ ಅಳುತ್ತಿದೆ. ನಾವು ಮತ ಹಾಕಿದರೂ ನಮಗೆ ಪ್ರಯೋಜನ ಏನೂ ಇಲ್ಲ. ನಮ್ಮ ಗುಡಿಸಲುಗಳಿಗೆ ನೀರು ನುಗ್ಗಿದೆ. ನಮಗೆ ಸ್ವಂತ ಮನೆ ಇಲ್ಲ, ಸ್ವಂತ ಜಾಗವೂ ಇಲ್ಲ. ನೆಲೆ ಇಲ್ಲದ ನಮ್ಮ ಗೋಳು ಕೇಳುವವರೆ ಇಲ್ಲ ಎಂದು ಅಲೆಮಾರಿ ಕುಟುಂಬಗಳು ಕಣ್ಣೀರಿಟ್ಟಿದೆ.

45
ಮಕ್ಕಳ ಪರಿಸ್ಥಿತಿ ಶೋಚನೀಯ

ಹಾವೇರಿ ನಗರದ ಹೊರವಲಯದಲ್ಲಿರೋ ಇಜಾರಿಲಕಮಾಪುರ ಬಳಿ ಇರುವ ಹಲವು ಅಲೆಮಾರಿ ಕುಟುಂಬಗಳ ಗುಡಿಸಲು ಗಾಳಿ ಮಳೆಗೆ ಹಾರಿ ಹೋಗಿದೆ. ಟಾರ್ಪಲ್ ಹಾಕಿದ್ದ ಮನೆಗಳಲ್ಲಿ ನೀರು ತುಂಬಿಕೊಂಡಿದೆ. ಇದ್ದ ದಾಸ್ತಾನುಗಳು ನೀರಿನಲ್ಲಿ ಹಾಳಾಗಿದೆ. ಮಕ್ಕಳು ಪರಿಸ್ಥಿತಿ ಶೋಚನೀಯವಾಗಿದೆ.

55
ವಿದ್ಯುತ್ ಸಂಪರ್ಕ ಕಡಿತ

ಹಾವೇರಿಯಲ್ಲಿ ಸುರಿದ ಭಾರಿ ಮಳೆಗೆ ಹಲವೆಡೆ ಮರಗಳು ಧರೆಗುರುಗುಳಿದೆ. ಇದರಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ರಸ್ತೆಗಳಿಗೆ ಮರ ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿದೆ

ವಿದ್ಯುತ್ ಸಂಪರ್ಕ ಕಡಿತ.

Read more Photos on
click me!

Recommended Stories