ಎರಡು ಪ್ರತ್ಯೇಕ ರೈಲು ಮಾರ್ಗದ ಕಾಮಗಾರಿಗೆ ವೇಗ; ಮಧುಗಿರಿ–ಶಿರಾ–ಪಾವಗಡ ಜನರ ಕಾಯುವಿಕೆ ಅಂತ್ಯ!

Published : Jul 14, 2026, 12:19 PM IST

ಮಧುಗಿರಿ, ಶಿರಾ ಮತ್ತು ಪಾವಗಡ ಭಾಗದ ಜನರ ದಶಕಗಳ ಕಾಲದ ರೈಲ್ವೆ ಕನಸು ಕೊನೆಗೂ ನನಸಾಗುವತ್ತ ದಾಪುಗಾಲು ಇಟ್ಟಿದೆ. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಈ ಭಾಗದ ಎರಡು ಪ್ರತ್ಯೇಕ ನೂತನ ರೈಲು ಮಾರ್ಗಗಳ ಪ್ರಗತಿಯ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ್ದಾರೆ.

PREV
16
ಕೇಂದ್ರ ಸಚಿವ ವಿ. ಸೋಮಣ್ಣ ಮಾಹಿತಿ

ಮಧುಗಿರಿ, ಶಿರಾ ಹಾಗೂ ಪಾವಗಡ ಭಾಗದ ಜನರು ಹಲವು ದಶಕಗಳಿಂದ ಎದುರು ನೋಡುತ್ತಿದ್ದ ರೈಲ್ವೆ ಸಂಪರ್ಕದ ಕನಸು ಇದೀಗ ನನಸಾಗುವತ್ತ ಸಾಗುತ್ತಿದೆ. 2027ರ ಡಿಸೆಂಬರ್ ವೇಳೆಗೆ ದಾವಣಗೆರೆ–ಪಾವಗಡ ರೈಲು ಮಾರ್ಗವನ್ನು ಲೋಕಾರ್ಪಣೆ ಮಾಡುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಮಾಹಿತಿ ನೀಡಿದ್ದಾರೆ.

26
ಹೊಸ ರೈಲು ಮಾರ್ಗಗಳ ಕಾಮಗಾರಿ

ದಾವಣಗೆರೆ–ತುಮಕೂರು ಹಾಗೂ ತುಮಕೂರು–ಕಲ್ಯಾಣದುರ್ಗ ಸಂಪರ್ಕ ಕಲ್ಪಿಸುವ ಎರಡು ಮಹತ್ವದ ಹೊಸ ರೈಲು ಮಾರ್ಗಗಳ ಕಾಮಗಾರಿ ವೇಗ ಪಡೆದುಕೊಂಡಿದ್ದು, ಹಲವು ವರ್ಷಗಳಿಂದ ಭೂಸ್ವಾಧೀನ ಹಂತದಲ್ಲೇ ವಿಳಂಬವಾಗಿದ್ದ ಯೋಜನೆಗಳು ಇದೀಗ ಚುರುಕುಗೊಂಡಿವೆ.

36
ಪಾವಗಡ–ಮಧುಗಿರಿ–ಕೊರಟಗೆರೆ–ತುಮಕೂರು ಮಾರ್ಗ

ರಾಯದುರ್ಗದಿಂದ ಪಾವಗಡ ಪಟ್ಟಣದವರೆಗೆ ರೈಲು ಮಾರ್ಗದ ಕಾಮಗಾರಿ ಪೂರ್ಣಗೊಂಡಿದ್ದು, ತುಮಕೂರಿನಿಂದ ಊರುಕೆರೆ ಜಂಕ್ಷನ್‌ವರೆಗಿನ ಕಾಮಗಾರಿಯೂ ಮುಕ್ತಾಯವಾಗಿದೆ. ಪಾವಗಡ–ಮಧುಗಿರಿ–ಕೊರಟಗೆರೆ–ತುಮಕೂರು ಮಾರ್ಗದ ಮಧ್ಯ ಭಾಗದಲ್ಲಿಯೂ ಕಾಮಗಾರಿ ವೇಗವಾಗಿ ನಡೆಯುತ್ತಿದೆ.

46
ಗುದ್ದಲಿ ಪೂಜೆ

ಮಧುಗಿರಿ ರೈಲ್ವೇ ನಿಲ್ದಾಣ ನಿರ್ಮಾಣಕ್ಕೆ ಕೇಂದ್ರ ಸಚಿವ ವಿ. ಸೋಮಣ್ಣ ಹಾಗೂ ಸಚಿವ ಕೆ.ಎನ್. ರಾಜಣ್ಣ ಗುದ್ದಲಿ ಪೂಜೆ ನೆರವೇರಿಸಿದ್ದು, ಯೋಜನೆಗೆ ಮತ್ತಷ್ಟು ಚೈತನ್ಯ ಸಿಕ್ಕಿದೆ. ಮತ್ತೊಂದೆಡೆ, ದಾವಣಗೆರೆ–ತುಮಕೂರು ರೈಲು ಮಾರ್ಗದ ಕಾಮಗಾರಿಯೂ ವೇಗ ಪಡೆದುಕೊಂಡಿದ್ದು, ತುಮಕೂರು–ಶಿರಾ ನಡುವಿನ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ.

56
ಈ ಎರಡು ಯೋಜನೆಗಳಿಂದ ಏನು ಲಾಭ?

ಈ ಎರಡೂ ಮಹತ್ವದ ರೈಲು ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಚಾಲನೆ ನೀಡಿಸುವ ಉದ್ದೇಶ ಹೊಂದಿರುವ ರೈಲ್ವೆ ಇಲಾಖೆ, ಇನ್ನೊಂದೂವರೆ ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸುವ ಗಡುವು ನಿಗದಿಪಡಿಸಿದೆ. ಈ ಯೋಜನೆಗಳು ಪೂರ್ಣಗೊಂಡರೆ ತುಮಕೂರು, ಮಧುಗಿರಿ, ಶಿರಾ, ಪಾವಗಡ ಸೇರಿದಂತೆ ಉತ್ತರ ಕರ್ನಾಟಕ ಹಾಗೂ ಆಂಧ್ರ ಗಡಿಭಾಗದ ಜನರಿಗೆ ಉತ್ತಮ ರೈಲು ಸಂಪರ್ಕ ದೊರೆಯಲಿದ್ದು, ವ್ಯಾಪಾರ, ಶಿಕ್ಷಣ ಮತ್ತು ಕೈಗಾರಿಕಾ ಅಭಿವೃದ್ಧಿಗೆ ಹೊಸ ದಿಕ್ಕು ಸಿಗುವ ನಿರೀಕ್ಷೆಯಿದೆ.

66
ಕಾಮಗಾರಿಯ ವಿವರ

1. ತುಮಕೂರು - ಕಲ್ಯಾಣದುರ್ಗ (ಪಾವಗಡ/ಮಧುಗಿರಿ) ಮಾರ್ಗ:

ರಾಯದುರ್ಗದಿಂದ ಪಾವಗಡ ಪಟ್ಟಣದವರೆಗಿನ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಇತ್ತ ತುಮಕೂರಿನಿಂದ ಊರುಕೆರೆ ಜಂಕ್ಷನ್ ವರೆಗಿನ ರೈಲ್ವೆ ಕಾಮಗಾರಿಯೂ ಮುಕ್ತಾಯಗೊಂಡಿದೆ. ಸದ್ಯ ಪಾವಗಡ - ಮಧುಗಿರಿ - ಕೊರಟಗೆರೆ - ತುಮಕೂರು ಮಧ್ಯದ ಭಾಗದಲ್ಲಿ ಕಾಮಗಾರಿ ಅತ್ಯಂತ ವೇಗವಾಗಿ ಪ್ರಗತಿಯಲ್ಲಿದೆ.

2.ತುಮಕೂರು - ದಾವಣಗೆರೆ ನೇರ ಮಾರ್ಗ

ದಾವಣಗೆರೆ ರೈಲು ಮಾರ್ಗದ ಕಾಮಗಾರಿಗೂ ಭಾರಿ ವೇಗ ಸಿಕ್ಕಿದ್ದು, ತುಮಕೂರು ಮತ್ತು ಶಿರಾ ನಡುವಿನ ಕಾಮಗಾರಿ ಈಗಾಗಲೇ ಯಶಸ್ವಿಯಾಗಿ ಪೂರ್ಣಗೊಂಡಿದೆ. ಒಟ್ಟಾರೆಯಾಗಿ, ಈ ಭಾಗದ ಜನರ ಬಹುಕಾಲದ ರೈಲ್ವೆ ಸಂಪರ್ಕದ ಬೇಡಿಕೆಯು ಕಾಲಮಿತಿಯೊಳಗೆ ಪೂರ್ಣಗೊಳ್ಳುವ ಭರವಸೆ ಸಿಕ್ಕಿದ್ದು, ಶೀಘ್ರದಲ್ಲೇ ಈ ಮಾರ್ಗದಲ್ಲಿ ರೈಲುಗಳು ಸಂಚರಿಸಲಿವೆ.

Read more Photos on
click me!

Recommended Stories