ಮೈಷುಗರ್‌ ಕಾರ್ಖಾನೆ ಪರಿಶೀಲಿಸಿದ ಸಚಿವರು, ಸಂಸದೆ: ಇಲ್ಲಿವೆ ಫೋಟೋಸ್

First Published Jun 11, 2020, 11:52 AM IST

ಸಂಸದೆ ಸುಮಲತಾ ಅಂಬರೀಶ್  ಮುಖ್ಯಮಂತ್ರಿಗಳ ಆದೇಶದ ಅನ್ವಯ ಮೈಷುಗರ್‌ ಕಾರ್ಖಾನೆಯನ್ನು ಸಕ್ಕರೆ ಮತ್ತು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್‌, ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡರ ಜೊತೆಯಾಗಿ ಬುಧವಾರ ವೀಕ್ಷಣೆ ಮಾಡಿ ಸಮಗ್ರವಾಗಿ ಸಮಸ್ಯೆಗಳನ್ನು ಆಲಿಸಿದರು.

ಮುಖ್ಯಮಂತ್ರಿಗಳ ಆದೇಶದ ಅನ್ವಯ ಮೈಷುಗರ್‌ ಕಾರ್ಖಾನೆಯನ್ನು ಸಕ್ಕರೆ ಮತ್ತು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್‌, ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡರ ಜೊತೆಯಾಗಿ ಬುಧವಾರ ವೀಕ್ಷಣೆ ಮಾಡಿ ಸಮಗ್ರವಾಗಿ ಸಮಸ್ಯೆಗಳನ್ನು ಆಲಿಸಿದರು.
undefined
ಬೆಳಗ್ಗೆ 11.45ರ ವೇಳೆಗೆ ಮೈಷುಗರ್‌ ಇಬ್ಬರು ಸಚಿವರು ಆಗಮಿಸಿದ ವೇಳೆಯಲ್ಲಿ ರೈತ ಸಂಘ ಹಾಗೂ ರೈತರಲ್ಲೇ ವಿಭಿನ್ನ ಬಣಗಳು ಸಚಿವರಿಗಾಗಿ ಕಾದು ಕುಳಿತಿದ್ದರು.ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಕೂಡ ಸಚಿವರ ಆಗಮನ ನಿರೀಕ್ಷಿಸಿ ಮಾತುಕತೆ ನಡೆಸಲು ಮುಂದಾಗಿದ್ದರು.
undefined
ಆದರೆ, ಯಾವುದೇ ರೈತರು, ನಾಯಕರೊಂದಿಗೆ ಮಾತನಾಡಲು ಬಯಸದ ಸಕ್ಕರೆ ಸಚಿವ ಶಿವರಾಂ ಹೆಬ್ಬಾರ್‌ ಒಂದೆರಡು ನಿಮಿಷಗಳ ಕಾಲ ಪರ ವಿರೋಧದ ಗುಂಪುಗಳ ಜೊತೆ ಸಮಾಲೋಚನೆ ನಡೆಸಿ ನಂತರ ಮಾದೇಗೌಡರನ್ನು ಮಾತನಾಡಿಸಿ ಅವರ ಅಭಿಪ್ರಾಯವನ್ನು ಆಲಿಸಿ ಅಲ್ಲಿಂದ ಸಕ್ಕರೆ ಕಾರ್ಖಾನೆ ಪರಿಶೀಲನೆಗಾಗಿ ಜಿಲ್ಲಾ ಮಂತ್ರಿ ಹಾಗೂ ಜಿಲ್ಲಾಧಿಕಾರಿಗಳು, ಮೈಷುಗರ್‌ ವ್ಯವಸ್ಥಾಪಕ ಟಿ.ವಸಂತ್‌ ಕುಮಾರ್‌ ರೊಂದಿಗೆ ಕಾರ್ಖಾನೆಗೆ ತೆರಳಿದರು.
undefined
ಮೈಷುಗರ್‌ ಕಾರ್ಖಾನೆಯನ್ನು ಸಂಪೂರ್ಣವಾಗಿ ಸರ್ಕಾರಿ ಸ್ವಾಮ್ಯದಲ್ಲೇ ಇಟ್ಟುಕೊಂಡು ಕಬ್ಬು ಅರೆಯುವ ಕಾರ್ಯ ಆರಂಭಿಸುವಂತೆ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ, ದಲಿತ ಕನ್ನಡಪರ ಹೋರಾಟಗಾರರ ಬಣದ ಒಂದು ವಾದವಾದರೆ, ಮತ್ತೊಂದು ರೈತರ ಬಣ ಕಾರ್ಖಾನೆಯನ್ನು ಸರ್ಕಾರವೇ ಇಟ್ಟುಕೊಳ್ಳಲಿ ಆದರೆ, ನಿರ್ವಹಣೆ ಮತ್ತು ಆಡಳಿತ (ಓ ಆಂಡ್‌ ಎಂ)ಜವಾಬ್ದಾರಿಯನ್ನು ಖಾಸಗಿಯವರಿಗೆ ಕಾರ್ಖಾನೆಯಲ್ಲಿ ಕಬ್ಬು ಅರೆಯುವ ಕಾರ್ಯ ಪ್ರಾರಂಭಿಸಲಿ ಎಂಬ ಬಿಗಿಯಾದ ಪಟ್ಟು ಹಿಡಿದಿದ್ದರು.
undefined
ಈ ಎರಡು ಬಣಗಳು ಸಚಿವರ ಮುಂದೆ ತಮ್ಮದ ಆದ ವಾದವನ್ನು ಮಂಡಿಸಿದವು. ಸಚಿವರು ಎರಡು ಬಣಗಳ ವಾದವನ್ನು ಆಲಿಸಿ ನಾನು ಈಗಲೇ ಯಾವುದೇ ನಿರ್ಧಾರ ಮಾಡಲು ಬಂದಿಲ್ಲ. ಸಿಎಂ ಆದೇಶದಂತೆ ಮೈಷುಗರ್‌ ಮತ್ತು ಪಿಎಸ್‌ ಎಸ್‌ ಕೆ ಕಾರ್ಖಾನೆಗಳ ಸ್ಥಿತಿ, ಗತಿಗಳನ್ನು ಖುದ್ದು ಪರಿಶೀಲನೆ ಮಾಡಿ ವರದಿ ಸಲ್ಲಿಸಲು ಬಂದಿದ್ದೇನೆ. ಇನ್ನೂ ಅಭಿಪ್ರಾಯ ಹೇಳಬಹುದೇ ಹೊರತು ನಿರ್ಧಾರ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.
undefined
ಈ ವೇಳೆ ಸಂಸದೆ ಸುಮಲತಾ ಅಂಬರೀಷ್‌ ಶಾಸಕ ಎಂ.ಶ್ರೀನಿವಾಸ್‌, ರೈತ ಸಂಘದ ಬಣಗಳ ಮುಖಂಡರು, ಜಿಲ್ಲಾಧಿಕಾರಿ ಎಂ.ವಿ.ವೆಂಕಟೇಶ್‌ , ಮೈಷುಗರ್‌ ಎಂಡಿ ಟಿ.ವಸಂತ್‌ ಕುಮಾರ್‌ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
undefined
click me!