ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೊಡಗು ಭೇಟಿ ಕುರಿತು ಭಾನುವಾರ ತಲಕಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಲಾದರೂ ಡಿಕೆಶಿ ಅವರು ಬಂದಿದ್ದಾರೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದ ಅಶೋಕ್
undefined
ಇದು ರಾಜಕೀಯ ಮಾಡುವ ವಿಷಯ ಅಲ್ಲ. ಸರ್ಕಾರಕ್ಕೆ ಅವರು ಸಲಹೆ ನೀಡಿದರೆ ಅದನ್ನು ಸ್ವಾಗತಿಸುತ್ತೇವೆ. ವಿರೋಧ ಪಕ್ಷಗಳು ಟೀಕೆ ಮಾಡುವುದೇ ರಾಜಕಾರಣ ಎಂದುಕೊಂಡಿದ್ದಾರೆ. ಕೋವಿಡ್ ಹಾಗೂ ಪ್ರವಾಹ ಸಂದರ್ಭ ಆರೋಪ ಮಾಡುವ ಬದಲುವ ಕೆಲಸ ಮಾಡಲಿ ಎಂದು ಹೇಳಿದರು.
undefined
ಪ್ರಕೃತಿ ವಿಕೋಪ ನಿರ್ವಹಣೆಗೆ ಕಂದಾಯ ಇಲಾಖೆಯಲ್ಲಿ ಹೆಚ್ಚಿನ ಹಣವಿದ್ದು, ಕೇಂದ್ರ ಸರ್ಕಾರ 310 ಕೋಟಿ ರು. ನೀಡಿದೆ. ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಹೆಚ್ಚಿನ ಹಣವಿದ್ದು, ಈಗ ಪ್ರಕೃತಿ ವಿಕೋಪ ನಿರ್ವಹಣೆಗೆ 5 ಕೋಟಿ ರು. ಬಿಡುಗಡೆ ಮಾಡಲಾಗಿದೆ ಎಂದರು.
undefined
ಇಂದು(ಸೋಮವಾರ) ಪ್ರಧಾನಿ ಅವರೊಂದಿಗೆ ವೀಡಿಯೋ ಕಾನ್ಫರೆನ್ಸ್‌ನಲ್ಲಿ ಮಾತನಾಡಿ ಹೆಚ್ಚಿನ ಹಣವನ್ನು ಕರ್ನಾಟಕಕ್ಕೆ ನೀಡಿ ಎಂದು ಮನವಿ ಮಾಡಲಾಗುವುದು. ಕಾವೇರಿ ತಾಯಿ ಇದ್ದಂತೆ. ಭಾವನಾತ್ಮಕ ಸಂಬಂಧವಿದೆ. ಕೊಡಗಿನ ಭೂಕುಸಿತ ಘಟನೆ ನೋವು ತಂದಿದೆ. ಜಿಲ್ಲೆಯ ಇತರೆ ಕಡೆಗಳಲ್ಲಿ ಭೇಟಿ ನೀಡಿದ್ದೇನೆ. ಪ್ರವಾಹ ಸಂದರ್ಭ ಬೆಳೆ ಹಾನಿ ಸಂಭವಿಸಿದ ಸ್ಥಳಗಳ ಪರಿಶೀಲನೆ ನಡೆಸಿದ್ದು, ಸಮೀಕ್ಷೆ ಮಾಡಲು ಕೃಷಿ ಇಲಾಖೆಗೆ ಸೂಚನೆ ನೀಡಿದ್ದೇನೆ ಎಂದರು.
undefined