ಕಲಬುರಗಿ(ಮಾ.19): ಕೊರೋನಾ ವೈರಸ್ ಮತ್ತೆ ತನ್ನ ಆರ್ಭಟವನ್ನ ಆರಂಭಿಸಿದೆ. ಹೀಗಾಗಿ ದೇಶದ ಹಲವೆಡೆ ಲಾಕ್‌ಡೌನ್, ನೈಟ್ ಕರ್ಫ್ಯೂ ಹೇರಲಾಗಿದೆ. ಕಳೆದ ವರ್ಷ ಮಹಾಮಾರಿ ಕೊರೋನಾ ವೈರಸ್‌ಗೆ ವ್ಯಕ್ತಿಯೊಬ್ಬರು ಬಲಿಯಾಗುವುದರ ಮೂಲಕ ಕಲಬುರಗಿ ಜಿಲ್ಲೆ ಇಡೀ ದೇಶದ ಗಮನವನ್ನ ಸೆಳೆದಿತ್ತು. ಆದರೆ, ಇದೀಗ ಕಲಬುರಗಿ ಜಿಲ್ಲಾಡಳಿತ ಕೋವಿಡ್ 2ನೇ ಅಲೆಯನ್ನ ತಪ್ಪಿಸಲು ಬಹಳಷಷ್ಟು ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದೆ.