4 ವರ್ಷದಲ್ಲಿ ಕ್ಷಯ ಮುಕ್ತ ರಾಜ್ಯ ಗುರಿ: ಸಚಿವ ಸುಧಾಕರ್‌

Kannadaprabha News   | Asianet News
Published : Mar 25, 2021, 08:11 AM ISTUpdated : Mar 25, 2021, 08:15 AM IST

ಬೆಂಗಳೂರು(ಮಾ.25): ಕರ್ನಾಟಕವನ್ನು 2025ರ ವೇಳೆಗೆ ‘ಕ್ಷಯರೋಗ ಮುಕ್ತ ರಾಜ್ಯ’ ಮಾಡಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ.ಸುಧಾಕರ್‌ ತಿಳಿಸಿದ್ದಾರೆ.

PREV
14
4 ವರ್ಷದಲ್ಲಿ ಕ್ಷಯ ಮುಕ್ತ ರಾಜ್ಯ ಗುರಿ: ಸಚಿವ ಸುಧಾಕರ್‌

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನದಿಂದ ಮಾಗಡಿ ರಸ್ತೆಯ ಆರೋಗ್ಯ ಸೌಧದಲ್ಲಿ ಹಮ್ಮಿಕೊಂಡಿದ್ದ ‘ವಿಶ್ವ ಕ್ಷಯರೋಗ ದಿನ-2021’ ಕಾರ್ಯಕ್ರಮ ಉದ್ಘಾಟಿಸಿದ ಸುಧಾಕರ್‌

24

‘ಎಚ್ಚರ.. ಕ್ಷಯ ರೋಗ ನಿರ್ಮೂಲನೆಗೆ ಕಾಲ ಘಟಿಸುತ್ತಿದೆ’ ಎಂದು ಹೇಳುವಷ್ಟರಲ್ಲೇ, ಜಗತ್ತಿನಲ್ಲಿ ಇಬ್ಬರು ಸಾವನ್ನಪ್ಪುತ್ತಿದ್ದಾರೆ. ಪ್ರತಿ 22 ಸೆಕೆಂಡಿಗೆ ಓರ್ವ ಕ್ಷಯ ರೋಗಿ ಸಾವನ್ನಪ್ಪುತ್ತಿದ್ದಾನೆ. ಜಗತ್ತಿನಲ್ಲಿ ಒಂದು ತಿಂಗಳಲ್ಲಿ 1.20 ಲಕ್ಷ ಜನ ಹಾಗೂ ವರ್ಷದಲ್ಲಿ 14 ಲಕ್ಷ ಜನರು ಮೃತಪಡುತ್ತಿದ್ದಾರೆ. ಭಾರತದಲ್ಲಿ ಕಳೆದ ವರ್ಷ 4 ಲಕ್ಷ ಜನರ ಸಾವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಸಚಿವರು

34

ಕರ್ನಾಟಕವನ್ನು 2025ರ ವೇಳೆಗೆ ಕ್ಷಯ ಮುಕ್ತ ರಾಜ್ಯ ಮಾಡಲು ಕಾರ್ಯಕ್ರಮ ಆಯೋಜಿಸಲಾಗಿದೆ. ಕ್ಷಯರೋಗದ ಬಗ್ಗೆ ಅರಿವು ಮೂಡಿಸಲು ಸಾಕಷ್ಟುಕಾರ್ಯಕ್ರಮ ಘೋಷಿಸಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ, ರಾಜ್ಯದಲ್ಲಿ ಪರೀಕ್ಷೆಗಳು ಹಾಗೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಮುಂದಿನ ದಿನಗಳಲ್ಲಿ ಯಾವ ಗ್ರಾಮ ಕ್ಷಯರೋಗ ಮುಕ್ತವಾಗುತ್ತದೆಯೋ, ಆ ಗ್ರಾಮವನ್ನು ‘ಕ್ಷಯ ಮುಕ್ತ ಗ್ರಾಮ’ ಎಂದು ಘೋಷಿಸಲಾಗುತ್ತದೆ. ಅದೇ ರೀತಿ ಕ್ಷಯ ಮುಕ್ತ ಗ್ರಾಮ ಪಂಚಾಯಿತಿ, ನಗರ ಪ್ರದೇಶಗಳಲ್ಲಿ ಕ್ಷಯ ಮುಕ್ತ ವಾರ್ಡ್‌ ಆಗಬೇಕು. ಈ ಹೊಸ ಆಂದೋಲನ ಶೈಲಿ ಅಳವಡಿಸಿಕೊಂಡು, ಇಡೀ ದೇಶದಲ್ಲಿ ಮೊದಲ ಕ್ಷಯರೋಗ ಮುಕ್ತ ರಾಜ್ಯ ಕರ್ನಾಟಕ ಎಂದು ಘೋಷಿಸಬೇಕು ಎಂದು ಕರೆ ನೀಡಿದರು.

44

ಕಾರ್ಯಕ್ರಮದಲ್ಲಿ ಕ್ಷಯರೋಗ ಮುಕ್ತ ಗ್ರಾಮ ಪಂಚಾಯಿತಿ ಆ್ಯಪ್‌ ಅನ್ನು ಅನಾವರಣ ಮಾಡಲಾಯಿತು. ಕ್ಷಯರೋಗ ಮುಕ್ತ ಕರ್ನಾಟಕದ ಕಿರು ಹೊತ್ತಿಗೆ, ಕರ್ನಾಟಕ ಆರೋಗ್ಯ ಸಂವರ್ಧನ ಪ್ರತಿಷ್ಠಾನದಿಂದ ಹೊರ ತಂದ ಕೈಪಿಡಿ ಮತ್ತು ಭಿತ್ತಿ ಚಿತ್ರ ಬಿಡುಗಡೆಗೊಳಿಸಲಾಯಿತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತ ಡಾ ಕೆ.ವಿ.ತ್ರಿಲೋಕ್‌ ಚಂದ್ರ, ನಿರ್ದೆಶಕ ಡಾ. ಪಾಟೀಲ್‌ ಓಂ ಪ್ರಕಾಶ್‌ ಆರ್‌, ಜಂಟಿ ನಿರ್ದೇಶಕ (ಕ್ಷಯ) ಡಾ. ರಮೇಶ್‌ ಚಂದ್ರ ರೆಡ್ಡಿ, ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕಿ ಡಾ. ಅರುಂಧತಿ, ಡಾ. ಎಂ.ಕೆ.ಸುದರ್ಶನ್‌ ಮತ್ತಿತರಿದ್ದರು.

click me!

Recommended Stories