ಗುರುವಾರ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಬುಧವಾರ ಸಂಜೆಯೇ ಯಾದಗಿರಿಗೆ ಆಗಮಿಸಿದ್ದ ಶ್ರೀರಾಮುಲು
ಸಂಜೆ ಜಿಲ್ಲೆಯ ವಡಗೇರಾ ತಾಲೂಕಿನ ಗೋನಾಲ ಸಮೀಪದ ಗಡೇ ದುರ್ಗಾ ದೇವಿ ದರುಶನಕ್ಕೆ ತೆರಳಿದ್ದ ಸಚಿವರು
ಚೀಟಿ ಬರೆದು ದೇವಿ ಪದತಲದಲ್ಲಿ ಇಟ್ಟರೆ ಹರಕೆಗಳು ಈಡೇರುತ್ತದೆ ಅನ್ನೋ ಬಲವಾದ ನಂಬಿಕೆ ಭಕ್ತರದ್ದು. ಹೀಗಾಗಿ, ಡಿಸಿಎಂ ಸ್ಥಾನಕ್ಕಾಗಿ ಶ್ರೀರಾಮುಲು ಬೇಡಿಕೊಂಡಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿವೆ. ಅವರು ಬರೆದರು ಎನ್ನಲಾದ ಚೀಟಿಯಲ್ಲಿ ‘ಶ್ರೀರಾಮುಲು, ಡೆಪ್ಯೂಟಿ ಚೀಫ್ ಮಿನಿಸ್ಟರ್ ಆಫ್ ಕರ್ನಾಟಕ, ಮಸ್ಟ್-ಕಂಪಲ್ಸರಿ’ ಎಂದಿದೆ. ಇದು ಶ್ರೀರಾಮುಲು ಅವರ ಡಿಸಿಎಂ ಸ್ಥಾನಕ್ಕಾಗಿ ಮನದಾಳವನ್ನು ತೋರಿಸುವಂತಿತ್ತು.
ಈ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಸ್ನೇಹಿತರಿಂದ ಈ ದೇವಸ್ಥಾನ ಬಗ್ಗೆ ತಿಳಿದಿತ್ತು. ಮನಸ್ಸಿನಲ್ಲಿರುವುದನ್ನು ದೇವಿಗೆ ಬೇಡಿಕೊಂಡಿದ್ದೇನೆ, ಒಳ್ಳೆಯದಾಗಲಿ. ದೇವಿಯೆದುರು ಹೇಳಿಕೊಂಡ ವಿಚಾರಗಳನ್ನು ಬಹಿರಂಗಪಡಿಸಬಾರದು ಎಂದು ತಿಳಿಸಿದರು.