ಮೋದಿ ಜಾತಿ-ಮತ ಮೀರಿದ ವಿಶ್ವ ನಾಯಕ: ಡಿಸಿಎಂ ಅಶ್ವತ್ಥ್‌ ನಾರಾಯಣ್‌

Kannadaprabha News   | Asianet News
Published : Sep 18, 2020, 08:54 AM ISTUpdated : Sep 18, 2020, 09:01 AM IST

ಬೆಂಗಳೂರು(ಸೆ.18):ಪ್ರಧಾನಿ ನರೇಂದ್ರ ಮೋದಿ ಅವರು ಜಾತಿ-ಮತ ಎಲ್ಲವನ್ನೂ ಮೀರಿದ ವಿಶ್ವ ನಾಯಕರಾಗಿದ್ದು, ಅವರ ಮಾರ್ಗದರ್ಶನದಲ್ಲಿ ನಡೆಯುವುದು ಹೆಮ್ಮೆಯ ಸಂಗತಿ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ್‌ ನಾರಾಯಣ್‌ ಅಭಿಪ್ರಾಯಪಟ್ಟಿದ್ದಾರೆ.

PREV
14
ಮೋದಿ ಜಾತಿ-ಮತ ಮೀರಿದ ವಿಶ್ವ ನಾಯಕ: ಡಿಸಿಎಂ ಅಶ್ವತ್ಥ್‌ ನಾರಾಯಣ್‌

ಗುರುವಾರ ನಗರದ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಘಟಕ ಹಾಗೂ ಮೋದಿ ಬ್ರಿಗೇಡ್‌ ಪ್ರತಿಷ್ಠಾನ, ಮೋದಿ ಅವರ ಜನ್ಮ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

24

ಇಂದು ಭಾರತ ಜಗತ್ತಿನಲ್ಲಿಯೇ ಅತ್ಯಂತ ಪ್ರಬಲ ದೇಶವಾಗಿ ಹೊರಹೊಮ್ಮಿದ್ದು, ಇಡೀ ಜಗತ್ತನ್ನು ಭಾರತದ ನೆಲದಲ್ಲಿ ನಿಂತು ನೋಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಮೋದಿ ಅವರ ದೂರದೃಷ್ಟಿಯೇ ಕಾರಣ. ಈ ದಿಕ್ಕಿನಲ್ಲಿ ದೇಶವನ್ನು ಬಲವಾಗಿ ಕಟ್ಟಿದ ಹೆಗ್ಗಳಿಕೆ ನಮ್ಮ ಪ್ರಧಾನಿ ಮೋದಿ ಅವರಿಗೆ ಸಲ್ಲಬೇಕು ಎಂದು ಹೇಳಿದರು.

34

ಭಾರತ ಕೋವಿಡ್‌ ನಿರ್ವಹಿಸಿದ ರೀತಿ ಇಡೀ ಜಗತ್ತಿಗೆ ದಾರಿ ತೋರುವಂತೆ ಮಾಡಿದೆ. ಅಮೆರಿಕದಂತಹ ಬಲಷ್ಠ ದೇಶಗಳೇ ಕೋವಿಡ್‌ ನಿರ್ವಹಣೆಯಲ್ಲಿ ಸೋತಿವೆ. ಆದರೆ ಭಾರತ ಗೆದ್ದಿದೆ ಎಂದರು.

44

ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರು ಸೇರಿ ಕೊರೋನಾ ವಾರಿಯ​ರ್‍ಸ್ಗಳಿಗೆ ಆಹಾರ ಕಿಟ್‌ ಹಾಗೂ ಕೊರೋನಾ ಕಿಟ್‌ ವಿತರಿಸಿ, ಅಭಿನಂದಿಸಲಾಯಿತು. ಪ್ರತಿಭಾವಂತ, ಅಂಗವಿಕಲ ವಿದ್ಯಾರ್ಥಿಗಳನ್ನು ಇದೇ ವೇಳೆ ಅಭಿನಂದಿಸಲಾಯಿತು. ಪೌರ ಕಾರ್ಮಿಕರ ಪಾದಪೂಜೆ ಮಾಡಲಾಯಿತು. ಮಾಜಿ ಶಾಸಕ ಎಸ್‌.ಮುನಿರಾಜು ಇನ್ನಿತರರಿದ್ದರು.

click me!

Recommended Stories