ಗಂಡನೊಂದಿಗೆ ಜಗಳವಾಡಿ ಕೋರ್ಟ್ ಮೆಟ್ಟಿಲೇರಿದ ಹೆಂಡತಿ; ಜಡ್ಜ್ ಮುಂದೆಯೇ ವಿಷ ಸೇವಿಸಿದ ಪತಿರಾಯ!

Published : Jan 22, 2026, 05:28 PM IST

ದ.ಕ‌ ಜಿಲ್ಲೆಯ ಪುತ್ತೂರಿನಲ್ಲಿ ಗಂಡ-ಹೆಂಡತಿ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿ, ಪತಿ ನ್ಯಾಯಾಧೀಶರ ಎದುರೇ ವಿಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಘಟನೆ ಗುರುವಾರ 5ನೇ ಹೆಚ್ಚುವರಿ ನ್ಯಾಯಾಲಯದಲ್ಲಿ ನಡೆದಿದೆ. 

PREV
14
ಗಂಡ-ಹೆಂಡತಿ ಜಗಳ

ದ.ಕ‌ : ದ.ಕ‌ ಜಿಲ್ಲೆಯ ಪುತ್ತೂರಿನಲ್ಲಿ ಗಂಡ-ಹೆಂಡತಿ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿ, ಪತಿ ನ್ಯಾಯಾಧೀಶರ ಎದುರೇ ವಿಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಘಟನೆ ಗುರುವಾರ 5ನೇ ಹೆಚ್ಚುವರಿ ನ್ಯಾಯಾಲಯದಲ್ಲಿ ನಡೆದಿದೆ.

24
ಕುಟುಂಬ ಕಲಹ

ಪುತ್ತೂರಿ ಕಾವು ಮಣಿಯಡ್ಕ ನಿವಾಸಿ ರವಿ (35) ಆತ್ಮಹ*ತ್ಯೆಗೆ ಯತ್ನಿಸಿದ್ದಾರೆ. ಎರಡು ದಿನಗಳ ಹಿಂದೆ ವಿದ್ಯಾಶ್ರೀ ಕತ್ತು ಹಿಸುಕಿ ಕೊಲೆಗೆ ಯತ್ನಿಸಿದ್ದ ರವಿ. ಪತಿ ಹಾಗೂ ಆತನ ಪತ್ನಿ ವಿದ್ಯಾಶ್ರೀ ನಡುವೆ ಕಲಹ ಉಂಟಾಗಿದ್ದು, ಗಂಡ-ಹೆಂಡತಿ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು.

34
ವಿಚ್ಛೇದನ

ಇಬ್ಬರ ನಡುವೆ ವಿಚ್ಛೇದನದ ಮಾತುಕತೆ ನಡೆದಿತ್ತು. ಸಂಪ್ಯ ಗ್ರಾಮಾಂತರ ಠಾಣೆಯಲ್ಲಿ ಇಂದು ಕೇಸ್ ದಾಖಲಾಗುವ ಸಾಧ್ಯತೆ ಇತ್ತು, ಸಂಪ್ಯ ಠಾಣೆಗೆ ಹಾಜರಾಗಲು ಇಂದು ರವಿಯನ್ನು ಪೊಲೀಸರು ತಿಳಿಸಿದ್ದರು. ಈ ನಡುವೆ ರವಿ ನೇರವಾಗಿ ಪುತ್ತೂರು ನ್ಯಾಯಾಲಯದ ಆವರಣಕ್ಕೆ ಬಂದು ಜಡ್ಜ್ ಮುಂದೆ ವಿಷ ಸೇವನೆ ಮಾಡಿದ್ದಾನೆ.

44
ಕೀಟನಾಶಕ

ಎಂಡೋಸಲ್ಫಾನ್ ಬ್ಯಾನ್ ಆದ ಬಳಿಕ ಮಾರುಕಟ್ಟೆಯಲ್ಲಿ 'ಕರಾಟೆ' ಕೀಟನಾಶಕ ಸಿಗುತ್ತದೆ. ಈ ಕರಾಟೆ ಕೀಟನಾಶಕವನ್ನ‌ ಸೇವಿಸಿದ ರವಿ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಪುತ್ತೂರಿನಿಂದ ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ. ಮಂಗಳೂರು ಆಸ್ಪತ್ರೆಗೆ ಸಾಗಿಸುವ ವೇಳೆ ಒಂದೇ ಆಂಬ್ಯುಲೆನ್ಸ್ ನಲ್ಲಿ‌ ದಂಪತಿ ತೆರಳಿದ್ದಾರೆ.

Read more Photos on
click me!

Recommended Stories