Snake Shyam of Bigg Boss Lakkundi Excavation ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಐತಿಹಾಸಿಕ ಉತ್ಖನನವು ಹಾವುಗಳ ಪ್ರತ್ಯಕ್ಷದಿಂದ ನಿಗೂಢ ತಿರುವು ಪಡೆದಿದೆ. ನಿಧಿಯನ್ನು ಹಾವು ಕಾಯುತ್ತವೆ ಎಂಬ ಸ್ಥಳೀಯರ ನಂಬಿಕೆ ಕುರಿತು ಮೈಸೂರಿನಲ್ಲಿ ಉರಗ ತಜ್ಞ ಸ್ನೇಕ್ ಶ್ಯಾಮ್ ಹೇಳಿಕೆನಿಡಿದ್ದಾರೆ.
ಲಕ್ಕುಂಡಿಯಲ್ಲಿ ನಿಧಿ ಸಿಕ್ಕಿರುವುದು ಹಾಗೂ ಅದನ್ನು ಸರ್ಪವೊಂದು ಕಾಯುತ್ತಿತ್ತು ಎಂಬ ಸುದ್ದಿ ರಾಜ್ಯಾದ್ಯಂತ ವೈರಲ್ ಆಗಿತ್ತು. ಬಂಗಾರದ ನಿಧಿಯ ಬಳಿ ಹಾವುಗಳೇಕೆ ವಾಸ ಮಾಡುತ್ತವೆ ಎಂಬುದರ ಬಗ್ಗೆ ಮಾಜಿ ಬಿಗ್ ಬಾಸ್ ಸ್ಪರ್ಧಿ ಸ್ನೇಕ್ ಶ್ಯಾಮ್ ಅವರು ವೈಜ್ಞಾನಿಕ ಮಾಹಿತಿ ನೀಡಿದ್ದಾರೆ. ಅಷ್ಟಕ್ಕೂ ಬಂಗಾರವನ್ನು ತೆಗೆದುಕೊಳ್ಳಲು ಬಂದವರಿಗೆ ಯಾಕೆ ಹಾವು ಕಾಣಿಸಿಕೊಳ್ಳುತ್ತವೆ ಎಂಬುದರ ಬಗ್ಗೆಯೂ ರಿವೀಲ್ ಮಾಡಿದ್ದಾರೆ.
24
ಸ್ನೇಕ್ ಶ್ಯಾಮ್ ಅವರು ವೈಜ್ಞಾನಿಕ ಮಾಹಿತಿ
ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಮೂರನೇ ದಿನದ ಉತ್ಖನನ ನಡೆಯುತ್ತಿದ್ದಾಗ ಹಾವೊಂದು ಪ್ರತ್ಯಕ್ಷವಾಗಿತ್ತು. ಇದರಿಂದ ಜೆಸಿಬಿ ಚಾಲಕ ಹಾಗೂ ಗ್ರಾಮಸ್ಥರು ಬೆಚ್ಚಿಬಿದ್ದಿದ್ದರು. ನಿಧಿಯ ಆಸೆಗೆ ಹೋದವರು ಹಿಂದೆ ರಕ್ತಕಾರಿ ಸತ್ತಿದ್ದಾರೆ ಎಂಬ ಸ್ಥಳೀಯರ ನಂಬಿಕೆ ಮತ್ತು 'ಸರ್ಪಗಳು ನಿಧಿ ಕಾಯುತ್ತವೆ' ಎಂಬ ಭೀತಿಗೆ ಸಂಬಂಧಿಸಿದಂತೆ ಹಾವಿಗೆ ಯಾವುದೇ ನಿಧಿ ಗೊತ್ತಿಲ್ಲ.ಅದಕ್ಕೆ ಹೆಂಡತಿ ಮಕ್ಕಳು ಇಲ್ಲ ಎಂದು ಮೈಸೂರಿನಲ್ಲಿ ಹೇಳಿದ್ದಾರೆ.
34
ಗುಪ್ತ ನಿಧಿ
ಮಕ್ಕಳಿಗೆ ಅನುಕೂಲ ಆಗಲು ಹಿಂದೆ ಗುಪ್ತ ನಿಧಿ ಇಡುತ್ತಿದ್ದರು. ಮನೆ ಅಕ್ಕ ಪಕ್ಕ ಹೂಳುತ್ತಿದ್ದರು. ಇದು ಕೆಲವರಿಗೇ ಗೊತ್ತಾಗುತ್ತಿತ್ತು. ಇತರರಿಗೆ ಗೊತ್ತಾಗಬಾರದು ಅಂತ ಕೆಲವು ಬಾರಿ ಹೆದರಿಸುವ ಕೆಲಸ ಮಾಡುತ್ತಿದ್ದರು.
ಆ ಸ್ಥಳಕ್ಕೆ ಯಾರೂ ಹೋಗದಿದ್ದರಿಂದ ಆ ಪಾತ್ರೆ ಬಳಿ ಇಲಿಗಳು ವಾಸ ಮಾಡುತ್ತಿದ್ದವು.ಅವುಗಳನ್ನು ಹುಡುಕಿ ಹಾವುಗಳು ಬರುತ್ತಿದ್ದವು ಅಷ್ಟೇ.
44
ಹಾವಿಗೆ ಯಾವುದೇ ನಿಧಿ ಗೊತ್ತಿಲ್ಲ
ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಆ ಜಾಗ ಅಗೆಯುವಾಗ ತೊಂದರೆ ಆಗಿ ಹೆಡೆ ಎತ್ತಿರುತ್ತದೆ ಅಷ್ಟೇ. ಅದು ತನಗಾದ ಪರಿಸ್ಥಿತಿಗೆ ಎಚ್ಚರಿಕೆ ಅಷ್ಟೇ. ಹಾವಿಗೆ ಯಾವುದೇ ನಿಧಿ ಗೊತ್ತಿಲ್ಲ.
ಅದಕ್ಕೆ ಹೆಂಡತಿ ಮಕ್ಕಳು ಇಲ್ಲ. ಅದಕ್ಕೆ ತಣ್ಣನೆ ಬೆಚ್ಚನೆ ಜಾಗ ಬೇಕು. ಅದಕ್ಕಾಗಿ ಅಂತಹ ಸ್ಥಳದಲ್ಲಿ ವಾಸ ಮಾಡುತ್ತಿರುತ್ತದೆ. ಇದನ್ನು ಬಿಟ್ಟು ಅದಕ್ಕೆ ಯಾವ ನಿಧಿ ಕಾಯುವ ಪ್ರಮೇಯ ಇಲ್ಲ ಎಂದು ಮಾತನಾಡಿದ್ದಾರೆ.