ಗುರು ರಾಘವೇಂದ್ರ ಸ್ವಾಮಿಗಳ 355ನೇ ಮಧ್ಯಾರಾಧನಾ ಮಹೋತ್ಸವ ಇತ್ತೀಚೆಗೆ ನಡೆಯಿರಿ, ದೇಶಾದ್ಯಂತ ಸಹಸ್ರಾರು ಭಕ್ತರು ಬಂದು ರಾಯರ ದರ್ಶನ ಪಡೆದರು. ಹಣ, ಚಿನ್ನ, ಬೆಳ್ಳಿ ಕಾಣಿಕೆ ಅರ್ಪಿಸಿದರು. ರಾಯರ ಮಠಕ್ಕೆ ಭಕ್ತರು ನೀಡಿದ ಕಾಣಿಕೆ ಹುಂಡಿ ಎಣಿಕೆ ಕಾರ್ಯ ನಡೆಯಿತು. ಈ ಬಾರಿಯೂ ದಾಖಲೆ ಪ್ರಮಾಣದ ಕಾಣಿಕೆ!
ಗುರು ರಾಘವೇಂದ್ರ ಸ್ವಾಮಿಗಳ 355ನೇ ಮಧ್ಯಾರಾಧನಾ ಮಹೋತ್ಸವ ಇತ್ತೀಚೆಗೆ ನಡೆಯಿರಿ, ದೇಶಾದ್ಯಂತ ಸಹಸ್ರಾರು ಭಕ್ತರು ಬಂದು ರಾಯರ ದರ್ಶನ ಪಡೆದರು. ಹಣ, ಚಿನ್ನ, ಬೆಳ್ಳಿ ಕಾಣಿಕೆ ಅರ್ಪಿಸಿದರು. ರಾಯರ ಮಠಕ್ಕೆ ಭಕ್ತರು ನೀಡಿದ ಕಾಣಿಕೆ ಹುಂಡಿ ಎಣಿಕೆ ಕಾರ್ಯ ಬಿಗಿ ಭದ್ರತೆಯೊಂದಿಗೆ ನಡೆಯಿತು. ಈ ಬಾರಿಯೂ ಮಂತ್ರಾಲಯ ಮಠಕ್ಕೆ ದಾಖಲೆ ಪ್ರಮಾಣದ ಕಾಣಿಕೆ ಹರಿದುಬಂದಿದೆ
23
₹3 ಕೋಟಿ 30 ಲಕ್ಷ, 69 ಸಾವಿರದ 139 ರೂ ಕಾಣಿಕೆ ಸಂಗ್ರಹ
ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಆಗಸ್ಟ್- ಸೆಪ್ಟೆಂಬರ್ ತಿಂಗಳ ಹುಂಡಿಯ ಎಣಿಕೆ ಕಾರ್ಯ ನಡೆಯಿತು. ಈ ಬಾರಿಯೂ ದಾಖಲೆ ಪ್ರಮಾಣದ ಕಾಣಿಕೆ ಸಂಗ್ರಹಗೊಂಡಿದ್ದು, ಕೇವಲ 16 ದಿನಗಳಲ್ಲಿ ₹3 ಕೋಟಿ 30 ಲಕ್ಷ, 69 ಸಾವಿರದ 139 ರೂ. ಜಮಾ ರೂಪಾಯಿ ಜಮೆಯಾಗಿದೆ ಎಂದು ಮಂತ್ರಾಲಯದ ಮಠದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
33
ಚಿನ್ನ, ಬೆಳ್ಳಿ ಅಭರಣಗಳ ಕಾಣಿ ಎಷ್ಟು?
ಇದಲ್ಲದೆ ಚಿನ್ನ ಬೆಳ್ಳಿ ವಿವಿಧ ಆಭರಣಗಳು ಕಾಣಿಕೆ ಸಹ ಭಕ್ತರು ರಾಯರಿಗೆ ಸಮರ್ಪಿಸಿದ್ದಾರೆ. ಈ ಬಾರಿ ಕಾಣಿಕೆಯಲ್ಲಿ 42 ಗ್ರಾಂ ಚಿನ್ನ, 632 ಗ್ರಾಂ ಬೆಳ್ಳಿ ಅಭರಣಗಳು ಸಮರ್ಪಿಸಿದ್ದಾರೆ ಎಂದು ಮಂತ್ರಾಲಯದ ರಾಯರ ಮಠದಿಂದ ಅಧಿಕಾರಿಗಳು ತಿಳಿಸಿದ್ದಾರೆ