ಊಟ, ಹಣ ಕೊಟ್ಟು ವಲಸೆ ಕಾರ್ಮಿಕರ ಬೀಳ್ಕೊಟ್ಟ ಮಂಗ್ಳೂರ ಮಹಾನುಭಾವ!
First Published | May 14, 2020, 10:43 PM ISTಮಂಗಳೂರು(ಮೇ. 14) ಹೊರ ರಾಜ್ಯಗಳ ವಲಸೆ ಕಾರ್ಮಿಕರು ತಮ್ಮ ಸ್ವಂತ ಊರುಗಳಿಗೆ ತೆರಳುವ ವಿಚಾರ ಗೊಂದಲದ ಗೂಡಾಗಿದೆ. ಕೆಲಸವೇ ಇಲ್ಲದ ಹೊತ್ತಲ್ಲಿ ತುತ್ತು ಅನ್ನಕ್ಕೂ ಪರದಾಡುವ ಕಾರ್ಮಿಕರು ರೈಲಿನ ಟಿಕೆಟ್ ದರವನ್ನೂ ಭರಿಸಬೇಕಾದ ಅನಿವಾರ್ಯ ಸ್ಥಿತಿಯಲ್ಲಿದ್ದಾರೆ. ಆದರೆ ಮಂಗಳೂರಿನ ಜೋಕಟ್ಟೆ ಎಂಬಲ್ಲಿನ ಮಹಾನುಭಾವರೊಬ್ಬರು ಉತ್ತರ ಭಾರತದ ಕಾರ್ಮಿಕರಿಗೆ ತಿನ್ನಲು ಅನ್ನ ಕೊಟ್ಟು, ಕೈಯ್ಯಲ್ಲಿದ್ದ ಹಣವನ್ನು ಹೊಂದಿಸಿ ರೈಲು ಟಿಕೆಟ್ ಮಾಡಿಕೊಟ್ಟು ಗೌರವಯುತವಾಗಿ ಕಾರ್ಮಿಕರನ್ನು ಬೀಳ್ಕೊಟ್ಟಿದ್ದಾರೆ.