ಕಳೆದ ಜೂನ್ 1 ರಿಂದ ಸೇವೆ ಯಿಂದ ಮುಕ್ತಗೊಂಡು ಸಿ ಐ ಎಸ್ ಎಫ್ ಪಡೆಯ ಆರೈಕೆಯಲ್ಲಿದ್ದ ಲೀನಾ ಭಾನುವಾರ ಸಂಜೆ ಕೊನೆಯುಸಿರೆಳೆದಿದೆ. ಡಾಗ್ ಸ್ವಾಡ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಲೀನಾ ಸ್ಫೋಟಕ ಪತ್ತೆ ಬಗ್ಗೆ ತರಬೇತಿ ಪಡೆದಿದ್ದಳು. ಮಂಗಳೂರು ಏರ್ಪೋರ್ಟ್ ನಲ್ಲಿ 2020 ರ ಜನವರಿ 20ರಂದು ಆದಿತ್ಯ ರಾವ್ ಇರಿಸಿದ್ದ ಬಾಂಬ್ ಪತ್ತೆ ಮಾಡಿದ್ದ ಲೀನಾ ಚುರುಕಿನ ಶ್ವಾನವಾಗಿದ್ದಳು. ಸಕಲ ಗೌರವ ದೊಂದಿಗೆ ಹಳೆ ಏರ್ಪೋರ್ಟ್ ಆವರಣದಲ್ಲಿ ಲೀನಾ ಅಂತ್ಯಕ್ರಿಯೆ ನಡೆಸಲಾಯಿತು.