Mandya: ಲವ್ ಮ್ಯಾರೇಜ್‌ಗೆ ಸಹಾಯ; ಯುವತಿ ತಂದೆಯಿಂದ ಸೈಜ್ ಗಲ್ಲಿನಿಂದ ಕಾಲು ಜಜ್ಜಿ ಕ್ರೌರ್ಯ

Published : Feb 24, 2026, 11:20 AM IST

ಮಗಳ ಪ್ರೇಮ ವಿವಾಹಕ್ಕೆ ಸಹಾಯ ಮಾಡಿದ್ದಕ್ಕೆ ಯುವತಿಯ ತಂದೆ, ಯುವಕರ ಗುಂಪಿನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬೊಮ್ಮಾಲಪುರದಲ್ಲಿ ಈ ಘಟನೆ ನಡೆದಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

PREV
15
ಲವ್ ಮ್ಯಾರೇಜ್‌ಗೆ ಸಹಾಯ

ಮಗಳ ಲವ್ ಮ್ಯಾರೇಜ್‌ಗೆ ಸಹಾಯ ಮಾಡಿದ್ದ ಯುವಕರ ಗುಂಪಿನ ಮೇಲೆ ಯುವತಿಯ ತಂದೆಯಿಂದ ಹಲ್ಲೆ ನಡೆಸಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ ತಾಲೂಕಿನ ಬೊಮ್ಮಾಲಪುರ ಎಂಬಲ್ಲಿ ನಡೆದಿದೆ. ಬೊಮ್ಮಲಾಪುರ ಗ್ರಾಮದ ಪ್ರಕಾಶ್ ಮತ್ತು ಆತನ ಬಾಮೈದ ನವೀನ್ ಎಂಬವರ ಮೇಲೆ ಪಾಂಡವಪುರದ ಕನಗನಹಳ್ಳಿ ಬಳಿ ಹಲ್ಲೆ ನಡೆದಿದೆ.

25
ಫೆಬ್ರವರಿ 21ರಂದು ಗಲಾಟೆ

ಕೆಲ ದಿನಗಳ ಹಿಂದೆ ಬೊಮ್ಮಲಾಪುರ ಗ್ರಾಮದ ನಿಂಗಣ್ಣ ಎಂಬವರ ಮಗಳು ಪ್ರೀತಿಸಿ ಮದುವೆಯಾಗಿದ್ದರು. ಈ ಲವ್‌ ಮ್ಯಾರೇಜ್‌ಗೆ ಪ್ರಕಾಶ್ ಸಹಾಯ ಮಾಡಿದ್ದರು ಎನ್ನಲಾಗಿದೆ. ಈ ಕಾರಣಕ್ಕಾಗಿ ಪ್ರಕಾಶ್ ಮೇಲೆ ಯುವತಿ ತಂದೆ ನಿಂಗಣ್ಣ ಮತ್ತು ಕುಟಂಬ ಮೇಲೆ ಸೇಡು ಹೊಂದಿದ್ದರು. ಇದೇ ವಿಚಾರವಾಗಿ ಫೆಬ್ರವರಿ 21ರಂದು ಗಲಾಟೆಯೂ ನಡೆದಿತ್ತು

35
ಅಟ್ಟಾಡಿಸಿಕೊಂಡು ಹಲ್ಲೆ

ಬೊಮ್ಮಲಾಪುರದ ಗಿರೀಶ್, ಸಂಜು, ಗಣೇಶ್, ಪುಟ್ಟರಾಜು ಎಂಬವರೊಂದಿಗೆ ಸೇರಿಕೊಂಡು ನಿಂಗಣ್ಣ ಫೆಬ್ರವರಿ 22ರಂದು ಪ್ರಕಾಶ್ ಮತ್ತು ನವೀನ್ ಮೇಲೆ ಹಲ್ಲೆ ನಡೆಸಿದ್ದಾರೆ. ಪ್ರಕಾಶ್ ಮತ್ತು ನವೀನ್ ಇಬ್ಬರನ್ನು ಅಟ್ಟಾಡಿಸಿಕೊಂಡು ಸೈಜುಗಲ್ಲಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ವಿಡಿಯೋ ಮಾಡಿಕೊಂಡಿದ್ದಾರೆ.

45
ಪ್ರಕರಣ ದಾಖಲು

ಹಲ್ಲೆಯ ಸಂಬಂಧ ಕೆ.ಆರ್.ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧ ಪೊಲೀಸರು ಗಿರೀಶ್ ಎಂಬಾತನನ್ನು ಬಂಧಿಸಿದ್ದಾರೆ. ಇನ್ನುಳಿದವರಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಇಬ್ಬರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಸಂಕೇತ್ ಪ್ರಕರಣ: ಸುಳೆಬೈಲಿನ ಪ್ರದೇಶದಲ್ಲಿ ನಡೆಯವ ಕರಾಳ ಘಟನೆಗಳನ್ನು ಬಿಚ್ಚಿಟ್ಟ ಸ್ಥಳೀಯರು

55
ಪ್ರಕಾಶ್ ಹೇಳಿದ್ದೇನು?

ಗಿರೀಶ್, ಜೀವನ್, ಡಿಂಕದವರು, ಛೇರ್ಮನ್‌ರು, ರವಿ, ನಿಂಗಣ್ಣ, ಸುಮಾರು ಮಂದಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಸಾಯುವ ರೀತಿ ನನಗೆ ಹೊಡೆದಿದ್ದಾರೆ‌. ನನ್ನ ಜೀವಕ್ಕೆ ಏನಾದರು ಆದ್ರೆ ಇವರೇ ಕಾರಣ. ನನ್ನ ಪ್ರಾಣ ಹೋದರೆ ಇವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಅವನು ನನ್ನ ಹೆಂಡತಿ ಬಗ್ಗೆ ಬೈದಿದ್ದ. ಅದಕ್ಕೆ ನಾನು ಒಂದು ಏಟು ಹೊಡೆದಿದ್ದೆ. ಈಗ ಗುಂಪು ಬಂದು ನನಗೆ ಸಾಯುವ ರೀತಿ ಹೊಡೆದಿದ್ದಾರೆ ಎಂದು ಗಾಯಾಳು ಪ್ರಕಾಶ್ ಹೇಳಿದ್ದಾರೆ.

ಇದನ್ನೂ ಓದಿ: Shivamogga: ಬೆಳಗ್ಗೆ ದೇವರಿಗೆ ಕೈ ಮುಗಿದು ಹೋದವನು ಹಿಂತಿರುಗಲಿಲ್ಲ: ಸಂಕೇತ್ ಪೋಷಕರ ಕಣ್ಣೀರು

Read more Photos on
click me!

Recommended Stories