ದಾವಣಗೆರೆ: ಕೇವಲ ಎರಡೂವರೆ ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ನವವಿವಾಹಿತ ಹರೀಶ್ ಆತ್ಮ*ಹತ್ಯೆ ಪ್ರಕರಣಕ್ಕೆ ಇದೀಗ ಮೇಜರ್ ಟ್ವಿಸ್ಟ್ ಸಿಕ್ಕಿದ್ದು, ಡೆತ್ ನೋಟ್‌ನಲ್ಲಿ ತಮ್ಮ ಸಾವಿಗೆ ಕಾರಣವೇನು ಎನ್ನುವುದನ್ನು ಹರೀಶ್ ಎಂಬಾತ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಮದುವೆಯಾದ ಎರಡೂವರೆ ತಿಂಗಳಲ್ಲೇ ನವ ವಿವಾಹಿತನ ಬದುಕು ಅಂತ್ಯ
ದಾವಣಗೆರೆ ತಾಲೂಕಿನ ಗುಮ್ಮನೂರು ನಿವಾಸಿ 32 ವರ್ಷದ ಹರೀಶ್ ಕಳೆದ ಎರಡೂವರೆ ತಿಂಗಳ ಹಿಂದಷ್ಟೇ ಸರಸ್ವತಿ ಎಂಬುವವರ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಆ ಸಂತೋಷ ಹೆಚ್ಚು ಸಮಯ ಉಳಿಯಲೇ ಇಲ್ಲ.
26
ಮದುವೆಯಾದ ಎರಡೂವರೆ ತಿಂಗಳಿಗೆ ನವ ವಿವಾಹಿತ ಆತ್ಮ*ಹತ್ಯೆ
ಮದುವೆಯಾಗಿ ಕೇವಲ ಎರಡೂವರೆ ತಿಂಗಳಲ್ಲೇ ಹರೀಶ್, ತಮ್ಮ ಜಮೀನಿನಲ್ಲಿ ನೇಣು ಬಿಗಿದುಕೊಂಡು ಆತ್ಮ*ಹತ್ಯೆಗೆ ಶರಣಾಗಿದ್ದರು. ಇನ್ನು ಹರೀಶ್ ಸಾವಿಗೆ ಶರಣಾಗುತ್ತಿದ್ದಂತೆಯೇ ಹರೀಶ್ ಅವರಿಗೆ ಮದುವೆ ಮಾಡಿಸಿದ್ದ ಸರಸ್ವತಿಯವರ ಸೋದರ ಮಾವ ರುದ್ರೇಶ್ ಕೂಡಾ ವಿಷ ಸೇವಿಸಿ ಆತ್ಮ*ಹತ್ಯೆ ಮಾಡಿಕೊಂಡಿದ್ದರು.
36
ಡೆತ್‌ನೋಟ್‌ನಲ್ಲಿ ಸಾವಿಗೆ ಕಾರಣ ಬಿಚ್ಚಿಟ್ಟ ಹರೀಶ್
ಇನ್ನು ಹರೀಶ್ ನೇಣು ಹಾಕಿಕೊಂಡು ಆತ್ಮ*ಹತ್ಯೆಗೆ ಶರಣಾಗುವ ಮುನ್ನ ಡೆತ್ ನೋಟ್ ಬರೆದಿಟ್ಟಿರುವುದು ಪತ್ತೆಯಾಗಿದ್ದು, ತಮ್ಮ ಸಾವಿಗೆ ಕಾರಣ ಯಾರು ಎನ್ನುವುದನ್ನು ಎಳೆಎಳೆಯಾಗಿ ವಿವರಿಸಿದ್ದಾರೆ. ಇದರ ಜತೆಗೆ ತಮ್ಮ ಅಂತ್ಯ ಸಂಸ್ಕಾರವನ್ನು ಯಾವ ರೀತಿ ಮಾಡಬೇಕು ಎನ್ನುವುದನ್ನು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಮದುವೆ ಬೆನ್ನಲ್ಲೇ ಪರ ಪುರಷನ ಜತೆ ಓಡಿ ಹೋಗಿದ್ದ ಹರೀಶ್ ಪತ್ನಿ
ಹರೀಶ್, ಸರಸ್ವತಿಯವರನ್ನು ಮದುವೆಯಾದ ಎರಡೂವರೆ ತಿಂಗಳೊಳಗಾಗಿ ಪತ್ನಿ ಪರ ಪುರುಷನ ಜತೆ ಓಡಿ ಹೋಗಿದ್ದರು. ಇದರಿಂದ ಹರೀಶ್ ಮನನೊಂದಿದ್ದರು. ಇದರ ನಡುವೆ ಹರೀಶ್ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿದ್ದಲ್ಲದೇ, ಸರಸ್ವತಿ ಅವರ ಕುಟುಂಬಸ್ಥರು ಪ್ರಾಣ ಬೆದರಿಕೆಯನ್ನೂ ಹಾಕಿದ್ದರು ಎನ್ನಲಾಗಿದೆ.
56
ಡೆತ್‌ನೋಟ್‌ನಲ್ಲಿ ಮೂವರ ಮೇಲೆ ಆರೋಪ
ಇದೀಗ ಹರೀಶ್ ತಮ್ಮ ಡೆತ್ ನೋಟ್‌ನಲ್ಲಿ ತಮ್ಮ ಸಾವಿಗೆ ಪತ್ನಿ ಸರಸ್ವತಿ, ಅತ್ತೆ, ಮಾವ ಹಾಗೂ ತಮ್ಮ ಪತ್ನಿಯನ್ನು ಕರೆದುಕೊಂಡು ಹೋದ ಯುವಕನೇ ಕಾರಣ. ಅವರೆಲ್ಲರಿಗೂ ಜೀವಾವಧಿ ಶಿಕ್ಷೆಯಾಗಬೇಕು. ನಾನು ಜೀವನದಲ್ಲಿ ತುಂಬಾ ನೊಂದಿದ್ದೇನೆ ಎಂದು ಡೆತ್‌ನೋಟ್‌ನಲ್ಲಿ ಬರೆದುಕೊಂಡಿದ್ದಾರೆ.
66
ಅಂತ್ಯ ಸಂಸ್ಕಾರದ ಬಗ್ಗೆ ಉಲ್ಲೇಖ ಮಾಡಿದ ಹರೀಶ್
ಇನ್ನು ಹರೀಶ್ ತಮ್ಮ ಅಂತ್ಯ ಸಂಸ್ಕಾರವನ್ನು ಬಸವಧರ್ಮದ ಪ್ರಕಾರವಾಗಿ ನಡೆಸುವಂತೆ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಈ ಪ್ರಕರಣ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.