ಲವ್‌ಗೋಸ್ಕರ ಮತಾಂತರ ಆಗಿ, 2 ತಿಂಗಳ ಹಸುಗೂಸಿನ ಜೊತೆ ಬೀದಿಗೆ ಬಿದ್ದ ಬ್ರಾಹ್ಮಣ ಯುವತಿ; ವಕೀಲರ ಹೇಳಿಕೆ

Published : Feb 10, 2026, 03:49 PM IST

ಮುಸ್ಲಿಂ ಹುಡುಗನಿಗೋಸ್ಕರ ಹಿಂದು ಯುವತಿಯು ಮತಾಂತರ ಆಗಿದ್ದಾಳೆ. ಕೋಲ್ಕತ್ತಾ ಮೂಲದ ಯುವತಿ ಸೃಷ್ಟಿ ತ್ರಿಪಾಠಿಯು ಬೆಂಗಳೂರಿನ ಬಿಟಿಎಂ ಲೇಔಟ್‌ನ ಹುಡುಗನನ್ನು ಪ್ರೀತಿಸಿ ಮದುವೆಯಾಗಿದ್ದಾಳೆ. ಈಗ ಬೀದಿಗೆ ಬಿದ್ದಿದ್ದಾಳೆ. 

PREV
14
ಪಶ್ಚಿಮಬಂಗಾಳದ ಹುಡುಗಿ

ಸೈಯಾದ್‌ ಇಮ್ತಿಯಾಜ್‌ ಎನ್ನುವ ಹುಡುಗನ ಜೊತೆ ಸೃಷ್ಟಿ ಮದುವೆಯಾಗಿದೆ. ಪಶ್ಚಿಮಬಂಗಾಳದ ಹುಡುಗಿ ಮದುವೆಗೋಸ್ಕರ ಜೈನಾಬ್‌ ಎಂದು ಹೆಸರನ್ನು ಬದಲಾಯಿಸಿಕೊಂಡಿದ್ದಾಳೆ.

24
ವಿಡಿಯೋ ಮಾಡಿದ್ದರು!

ಈಗ ಜೈನಾಬ್‌ ವಲೀಕರ ಮೊರೆ ಹೋಗಿದ್ದಾರೆ. ಈ ಹಿಂದೆ ಅವರು ವಿಡಿಯೋವೊಂದನ್ನು ಮಾಡಿದ್ದರು. ಅದನ್ನು ಡಿಲಿಟ್‌ ಮಾಡು ಎಂದು ಸೈಯದ್‌ ಒತ್ತಾಯ ಮಾಡುತ್ತಿದ್ದಾನಂತೆ. ಅಂದಹಾಗೆ ಸೃಷ್ಟಿ ಫೋನ್‌ ಕೂಡ ಸ್ವಿಚ್‌ ಆಫ್‌ ಆಗಿದೆ.

34
ಮನೆಯವರಿಗೆ ಯೋಚನೆ ಇಲ್ಲ

ಸೈಯದ್‌ ಮನೆಯವರು ಕೂಡ ನಮಗೆ ಮನೆ ಬೇಡ, ಮಗು ಬೇಡ, ಸೊಸೆಯೂ ಬೇಡ ಎಂದು ಹೇಳಿದ್ದಾರಂತೆ. ಆ ಹುಡುಗನ ಬಗ್ಗೆ ಕೂಡ ಅವರ ಮನೆಯವರಿಗೆ ಯೋಚನೆ ಇಲ್ಲ. ಮನೆಯೊಳಗಡೆ ಹೋಗಲು ಕೂಡ ಬಿಡುತ್ತಿಲ್ಲವಂತೆ. ಆ ಮಗುವನ್ನು ಕೂಡ ಪಾಲಕರು ಇಟ್ಟುಕೊಳ್ಳುತ್ತಿಲ್ಲ, ನನ್ನ ಬಳಿ ಹಣ ಇಲ್ಲ ಎಂದು ಆ ಹುಡುಗಿ ಅಳುತ್ತಿದ್ದಾಳೆ.

44
ವಕೀಲರು ಹೇಳಿದ್ದೇನು?

ಈ ಬಗ್ಗೆ ವಕೀಲರು ಮಾತನಾಡಿದ್ದು, ಸೃಷ್ಟಿ ತ್ರಿಪಾಠಿ ಎನ್ನುವ ಹುಡುಗಿ ನಮ್ಮ ಟೀಂಗೆ ಕೋಲ್ಕತ್ತಾದಿಂದ ಫೋನ್‌ ಮಾಡಿ ಬಂದಿದ್ದಾಳೆ. ಸೈಯದ್‌ ಇಮ್ತಿಯಾಜ್‌ ಅವರು ನನ್ನನ್ನು ಒಂದು ವರ್ಷದೊಳಗಡೆ ಪ್ರೀತಿಸಿದ್ದು, ನಮಗೆ ಎರಡು ತಿಂಗಳ ಮಗುವಿದೆ. ಆ ಹುಡುಗ ಕೋಲ್ಕತ್ತಾದಿಂದ ಓಡಿ ಬಂದಿದ್ದಾನೆ. ನಾನು ಬ್ರಾಹ್ಮಣ ಕುಟುಂಬಕ್ಕೆ ಸೇರಿದವಳು ಎಂದು ಆ ಹುಡುಗಿ ಹೇಳಿದ್ದಾಳೆ ಎಂದು ಹೇಳಿದಳು. ನಮಗೆ ನ್ಯಾಯ ಕೊಡಿಸಿ ಎಂದು ಅವಳು ಹೇಳಿದ್ದಾಳೆ ಎಂದಿದ್ದಾರೆ.

Read more Photos on
click me!

Recommended Stories