ವಿಜಯಪುರದಲ್ಲಿ, ಪ್ರೀತಿಸಿದ ಯುವಕನೊಂದಿಗೆ ತೆರಳಿದ ಮಗಳಿಗಾಗಿ ಪೋಷಕರು ಪೊಲೀಸ್ ಠಾಣೆಯ ಮುಂದೆ ಕಣ್ಣೀರು ಹಾಕಿದ್ದಾರೆ. ಮಗಳು ತಾನು ಮದುವೆಯಾಗಿದ್ದು, ಪೋಷಕರೊಂದಿಗೆ ಹಿಂತಿರುಗಲು ನಿರಾಕರಿಸಿ, ತನ್ನ ಪತಿಯೊಂದಿಗೇ ತೆರಳಿದ್ದಾಳೆ.
ಮಗಳಿಗಾಗಿ ರಾತ್ರಿಯಿಡೀ ಪೋಷಕರು ಪೊಲೀಸ್ ಠಾಣೆ ಮುಂದೆ ಕುಳಿತು ಕಣ್ಣೀರು ಹಾಕಿರುವ ಮನಕಲಕುವ ಘಟನೆ ವಿಜಯಪುರದಲ್ಲಿ ನಡೆದಿದೆ. ಪೋಷಕರು ಎಷ್ಟೇ ಕರೆದರೂ ಮಗಳು ಠಾಣೆಯಿಂದ ಹೊರಗೆ ಬರದೇ ಪ್ರೀತಿಸಿದವನೊಂದಿಗೆ ತೆರಳಿದ್ದಾಳೆ.
25
ಪೋಷಕರ ಕಣ್ಣೀರು
ವಿಜಯಪುರ ನಗರದ ಗಾಂಧಿಚೌಕ್ ಪೊಲೀಸ್ ಠಾಣೆ ಹೊರಭಾಗದಲ್ಲಿ ತಡರಾತ್ರಿವರೆಗೂ ಪೋಷಕರು ಕಣ್ಣೀರು ಹಾಕಿದ್ದಾರೆ. ತಮ್ಮೊಂದಿಗೆ ಮಗಳು ಬಾರದ ಹಿನ್ನೆಲೆ ಕಣ್ಣೀರು ಹಾಕುತ್ತಲೇ ಮನೆಗೆ ಹಿಂದಿರುಗಿದ್ದಾರೆ. ಏನಿದು ಪ್ರಕರಣ ಎಂಬುದರ ಮಾಹಿತಿ ಇಲ್ಲಿದೆ.
35
ಏನಿದು ಪ್ರಕರಣ?
ಫೆಬ್ರವರಿ 4ರಂದು ಶಾನುಭಾಯಿ ಚೌಹಾಣ್ ಮತ್ತು ಪಂಡಿತ ಚೌಹಾಣ್ ದಂಪತಿ ಮಗಳು ನಿಶಾ ಕಾಣೆಯಾಗಿದ್ದಳು. ಈ ಸಂಬಂಧ ಪೋಷಕರು ಮಗಳು ಕಾಣೆಯಾಗಿರುವ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹೀಗಾಗಿ ನಾನು ಎಲ್ಲಿಯೂ ಹೋಗಿಲ್ಲ ಎಂದು ನಿಶಾ ನಗರದ ಮಹಿಳಾ ಪೊಲೀಸ್ ಠಾಣೆಗೆ ಬಂದಿದ್ದಳು.
ಮಹಿಳಾ ಠಾಣೆಗೆ ಪ್ರಿಯಕರ ಮೊಹಮದ್ ಸಲಿಂ ಸುತಾರ್ ಜೊತೆ ಬಂದ ನಿಶಾ, ನಾವಿಬ್ಬರು ಪ್ರೀತಿಸಿ ಮದುವೆಯಾಗಿದ್ದೇವೆ. ಹಾಗಾಗಿ ನಾನು ಪೋಷಕರೊಂದಿಗೆ ಹೋಗಲ್ಲ. ಗಂಡ ಸಲೀಂ ಜೊತೆಯಲ್ಲಿಯೇ ಹೋಗುತ್ತೇನೆ ಎಂದು ಹೇಳಿದ್ದಾಳೆ. ಆದ್ದರಿಂದ ಪೊಲೀಸರು ಸಲೀಂ ಜೊತೆಯಲ್ಲಿಯೇ ನಿಶಾಳನ್ನು ಕಳುಹಿಸಿದ್ದಾರೆ.
55
ಗಂಡನೊಂದಿಗೆ ತೆರಳಿದ ನಿಶಾ
ಇನ್ನು ಮಗಳು ನಿಶಾ ಬಂದಿರುವ ವಿಷಯ ತಿಳಿಯುತ್ತಿದ್ದಂತೆ ಶಾನುಭಾಯಿ ಚೌಹಾಣ್ ಮತ್ತು ಪಂಡಿತ ಚೌಹಾಣ್ ದಂಪತಿ ಪೊಲೀಸ್ ಠಾಣೆಗೆ ದೌಡಾಯಿಸಿದ್ದರು. ತಾಯಿ ಶಾನುಬಾಯಿ ಎಷ್ಟೇ ಗೋಳಾಡಿದ್ರು ಮಗಳು ಮಾತ್ರ ಠಾಣೆಯಿಂದ ಹೊರಗೆ ಬಂದಿಲ್ಲ. ನಂತರ ಪೊಲೀಸರ ವಾಹನದಲ್ಲಿಯೇ ಗಂಡ ಸಲೀಂ ಜೊತೆ ನಿಶಾ ಹೋಗಿದ್ದಾಳೆ.