ಗಂಗಾವತಿ: ಅಂಜನಾದ್ರಿ ಬೆಟ್ಟದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಬೊಮ್ಮಾಯಿ ಭೂಮಿ ಪೂಜೆ

Published : Mar 14, 2023, 01:45 PM IST

ಗಂಗಾವತಿ(ಮಾ.14):  ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿಯಲ್ಲಿರುವ ಆಂಜನೇಯ ದೇವಸ್ಥಾನದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು(ಮಂಗಳವಾರ) ಭೂಮಿಪೂಜೆ ನೆರವೇರಿಸಿದ್ದಾರೆ. 

PREV
15
ಗಂಗಾವತಿ: ಅಂಜನಾದ್ರಿ ಬೆಟ್ಟದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಬೊಮ್ಮಾಯಿ ಭೂಮಿ ಪೂಜೆ

ಅಂಜನಾದ್ರಿಯಲ್ಲಿ ನಂತರ ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟವನ್ನ ಧಾರ್ಮಿಕ ಪ್ರವಾಸಿ ತಾಣ ಮಾಡಲಾಗುತ್ತದೆ. ಇದಕ್ಕೆ ನಮ್ಮ ಸರ್ಕಾರ ಸಾಕಷ್ಟು ಅನುದಾನವನ್ನ ಬಿಡುಗಡೆ ಮಾಡಿದ ಅಂತ ತಿಳಿಸಿದ್ದಾರೆ. 

25

35

ಬಳಿಕ ಆನೆಗೊಂದಿ ಉತ್ಸವ ಮೈದಾನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿದ್ದಾರೆ. ಅಂಜನಾದ್ರಿ ಸುತ್ತಮುತ್ತಲು ಹೋಂ ಸ್ಟೇಗೆ ಅನುಮತಿ ನೀಡುವಂತೆ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ. 

45

ಇರ್ಕಲ್ ಸುತ್ತಮುತ್ತಲಿನ ಜನರಿಗೆ ನಿವೇಶನ, ಗುಡಿಸಲು ಕಳೆದುಕೊಂಡವರಿಗೆ ಪರಿಹಾರ, ಕರಡಿ ಕಡಿತಕ್ಕೆ ಒಳಗದಾವರಿಗೆ ಪರಿಹಾರ ನೀಡಿ ಅಂತ ಮಾಜಿ ಎಂಎಲ್ಸಿ ಸಂಗಟಿ ಅವರು ಇದೇ ಸಂದರ್ಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ. 

55

ಈ ಸಂದರ್ಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಸಚಿವ ಆನಂದ ಸಿಂಗ್‌, ಸಚಿವ ಮುನಿರತ್ನ, ಹಾಲಪ್ಪ ಆಚಾರ್‌, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಸೇರಿದಂತೆ ಮತ್ತಿತರ ನಾಯಕರು ಸಾಥ್‌ ನೀಡಿದ್ದರು. 

Read more Photos on
click me!

Recommended Stories