ಉಡುಪಿ;  ವರ್ಷದಿಂದ ಕಾಟ ಕೊಡ್ತಿದ್ದ ಚಿರತೆ ಕೊನೆಗೂ ಬೋನಿಗೆ ಬಿತ್ತು

First Published | Jul 23, 2021, 11:18 PM IST

ಉಡುಪಿ(ಜು. 23)  ಇಲ್ಲಿನ ಪೆರ್ಣಂಕಿಲ ಗ್ರಾಮದ ಗುಂಡುಪಾದೆ ಎಂಬಲ್ಲಿ ಶುಕ್ರವಾರ ಮುಂಜಾನೆ ಗ್ರಾಮಸ್ಥರನ್ನು ಕಾಡುತಿದ್ದ ಚಿರತೆ ಅರಣ್ಯ ಇಲಾಖೆ ಬೋನಿನಲ್ಲಿ ಸೆರೆಯಾಗಿದೆ.

ಕಳೆದೊಂದು ವರ್ಷದಿಂದ ಈ ಚಿರತೆ ಗುಂಡುಪಾದೆ ಪ್ರದೇಶದಲ್ಲಿ ಸಂಚರಿಸುತಿದ್ದು, ಸ್ಥಳೀಯರು ಆತಂಕಗೊಂಡಿದ್ದರು.
ಊರಿನ ಕೆಲವು ಮನೆಯ ನಾಯಿಗಳನ್ನು ಕೊಂದು ತಿಂದಿದ್ದ ಚಿರತೆಯಿಂದಾಗಿ ಸ್ಥಳೀಯರು ಜನರು ಇಲ್ಲಿನ ಕಾಡಿನ ರಸ್ತೆಗಳಲ್ಲಿ ಸಂಚರಿಸುವುದಕ್ಕೆ ಹೆದರುತಿದ್ದರು.
Tap to resize

ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಲಾಗಿದ್ದು, ಜು.3ರಂದು ಅಶೋಕ್ ನಾಯ್ಕ ಎಂಬವರ ಮನೆಯ ಬಳಿ ಇಲಾಖೆಯಿಂದ ಬೋನು ಇರಿಸಲಾಗಿತ್ತು.
ಗುರುವಾರ ರಾತ್ರಿ ಚಿರತೆ ಬೋನಿನೊಳಗೆ ಬಂಧಿಯಾಗಿದೆ. ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.
ನಂತರ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಈ ಗಂಡು ಚಿರತೆಯನ್ನು ಅಲ್ಲಿಂದ ಸ್ಥಳಾಂತರಿಸಿದ್ದಾರೆ. ಪೆರ್ಣಂಕಿಲ ಗ್ರಾಮದಲ್ಲಿ ಕಳೆದ 3 ವರ್ಷಗಳಲ್ಲಿ ಸೆರೆಯಾಗುತ್ತಿರುವ 3ನೇ ಚಿರತೆ ಇದಾಗಿದೆ.

Latest Videos

click me!