ಇಂದು ಬೆಳಿಗ್ಗೆ 9 ಗಂಟೆಗೆ ತಮ್ಮ ದೆಹಲಿಯ ಕಛೇರಿ ಕೃಷಿ ಭವನಕ್ಕೆ ತೆರಳಿ ವಿಡಿಯೋ ಕಾನ್ಫೆರನ್ಸ್ ಮೂಲಕ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ.
ಮಳೆಯಿಂದಾಗಲಿರುವ ಪೃಕತಿ ವಿಕೋಪಗಳ ಕುರಿತು, ಜಿಲ್ಲೆಯಲ್ಲಿನ ಕೋವಿಡ್ ನಿರ್ವಹಣೆ, ಮೂರನೇ ಅಲೆಗೆ ಜಿಲ್ಲೆ ನಡೆಸಿರುವ ತಯಾರಿಗಳು ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳ ಕುರಿತು ಚರ್ಚಿಸಿ ಮಾಹಿತಿ ಪಡೆದ ಕೇಂದ್ರ ಸಚಿವೆ
ಕ್ಷಣ ಕ್ಷಣದ ಮಾಹಿತಿ ನೀಡುವಂತೆ ಸೂಚಿಸಿದ್ದು, ಜನರ ಕಷ್ಟ ನಷ್ಟಗಳಿಗೆ ಧಾವಿಸುವ ಸಂದರ್ಭ ಒದಗಿಬಂದರೆ ಸೂಕ್ತ ವ್ಯವಸ್ಥೆ ಹೊಂದಿಸಿಕೊಳ್ಳುವಂತೆ ಸೂಚಿಸಿರುತ್ತಾರೆ.
ದೆಹಲಿಯಿಂದಲೇ ತಮ್ಮ ಸಂಸದೀಯ ಕ್ಷೇತ್ರದ ಜನರ ಮತ್ತು ರೈತರ ಕಾಳಜಿಯ ಬಗ್ಗೆ ಕಳಕಳಿ ವ್ಯಕ್ತಪಡಿಸಿದ ಕೇಂದ್ರ ಸಚಿವೆ.
ಮಂಗಳೂರು - ಉಡುಪಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತ