ಗದಗಿನ ಲಕ್ಕುಂಡಿಯಲ್ಲಿ ಪತ್ತೆಯಾದ ನಿಧಿಯು ಸುಮಾರು 300 ವರ್ಷಗಳಷ್ಟು ಹಳೆಯದಾದ ವಿಜಯನಗರ ಕಾಲದ ಬಂಗಾರದ ಒಡವೆಗಳೆಂದು ತಿಳಿದುಬಂದಿದೆ. ಸರ್ಕಾರಕ್ಕೆ ಒಪ್ಪಿಸಿದ ರಿತ್ತಿ ಕುಟುಂಬಕ್ಕೆ ನಿವೇಶನ, ಮನೆ ಹಾಗೂ ಉದ್ಯೋಗ ನೀಡಲು ಜಿಲ್ಲಾಡಳಿತ ಮುಂದಾಗಿದೆ. ಜಿಲ್ಲಾಧಿಕಾರಿ ಕೊಟ್ಟ ಮಾಹಿತಿ ಇಲ್ಲಿದೆ ನೋಡಿ.
ಇಡೀ ರಾಜ್ಯದ ಕುತೂಹಲ ಕೆರಳಿಸಿರುವ ಲಕ್ಕುಂಡಿಯ ನಿಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಾಗಿದೆ. ಪತ್ತೆಯಾದ ಬಂಗಾರದ ಒಡವೆಗಳು ಸುಮಾರು 300 ವರ್ಷಗಳ ಹಳೆಯದಾಗಿದ್ದು, ವಿಜಯನಗರ ಸಾಮ್ರಾಜ್ಯದ ಸಮಕಾಲೀನ ಇತಿಹಾಸಕ್ಕೆ ಸಾಕ್ಷಿಯಾಗಿವೆ ಎಂದು ಗದಗ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆಗಿನ ವಿಶೇಷ ಸಂವಾದದಲ್ಲಿ ಬಹಿರಂಗಪಡಿಸಿದ್ದಾರೆ.
27
ಲಕ್ಕುಂಡಿಯ ರಿತ್ತಿ ಕುಟುಂಬದ ಮನೆಯಲ್ಲಿ ಸಿಕ್ಕ ಈ ಬಂಗಾರವನ್ನು ಪುರಾತತ್ವ ಇಲಾಖೆಯ ತಜ್ಞರ ತಂಡ ಸುಮಾರು ಮೂರು ಗಂಟೆಗಳ ಕಾಲ ಸುದೀರ್ಘವಾಗಿ ಪರಿಶೀಲಿಸಿದೆ. ಪ್ರಾಥಮಿಕ ವರದಿಯ ಪ್ರಕಾರ, ಇವು ಅಂದಿನ ಕಾಲದಲ್ಲಿ ಶ್ರೀಮಂತರು ಅಥವಾ ರಾಜಮನೆತನಕ್ಕೆ ಹತ್ತಿರವಿದ್ದವರು ಬಳಸುತ್ತಿದ್ದ ಆಭರಣಗಳಿರಬಹುದು ಎಂದು ಅಭಿಪ್ರಾಯಪಡಲಾಗಿದೆ.
37
ಇವುಗಳನ್ನು ರಾಜಮಹಾರಾಜರೇ ಬಳಸಿದ್ದು ಎಂದು ಈಗಲೇ ಖಚಿತವಾಗಿ ಹೇಳಲು ಸಾಧ್ಯವಿಲ್ಲ, ಆದರೆ ಆಗಿನ ಕಾಲದ ಉಳ್ಳವರು ಧರಿಸುತ್ತಿದ್ದ ಒಡವೆಗಳಿವು ಎನ್ನುವುದರಲ್ಲಿ ಸಂಶಯವಿಲ್ಲ' ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಜಮೀನಿನಲ್ಲಿ ಅಥವಾ ಮನೆಯ ಅಡಿಪಾಯದಲ್ಲಿ ಸಿಕ್ಕ ಚಿನ್ನವನ್ನು ಸ್ವಂತಕ್ಕೆ ಬಳಸಿಕೊಳ್ಳದೆ ಸರ್ಕಾರದ ಸುಪರ್ದಿಗೆ ನೀಡಿದ ರಿತ್ತಿ ಕುಟುಂಬದ ಪ್ರಾಮಾಣಿಕತೆಯನ್ನು ಜಿಲ್ಲಾಡಳಿತ ಕೊಂಡಾಡಿದೆ. ಈ ಕುಟುಂಬಕ್ಕೆ ಸರ್ಕಾರದಿಂದ ವಿಶೇಷ ಕೊಡುಗೆ ನೀಡಲು ಚಿಂತನೆ ನಡೆಸಲಾಗುತ್ತಿದೆ.
57
ಈಗಾಗಲೇ ಅವರು ಮನೆ ಕಟ್ಟಲು ಜಾಗ ಕೇಳಿದ್ದಾರೆ, ಅವರಿಗೆ ನಿವೇಶನ ಒದಗಿಸಿ ಮನೆ ಕಟ್ಟಿಕೊಡಲು ವ್ಯವಸ್ಥೆ ಮಾಡುತ್ತೇವೆ. ಅಲ್ಲದೆ, ಕಸ್ತೂರೆವ್ವ ಅವರಿಗೆ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನೀಡಲು ಕ್ರಮ ಕೈಗೊಳ್ಳಲಾಗುವುದು' ಎಂದು ಶ್ರೀಧರ್ ಅವರು ಭರವಸೆ ನೀಡಿದ್ದಾರೆ.
67
ಈ ನಿಧಿಯ ಬಗ್ಗೆ ಪುರಾತತ್ವ ಇಲಾಖೆ ಇನ್ನೂ ಎರಡು ಮೂರು ದಿನಗಳಲ್ಲಿ ಸ್ಪಷ್ಟವಾದ ವರದಿ ನೀಡಲಿದೆ. ಒಂದು ವೇಳೆ ಈ ಚಿನ್ನದ ಮೇಲೆ ಯಾರಾದರೂ ಹಕ್ಕು (Claim) ಮಂಡಿಸಿದರೆ ಪ್ರಕರಣದ ದಿಕ್ಕು ಬದಲಾಗಬಹುದು.
77
ಇಲ್ಲದಿದ್ದರೆ, ತಜ್ಞರ ವರದಿ ಬಂದ ಕೂಡಲೇ ಇದು ಅಧಿಕೃತವಾಗಿ 'ಸರ್ಕಾರಿ ನಿಧಿ' ಎಂದು ಘೋಷಣೆಯಾಗಲಿದೆ. ಲಕ್ಕುಂಡಿಯ ಇತಿಹಾಸಕ್ಕೆ ಈ ಚಿನ್ನದ ಒಡವೆಗಳು ಹೊಸ ಆಯಾಮ ನೀಡಲಿವೆ ಎಂಬ ನಿರೀಕ್ಷೆಯಿದೆ.