ಸಾಮಾಜಿಕ ಜಾಲತಾಣದಲ್ಲಿ ‘ಐರಾವತ’, ‘ವೇಗದೂತ’ ಸಂಚಾರ ಫುಲ್ ವೈರಲ್‌!

First Published | Sep 15, 2020, 3:03 PM IST

ಕಳೆದೊಂದು ವಾರದಿಂದ ಹೆಮ್ಮಾಡಿ ಭಾಗದಲ್ಲಿ ಕರ್ನಾಟಕ ಸಾರಿಗೆ ಸಂಸ್ಥೆಯ ಐರಾವತ ಹಾಗೂ ವೇಗದೂತ ಬಸ್‌ ಭಾರಿ ಸುದ್ದಿಯಲ್ಲಿದೆ. ಬಸ್‌ ನೋಡಿ ಖುಷಿಪಟ್ಟಈ ಭಾಗದ ಜನರು ಬಸ್‌ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಕಳೆದೊಂದು ವಾರದಿಂದ ಹೆಮ್ಮಾಡಿ ಭಾಗದಲ್ಲಿ ಕರ್ನಾಟಕ ಸಾರಿಗೆ ಸಂಸ್ಥೆಯ ಐರಾವತ ಹಾಗೂ ವೇಗದೂತ ಬಸ್‌ ಭಾರಿ ಸುದ್ದಿಯಲ್ಲಿದೆ. ಬಸ್‌ ನೋಡಿ ಖುಷಿಪಟ್ಟಈ ಭಾಗದ ಜನರು ಬಸ್‌ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.
undefined
ಟಯರ್‌, ಸ್ಟೇರಿಂಗ್‌, ಗೇರ್‌, ಹೆಡ್‌ಲೈಟ್‌, ಲಾಕ್‌ಗಳುಳ್ಳ ಬಾಗಿಲು, ಕಿಟಕಿ, ತುರ್ತು ನಿರ್ಗಮನ ಕಿಟಕಿ, ಮಿರರ್‌ ಸೇರಿದಂತೆ ಎಲ್ಲವೂ ಇವೆ. ಆದರೆ ಈ ಬಸ್‌ನಲ್ಲಿ ಪ್ರಯಾಣ ಅಸಾಧ್ಯ, ಯಾಕೆಂದರೆ ಇದು ನಿಜ ಬಸ್ಸಲ್ಲ, ಸಣ್ಣ ಗಾತ್ರದ ಆಟಿಕೆಯ ಬಸ್‌!
undefined

Latest Videos


ಕೇವಲ ಫೋಮ್‌ ಶೀಟ್‌ ಬಳಸಿ ಥೇಟು ಕರ್ನಾಟಕ ಸಾರಿಗೆ ಸಂಸ್ಥೆಯ ಐರಾವತ ಹಾಗೂ ವೇಗದೂತ ವಿನ್ಯಾಸದಲ್ಲಿ ತದ್ರೂಪಿ ಬಸ್‌ ನಿರ್ಮಿಸಿದವರು ಪ್ರಶಾಂತ ಆಚಾರ್‌. ಹೆಮ್ಮಾಡಿ ಸಮೀಪದ ಡೈರಿ ಸರ್ಕಲ್‌ನಲ್ಲಿ ಅಣ್ಣನೊಂದಿಗೆ ಓಂಕಾರ್‌ ಶೀಟ್‌ ಮೆಟಲ್‌ ವರ್ಕ್ಸ್‌ ಶಾಪ್‌ನಲ್ಲಿ ಕೆಲಸ ನಿರ್ವಹಿಸುತ್ತಿರುವ ಇವರು ಕಲಾತ್ಮಕ ವಸ್ತುಗಳನ್ನು ತಯಾರಿಸುವುದರಲ್ಲಿ ಪ್ರವೀಣರು.
undefined
ಲಾಕ್‌ಡೌನ್‌ ಅವಧಿಯಲ್ಲಿ ಮನೆಯಲ್ಲೇ ಇರುತ್ತಿದ್ದ ಪ್ರಶಾಂತ್‌ ಆಚಾರ್‌ಗೆ ಹೊಸತರ ಐಡಿಯಾ ಹೊಳೆತಾಗ ರೂಪುಗೊಂಡಿದ್ದು ಈ ಬಸ್‌ಗಳು. ಫೋಮ್‌ ಶೀಟ್‌ ತಂದು ಅದರಲ್ಲಿ ಬಸ್‌ನ ಬಾಡಿ ವಿನ್ಯಾಸ ತಯಾರಿಸಿ ತಮ್ಮ ಇನ್ನೋರ್ವ ಸಹೋದರ ಓಂಕಾರ್‌ ಕಾರ್‌ ಗ್ಯಾರೇಜ್‌ನ ಪ್ರಕಾಶ್‌ ಆಚಾರ್‌ ಅವರ ಗ್ಯಾರೇಜ್‌ನಲ್ಲಿ ಬಸ್‌ಗೆ ಪೇಟಿಂಗ್‌ ಮಾಡಿ ಥೇಟು ಐರಾವತ ಬಸ್‌ನಂತೆ ತಯಾರಿಸಿದ್ದಾರೆ.
undefined
ಐರಾವತ ಬಸ್‌ ಹೊರಗಿನ ‘ಮಗುವಿನಂತೆ ನಿದ್ರಿಸಿ’ ಚಿತ್ರ ಹಾಗೂ ಚಾಲಕ- ನಿರ್ವಾಹಕರ ಸೀಟು, ಹೆಡ್‌ಲೈಟ್‌, ಇಂಡಿಕೇಟರ್‌, ಎಮರ್ಜೆನ್ಸಿ ಎಕ್ಸಿಟ್‌ ಎಲ್ಲವನ್ನೂ ಅಚ್ಚುಕಟ್ಟಾಗಿ ತೋರಿಸಿದ್ದಾರೆ. ಕಿಟಕಿಗೆ ಪರದೆ ಹಾಕಿದ್ದರಿಂದಾಗಿ ಬಸ್‌ ಒಳಗಿನ ಚಿತ್ರಣ ಅಷ್ಟೇನು ತೋರಿಸಲು ಸಾಧ್ಯವಾಗಿಲ್ಲ.
undefined
ಇವರ ಎರಡನೇ ಪ್ರಯತ್ನ ವೇಗದೂತ ಬಸ್‌ಗೆ ನೋಡುಗರು ಫುಲ್‌ ಫಿದಾ ಆಗಿದ್ದಾರೆ. ಬಸ್‌ನೊಳಗೆ ಲೈಟ್‌, ಹೆಡ್‌ಲೈಟ್‌, ಬ್ರೇಕ್‌ ಲೈಟ್‌ ಎಲ್ಲವೂ ಇದ್ದು ರಾತ್ರಿಯ ಹೊತ್ತು ಈ ಎಲ್ಲಾ ವ್ಯವಸ್ಥೆಗಳು ಇನ್ನಷ್ಟುಅಂದವನ್ನು ಹೆಚ್ಚಿಸುತ್ತಿದೆ. ಒಂದು ಬಸ್‌ ತಯಾರಿಕೆಗೆ ವೆಚ್ಚ ಬರೋಬ್ಬರಿ 8-10 ಸಾವಿರ ತಗಲುತ್ತದೆ.
undefined
ಇನ್ನೊಂದು ವರ್ಷದೊಳಗೆ ಹೈಟೆಕ್‌ ಬಸ್‌ ನಿಲ್ದಾಣ: ಪ್ರಶಾಂತ್‌ಗೆ ಮೊದಲಿಂದಲೂ ಸರ್ಕಾರಿ ಬಸ್‌ ಮೇಲೆ ತುಂಬಾ ಅಭಿಮಾನ. ಇದೀಗ ಇನ್ನೆರಡು ಬಸ್‌ಗಳನ್ನು ಯಾರಿಸಲು ಮುಂದಾಗಿದ್ದಾರೆ.
undefined
ದಕ್ಕಾಗಿಯೇ ಇದೀಗ ದಿನಕ್ಕೆ ಸ್ವಲ್ಪ ಹೊತ್ತು ಬಿಡುವು ಮಾಡಿಕೊಳ್ಳುತ್ತಿರುವ ಪ್ರಶಾಂತ್‌ ಆಚಾರ್‌ ವಾಯುವ್ಯ ಕರ್ನಾಟಕ ಸಾರಿಗೆ ಹಾಗೂ ಈಶಾನ್ಯ ಕರ್ನಾಟಕ ಸಾರಿಗೆ ಈ ಎರಡು ಮಾದರಿಯ ಬಸ್‌ಗಳನ್ನು ತಯಾರಿಸುವ ತಯಾರಿಯಲ್ಲಿ ನಿರತರಾಗಿದ್ದಾರೆ.
undefined
ಎಲ್ಲಾ ಬಸ್‌ಗಳನ್ನು ಸಂಗ್ರಹಿಸಿ ತಮ್ಮ ಕನಸಿನ ಕುಂದಾಪುರದ ಹೈಟೆಕ್‌ ಸರ್ಕಾರಿ ಬಸ್‌ ನಿಲ್ದಾಣವನ್ನು ರಚಿಸುವ ತಯಾರಿಯಲ್ಲಿದ್ದು, ಇನ್ನೊಂದು ವರ್ಷದೊಳಗೆ ತಮ್ಮ ಕನಸಿನ ಕುಂದಾಪುರ ಬಸ್‌ ನಿಲ್ದಾಣವನ್ನು ತಮ್ಮದೇ ಕಲ್ಪನೆಯಲ್ಲಿ ರಚಿಸಲಿದ್ದಾರೆ.
undefined
ಸೋಲಾರ್‌ ಬಸ್‌: ಪ್ರಶಾಂತ್‌ ಆಚಾರ್‌ ರಾಜ್ಯ ಸಾರಿಗೆ ಸಚಿವರಿಗಾಗಿಯೇ ವಿಶೇಷ ಬಸ್‌ ತಯಾರಿಸುತ್ತಿದ್ದಾರೆ. ಬಸ್‌ ಮೇಲೆ ಸೋಲಾರ್‌ ಪ್ಯಾನೆಲ್‌ ಅಳವಡಿಸಿ ಚಲನೆಯೊಂದನ್ನು ಬಿಟ್ಟು ಉಳಿದೆಲ್ಲಾ ಲೈಟ್‌ ವ್ಯವಸ್ಥೆಗಳು ಸೋಲಾರ್‌ನಿಂದಲೇ ಉರಿಯುವಂತೆ ಮಾಡು ಯೋಚನೆ ಇದೆ.
undefined
ಸಾರಿಗೆ ಸಚಿವರು ಸಮಯ ನೀಡಿದರೆ ಅವರನ್ನೇ ನೇರವಾಗಿ ಭೇಟಿಯಾಗಿ ಆ ಬಸ್‌ ಅನ್ನು ಉಡುಗೊರೆಯಾಗಿ ಕೊಡಲು ಪ್ರಶಾಂತ್‌ ಆಚಾರ್‌ ‘ಕನ್ನಡಪ್ರಭ’ದೊಂದಿಗೆ ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ.
undefined
click me!