ಚಿಟ್ಟೆಗೂ ‘ರಾಷ್ಟ್ರೀಯ’ ಮಾನ್ಯತೆ - ಏಳು ಚಿಟ್ಟೆಗಳು ಅಂತಿಮ ಸುತ್ತಿನಲ್ಲಿ

Kannadaprabha News   | Asianet News
Published : Sep 15, 2020, 12:53 PM IST

ಆಬಾಲವೃದ್ಧರನ್ನು ಆಕರ್ಷಿಸುವ ಚಿಟ್ಟೆಗಳಿಗಿನ್ನು ರಾಷ್ಟ್ರೀಯ ಮಾನ್ಯತೆ ದೊರಕಿಸಿಕೊಡುವ ಪ್ರಕ್ರಿಯೆ ಜಾರಿಯಲ್ಲಿದ್ದು, ಶೀಘ್ರದಲ್ಲೇ ರಾಷ್ಟ್ರೀಯ ಚಿಟ್ಟೆ ನಾಮಾಂಕಿತಗೊಳ್ಳಲಿದೆ. ಈಗಾಗಲೇ ಪ್ರಾಣಿ, ಪಕ್ಷಿ, ಹಣ್ಣು ಹೂವು, ಮರ ಎಲ್ಲವುಗಳಿಗೂ ರಾಷ್ಟ್ರೀಯ ಮಾನ್ಯತೆಯಿದೆ. ಆದರೆ ಚಿಟ್ಟೆಗಳಿಗೇಕೆ ಈ ಮಾನ್ಯತೆಯಿಲ್ಲ ಎಂಬ ಚಿಂತನೆ ದೇಶದ ಚಿಟ್ಟೆಪ್ರಿಯರಲ್ಲಿ ಹುಟ್ಟಿದ್ದೆ ಈ ಪ್ರಕ್ರಿಯೆ ಪ್ರಾರಂಭಕ್ಕೆ ಕಾರಣವಾಯ್ತು. ಈಗಾಗಲೆ ಚಿಟ್ಟೆಸಂರಕ್ಷಕರು ಹಲವು ಸಭೆ ನಡೆಸಿ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ.

PREV
110
ಚಿಟ್ಟೆಗೂ  ‘ರಾಷ್ಟ್ರೀಯ’ ಮಾನ್ಯತೆ - ಏಳು ಚಿಟ್ಟೆಗಳು ಅಂತಿಮ ಸುತ್ತಿನಲ್ಲಿ

ಆಬಾಲವೃದ್ಧರನ್ನು ಆಕರ್ಷಿಸುವ ಚಿಟ್ಟೆಗಳಿಗಿನ್ನು ರಾಷ್ಟ್ರೀಯ ಮಾನ್ಯತೆ ದೊರಕಿಸಿಕೊಡುವ ಪ್ರಕ್ರಿಯೆ ಜಾರಿಯಲ್ಲಿದ್ದು, ಶೀಘ್ರದಲ್ಲೇ ರಾಷ್ಟ್ರೀಯ ಚಿಟ್ಟೆ ನಾಮಾಂಕಿತಗೊಳ್ಳಲಿದೆ.

210

ಈಗಾಗಲೇ ಪ್ರಾಣಿ, ಪಕ್ಷಿ, ಹಣ್ಣು ಹೂವು, ಮರ ಎಲ್ಲವುಗಳಿಗೂ ರಾಷ್ಟ್ರೀಯ ಮಾನ್ಯತೆಯಿದೆ. ಆದರೆ ಚಿಟ್ಟೆಗಳಿಗೇಕೆ ಈ ಮಾನ್ಯತೆಯಿಲ್ಲ ಎಂಬ ಚಿಂತನೆ ದೇಶದ ಚಿಟ್ಟೆಪ್ರಿಯರಲ್ಲಿ ಹುಟ್ಟಿದ್ದೆ ಈ ಪ್ರಕ್ರಿಯೆ ಪ್ರಾರಂಭಕ್ಕೆ ಕಾರಣವಾಯ್ತು. ಈಗಾಗಲೆ ಚಿಟ್ಟೆಸಂರಕ್ಷಕರು ಹಲವು ಸಭೆ ನಡೆಸಿ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ.

310

ಈಗಾಗಲೆ ದೇಶದ ಪ್ರಮುಖ ಚಿಟ್ಟೆಗಳಲ್ಲಿ 50 ಚಿಟ್ಟೆಗಳನ್ನು ನ್ಯಾಶನಲ್‌ ಬಟರ್‌ ಫ್ಲೈ ಕ್ಯಾಂಪೇನ್‌ನಲ್ಲಿ ಗುರುತಿಸಲಾಗಿದೆ. ಅದರಲ್ಲಿ 7 ಅಂತಿಮ ಸುತ್ತಿಗೆ ಈಗಾಗಲೇ ಆಯ್ಕೆ ಮಾಡಲಾಗಿದೆ. ಆಕರ್ಷಕ ಬಣ್ಣ, ಹೆಚ್ಚು ಪ್ರದೇಶಗಳಲ್ಲಿ ಲಭ್ಯತೆ ಅವುಗಳ ಗುಣಧರ್ಮವನ್ನಾಧರಿಸಿ ಈ ಆಯ್ಕೆ ನಡೆಸಲಾಗಿದೆ. ಅಂತಿಮ ಸುತ್ತಿಗಾಗಿ ಸೆ. 11 ರಿಂದ ಸಾಮಾಜಿಕ ಜಾಲತಾಣಗಳಲ್ಲಿ ಆಯ್ಕೆ ಪ್ರಕ್ರಿಯೆ ಆರಂಭವಾಗಿದ್ದು, ಅ. 8ರ ವರೆಗೆ ನಡೆಯಲಿದೆ.

410

ಸಾರ್ವಜನಿಕರು, ಚಿಟ್ಟೆಪ್ರಿಯರು ಪಾಲ್ಗೊಂಡು ಆಯ್ಕೆ ಪ್ರಕ್ರಿಯೆಯಲ್ಲಿ ತಮ್ಮ ಆಯ್ಕೆಯ ಚಿಟ್ಟೆಯಾವುದು ಎಂದು ಶಿಫಾರಸು ಮಾಡಬಹುದಾಗಿದೆ. ಹೀಗೆ ಆಯ್ಕೆಗೊಂಡ ಚಿಟ್ಟೆಹೆಸರನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವರು. ಬಳಿಕ ಕೇಂದ್ರದಿಂದ ‘ರಾಷ್ಟ್ರೀಯ ಚಿಟ್ಟೆ’ಯ ಘೋಷಣೆ ಆಗಲಿದೆ.

510

ದೇಶದ ವಿವಿಧ ರಾಜ್ಯಗಳಲ್ಲಿ ಕಂಡುಬರುವ ಏಳು ಚಿಟ್ಟೆಗಳು ಈಗಾಗಲೇ ಅಂತಿಮ ಸುತ್ತಿನಲ್ಲಿವೆ.

ಫೈವ್‌ ಬಾರ್‌ ಸ್ವಾರ್ಡ್‌ ಟೇಲ್‌ 
ಕೃಷ್ಣ ಪಿಕಾಕ್‌: ತುಂಬಾ ಸುಂದರ 
ಕಾಮನ್‌ ಜೆಝೆಬೆಲ್‌ 
ಆರೆಂಜ್‌ ಓಕ್‌ ಲೀಫ್ 
 ಕಾಮನ್‌ ನವಾಬ್ 
ಎಲ್ಲೋ ಗಾರ್ಗನ್ 
 ನಾರ್ತನ್‌ ಜಂಗಲ್‌ ಕ್ವೀನ್ 

610

ಈಗಾಗಲೇ ‘ಸೌದರ್ನ್‌ ಬರ್ಡ್‌ ವಿಂಗ್‌’ ಕರ್ನಾಟಕ ರಾಜ್ಯ ಚಿಟ್ಟೆಎಂದು ಗುರುತಿಸಲ್ಪಟ್ಟಿದೆ. 2018 ರಲ್ಲಿ ರಾಜ್ಯ ಸರ್ಕಾರ ಈ ಮಾನ್ಯತೆ ನೀಡಿದೆ.

710

ಐದು ರಾಜ್ಯಗಳಲ್ಲಿ ಚಿಟ್ಟೆಗೆ ಮಾನ್ಯತೆ: ದೇಶದ ಐದು ರಾಜ್ಯಗಳಲ್ಲಿ ಚಿಟ್ಟೆಗಳಿಗೆ ಅಧಿಕೃತ ಮಾನ್ಯತೆ ನೀಡಲಾಗಿದೆ. 2015 ಮಹಾರಾಷ್ಟ್ರ ಮೊಟ್ಟಮೊದಲು ಬ್ಲೂ ಮರಮೊನ್‌ ಹೆಸರಿನ ಚಿಟ್ಟೆಯನ್ನು ರಾಜ್ಯದ ಚಿಟ್ಟೆಎಂದು ಘೋಷಿಸಿತು. 

810

ಉತ್ತರಾಖಂಡ ಕಾಮನ್‌ ಪಿಕಾಕ್‌ ಚಿಟ್ಟೆಯನ್ನು ರಾಜ್ಯದ ಚಿಟ್ಟೆಮಾನ್ಯತೆ ನೀಡಿತು. ಬಳಿಕ ಕರ್ನಾಟಕ ಸೌದರ್ನ್‌ ಬರ್ಡ್‌ ವಿಂಗ್‌ ಅನ್ನು, ಕೇರಳ ಮಲಬಾರ್‌ ಬ್ರ್ಯಾಂಡ್‌ ಪಿಕಾಕ್‌ ಅನ್ನು, ತಮಿಳುನಾಡು ತಮಿಳ್‌ ಯಮನ್‌ ಚಿಟ್ಟೆಯನ್ನು ರಾಜ್ಯದ ಚಿಟ್ಟೆಎಂದು ಮಾನ್ಯತೆ ನೀಡಿವೆ.

910

ಎರಡು ಇಂಚು ಗಾತ್ರದ ಪೇಂಟೆಂಡ್‌ ಲೇಡಿ ಎಂಬ ಹೆಸರಿನ ಚಿಟ್ಟೆಒಮ್ಮೆಗೆ 4000 ಕಿ.ಮೀ. ಹಾರಬಲ್ಲವು. ಈ ಚಿಟ್ಟೆ14,000 ಕಿ.ಮೀ. ವರೆಗೆ ವಲಸೆ ಹೋಗುತ್ತವೆ ಎಂದು ಇತ್ತೀಚಿನ ಅಧ್ಯಯನ ತಿಳಿಸಿದೆ. ಜಗತ್ತಿನಾದ್ಯಂತ ಸುಮಾರು 18000 ವಿವಿಧ ಜಾತಿಯ ಚಿಟ್ಟೆಗಳನ್ನು ಗುರುತಿಸಲಾಗಿದೆ

1010

ಭಾರತದಲ್ಲೆ 1200 ಬಗೆಯ ಚಿಟ್ಟೆಗಳಿವೆ. ಕೇವಲ ಪಶ್ಚಿಮ ಘಟ್ಟಗಳಲ್ಲಿ 339 ಬಗೆಯ ಚಿಟ್ಟೆಗಳನ್ನು ಗುರುತಿಸಲಾಗಿದೆ.

click me!

Recommended Stories