ಕೊರೋನಾ ಭೀತಿಯ ನಡುವೆ ಕೊನೆಯ SSLC ಪರೀಕ್ಷೆ ಬರೆದು ಮನೆ ಸೇರಬೇಕು ಎಂದು ಬಸ್‌ನಲ್ಲಿ ಹೊರಟಿದ್ದ ವಿದ್ಯಾರ್ಥಿಗಳಿಗೆ ಬೆಳ್ಳಂಬೆಳಗ್ಗೆಯೇ ಆಘಾತವೊಂದು ಎದುರಾಗಿತ್ತು. ರಾತ್ರಿ ಸುರಿದ ಗಾಳಿ ಮಳೆಯಿಂದಾಗಿ ಬೃಹತ್ ಮರವೊಂದು ರಸ್ತೆಗೆ ಅಡ್ಡವಾಗಿ ಬಿದ್ದಿತ್ತು. ಈ ಕ್ಷಣ ನೋಡಿ ವಿದ್ಯಾರ್ಥಿಗಳು ಕಂಗಾಲಾಗಿ ಹೋಗಿದ್ದಾರೆ. ಒಂದು ಕಡೆ ಸಮಯ ಜಾರುತ್ತಿದೆ, ಮತ್ತೊಂದೆಡೆ ಬಸ್ ಮುಂದೆ ಹೋಗಲಾರದೇ ನಿಂತಿದೆ. ಈ ವೇಳೆ ಸಮಯ ವ್ಯರ್ಥ ಮಾಡದೇ KSRTC ಬಸ್ ಡ್ರೈವರ್ ಹಾಗೂ ಕಂಡಕ್ಟರ್ ಸಾಕಷ್ಟು ಪ್ರಯಾಸಪಟ್ಟು ರಸ್ತೆ ತೆರವು ಮಾಡಿದ್ದಾರೆ. ಬಳಿಕ ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕರ್ತವ್ಯ ಪ್ರಜ್ಞೆ ಹಾಗೂ ಸಮಯ ಪ್ರಜ್ಞೆ ಸಿಬ್ಬಂದಿಗೆ ಸುವರ್ಣ ನ್ಯೂಸ್.ಕಾಂ ವತಿಯಿಂದ ಬಿಗ್ ಸಲ್ಯೂಟ್.