ಲಾಕ್‌ಡೌನ್‌: ಹಸಿದವರ ಹೊಟ್ಟೆ ತುಂಬಿಸುತ್ತಿರುವ ಕೊಟ್ಟೂ​ರು​ಸ್ವಾಮಿ ಮಠ​..!

First Published | May 11, 2020, 9:40 AM IST

ಹೊಸಪೇಟೆ(ಮೇ.11): ಲಾಕ್‌ಡೌನ್‌ನಿಂದ ಸಂಕಷ್ಟಕ್ಕೀಡಾದ ಬಡವರಿಗೆ ನಗರದ ಕೊಟ್ಟೂರುಸ್ವಾಮಿ ಸಂಸ್ಥಾನಮಠದ ವತಿಯಿಂದ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳು ತಲಾ ಒಬ್ಬೊಬ್ಬರಿಗೆ 20 ಕೆಜಿ ಅಕ್ಕಿ, 3ಕೆಜಿ ಬೇಳೆ ಕಿಟ್‌ಗಳನ್ನು ವಿತರಿಸಿದ್ದಾರೆ. 

ಶ್ರೀಮಠದಿಂದ 42 ದಿನಗಳಿಂದ ನಿರಂತರವಾಗಿ ಪ್ರತಿದಿನ ಆಹಾರ ವಿತರಣೆ
ಮುಕ್ತಿ ಆಶ್ರಮದ ನಿರಾಶ್ರಿತರಿಗೆ, ಸರ್ಕಾರಿ ನೂರು ಹಾಸಿಗೆ ಆಸ್ಪತ್ರೆಗೆ ಬಂದ ರೋಗಿಗಳಿಗೆ ಮತ್ತು ಅವರ ಸಂಬಂಧಿ​ಗಳಿಗೆ, ಪಶು ಆಸ್ಪತ್ರೆಯ ಹತ್ತಿರದ ನಿರಾಶ್ರಿತರಿಗೆ ಮತ್ತು ರಸ್ತೆಯ ಮೇಲೆ ಇರುವ ಬಡವ, ಭಿಕ್ಷುಕರಿಗೆ ಆಹಾರ ವಿತರಣೆ
Tap to resize

ಆಹಾರದ ಅಗತ್ಯ ಇರುವವರಿಗೆ ಪಲಾವ್‌, ಚಿತ್ರಾನ್ನ, ಪುಳಿಯೊಗರೆಯನ್ನ ಆಹಾರ ಪೊಟ್ಟಣದಲ್ಲಿ ಸಿದ್ಧಪಡಿಸಿ ಶ್ರೀಮಠದಿಂದ ವಿತರಣೆ
ಪ್ರಸಾದ ವಿತರಣೆಯು ಲಾಕ್‌ಡೌನ್‌ ಮುಗಿಯುವವರೆಗೂ ಮುಂದುವರೆಯುತ್ತದೆ ಎಂದು ತಿಳಿಸಿದ ಮಠದ ಅಧಿಕಾರಿಗಳು

Latest Videos

click me!