ಬಸವನಬಾಗೇವಾಡಿಯ ಹೊಲದಲ್ಲಿ ಬಿದ್ದ ಇಸ್ರೋ ಪ್ಯಾರಾಚೂಟ್‌..!

Kannadaprabha News   | Asianet News
Published : Jul 03, 2021, 10:28 AM IST

ಬಸವನಬಾಗೇವಾಡಿ(ಜು.03): ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಕಾನ್ನಾಳ ಗ್ರಾಮದ ಚಂದಪ್ಪ ಈರಪ್ಪ ಕುಂಬಾರ ಎಂಬುವರ ಹೊಲದಲ್ಲಿ ಇಸ್ರೋಗೆ ಸೇರಿದ ಗುರುವಾರ ಬಿಡಿ ಬಿಡಿಯಾಗಿರುವ ಪ್ಯಾರಾಚೂಟ್‌ನ ಭಾಗಗಳು ದೊರೆತಿವೆ. 

PREV
14
ಬಸವನಬಾಗೇವಾಡಿಯ ಹೊಲದಲ್ಲಿ ಬಿದ್ದ ಇಸ್ರೋ ಪ್ಯಾರಾಚೂಟ್‌..!

ಹವಾಮಾನ ಕುರಿತಾಗಿ ಮಾಹಿತಿ ಪಡೆಯಲು ಈ ರೀತಿಯಾಗಿ ಸಣ್ಣ ಸಣ್ಣ ಪ್ಯಾರಾಚೂಟ್‌ಗಳನ್ನು ಉಡಾವಣೆ ಮಾಡಿರುತ್ತಾರೆ. ಹೀಗಾಗಿ ಹವಾಮಾನ ಕುರಿತಾದ ಪ್ಯಾರಾಚೂಟ್‌ ಇದಾಗಿರಬಹುದು ಎಂದು ಅಂದಾಜಿಸಲಾಗಿದೆ.

24

ಒಂದು ವೇಳೆ ಯಾರಿಗಾದರೂ ಪ್ಯಾರಾಚೂಟ್‌ ದೊರೆತಲ್ಲಿ ಇಸ್ರೋ ತೆಲಂಗಾಣದ ವಿಳಾಸ ನೀಡಿದ್ದು, ಅಲ್ಲಿಗೆ ವಾಪಸ್‌ ನೀಡುವಂತೆ ಕೋರಿರುವ ಮನವಿ ಕೂಡ ಇದರಲ್ಲಿದೆ.  

34

ಮೊದಲು ಇದನ್ನು ತಕ್ಷಣ ಅಲ್ಲಿಯೇ ಇರುವ ಸಂಬಂಧಪಟ್ಟ ಪೊಲೀಸ್‌ ಠಾಣೆಗೆ ಒಪ್ಪಿಸಿ, ಅಲ್ಲಿಂದ ಇಸ್ರೋ ಈ ಸಾಧನದಲ್ಲಿ ನೀಡಿದ್ದ ವಿಳಾಸಕ್ಕೆ ಕಳಿಸುವಂತೆ ಕೋರಿತ್ತು. ಈ ಹಿನ್ನೆಲೆಯಲ್ಲಿ ಹೊಲದ ಮಾಲೀಕರು ಪೊಲೀಸರಿಗೆ ಒಪ್ಪಿಸಿದ್ದಾರೆ.

44

ಪ್ಯಾರಾಚೂಟ್‌ನಲ್ಲಿರುವ ಮೊಬೈಲ್‌ ನಂಬರ್‌ಗೆ ಕರೆ ಮಾಡಿದಾಗ ಅದನ್ನು ಕೋರಿಯರ್‌ ಮೂಲಕ ತಮಗೆ ಕಳುಹಿಸುವಂತೆ ಅವರು ಕೋರಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

click me!

Recommended Stories