ಬೆಂಗಳೂರು ಗ್ರೀನ್ ವಾರಿಯರ್ಸ್ ತಂಡದ ವತಿಯಿಂದ ಸರ್ಕಾರಿ ಜಮೀನಿನಲ್ಲಿ ಸುಮಾರು ನಾಲ್ಕು ನೂರು ಜನ ಸ್ಥಳೀಯರು ತಲಾ ಒಂದೊಂದರಂತೆ ನಾಲ್ಕು ನೂರು ಗಿಡಗಳನ್ನು ನೆಟ್ಟು ನೀರು ಹಾಕಿ ಖುಷಿಯಿಂದ ಮನೆಗೆ ಹೋದರು.
ಬೆಂಗಳೂರು (ಜೂ.09): ವಿಶ್ವ ಪರಿಸರ ದಿನಾಚರಣೆ ಅಂಗವಾಗಿ (8-6-2024) ಬೆಂಗಳೂರಿನ ಹೆಮ್ಮಿಗೆಪುರದಲ್ಲಿ ಬೆಂಗಳೂರು ಗ್ರೀನ್ ವಾರಿಯರ್ಸ್ ತಂಡದ ವತಿಯಿಂದ ಗಿಡನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
25
ಸರ್ಕಾರಿ ಜಮೀನಿನಲ್ಲಿ ಸುಮಾರು ನಾಲ್ಕು ನೂರು ಜನ ಸ್ಥಳೀಯರು ತಲಾ ಒಂದೊಂದರಂತೆ ನಾಲ್ಕು ನೂರು ಗಿಡಗಳನ್ನು ನೆಟ್ಟು ನೀರು ಹಾಕಿ ಖುಷಿಯಿಂದ ಮನೆಗೆ ಹೋದರು.
35
ನಂತರ ಸ್ಥಳಕ್ಕೆ ಆಗಮಿಸಿದ ಕೆಲವು ಭೂಗಳ್ಳರ ಕಡೆಯ ಗೂಂಡಾಗಳು ನಾಲ್ಕು ನೂರು ಗಿಡಗಳ ಮಾರಣಹೋಮ ನಡೆಸಿ ಅಮಾನವೀಯತೆ ಮೆರೆದಿದ್ದಾರೆ. ಇದು ನಿವಾಸಿಗಳ ಪಾಲಿಗೆ ಭಯ ಹುಟ್ಟಿಸುವ ಪ್ರಯತ್ನವಾಗಿದ್ದು ಗಿಡಗಳ ಮೇಲೆ ಅಮಾನವೀಯತೆ ತೋರಿಸಿರುವವರ ವಿರುದ್ಧ ಹೋರಾಡಲು ನಿರ್ಧರಿಸಿದರು.
45
ಗಿಡಗಳನ್ನು ಕಿತ್ತು ಬೀದಿಗೆ ಎಸೆಯುತ್ತಿರುವ ದೃಶ್ಯವನ್ನು ನಿವಾಸಿಗಳು ಸೆರೆ ಹಿಡಿದಿದ್ದು ಎಂಥವರಿಗೂ ಕರುಳು ಹಿಂಡುವ ದೃಶ್ಯಗಳಾಗಿವೆ. ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಮಾಫಿಯಾ ಹಗಲು ದರೋಡೆಯಂತೆ ನಡೆಯುತ್ತಿರುವುದಕ್ಕೆ ಇದು ಕೈಗನ್ನಡಿಯಾಗಿದೆ.
55
ಇದರ ಹಿಂದೆ ಇರುವ ರಿಯಲ್ ಎಸ್ಟೇಟ್ ಮಾಫಿಯ ವಿರುದ್ಧ ಹಾಗೂ ಗಿಡಗಳ ಮೇಲೆ ಅಮಾನವೀಯತೆ ತೋರಿಸಿರುವವರ ವಿರುದ್ಧ ಹೋರಾಡಲು ನಿವಾಸಿಗಳು ಸಂಕಲ್ಪ ಮಾಡಿದ್ದಾರೆ.